ಶನಿವಾರ, ಮೇ 8, 2010

ಬಿಚ್ಚು, ಬಿಚ್ಚಿ ತೋರಿಸು ಎಲ್ಲಾ

ಬಿಚ್ಚು, ಬಿಚ್ಚಿ ತೋರಿಸು ಎಲ್ಲಾ
ಕೆ. ಆರ್. ಎಸ್. ಮೂರ್ತಿ

ಬಿಚ್ಚು, ಬಿಚ್ಚು, ಬೇಗ, ಬೇಗ ಬಿಚ್ಚು
ಬಿಚ್ಚೆಲೆ ಬಿಚ್ಚು, ಸಕಲವನೂ ಬಿಚ್ಚು

ಬಿಚ್ಚಿ ತೋರಿಸು ಇಡೀ ಲೋಕವೇ ನೋಡಲಿ
ಒಳಗಿರುವುದೆಲ್ಲಾ ಬಿಚ್ಚಿ, ಬಿಡಿಸಿ ಕಾಣಲಿ

ಬಿಚ್ಚಿ ಮೆಚ್ಚಿಸು ಜನರ, ನಿನ್ನ ಬಿಚ್ಚಿದ ಮನವ
ಮುಚ್ಚಿಕೊಳ್ಳುವುದೇಕೆ, ಕಿಂಚಿತ್ತೂ ವಂಚಿಸುವ

ಬಿಚ್ಚಿ ಹಂಚಿದಮೇಲೆ ಹೆಚ್ಚು ಆಗುವುದು ನಂಬಿಕೆ
ಅಚ್ಚು ಮೆಚ್ಚು ನೀನಾಗಿ ಬಿಡುವೆ ಭೂಲೋಕದ ಜನಕೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ