ಭಾನುವಾರ, ಮೇ 9, 2010

ಮಧುಚಂದ್ರ ಯಾನದ ಆಹ್ವಾನ

ಮಧುಚಂದ್ರ ಯಾನದ ಆಹ್ವಾನ
ಕೆ. ಆರ್. ಎಸ್. ಮೂರ್ತಿ

ಇಂದ್ರಲೋಕದ ಪಯಣಕ್ಕೆ ಪುಷ್ಪಕ ವಿಮಾನವು ಹೊರಡಲಿದೆ
ಮಧುಚಂದ್ರ ಮಂಚಕ್ಕೆ ಸಕಲ ಕುಸುಮ ಪನ್ನೀರು ಸಿಂಚಿಸಿದೆ

ಚಿನ್ನದ ರೆಕ್ಕೆಯ ಬಿಳಿ ಕುದುರೆಗೆ ಕಟ್ಟಿ ಮುತ್ತು ರತ್ನದ ಕಡಿವಾಣ
ಮಧುಭರಿತ ಅತ್ರಿರಸದ ಬೆಳ್ಳಿಯ ಬಟ್ಟಲು ತುಟಿಯಿಂದ ಹೀರೋಣ

ಸಂಜೆ ಹೂಡಿದ ಕಾಮನ ಬಿಲ್ಲು ಮುಂಜಾನೆ ಮೀರಿದರೂ ಬಿಗಿಯಿದೆ
ಮದನ ಬಾಣಗಳೆಲ್ಲ ರತಿರಾಸದಾಟಕ್ಕೆ ಬತ್ತಳಿಕೆಯ ತುಂಬಿ ಕಾದಿದೆ

ಗುರಿಯಿಟ್ಟು ಸೆಟೆದ ಧನುಸ್ಸನು ಬಿಟ್ಟ ಬಾಣಗಳೆಲ್ಲ ರತಿಯತ್ತ ಧಾವಿಸಿ
ಬಿಸಿ ಬಿಸಿಯಾದ ಕ್ಷೀರಾಸ್ತ್ರ ಪಾಯಸದ ಅಭಿಷೇಕ ಜಾವ ಜಾವಕೂ ಸುರಿಸಿ

ರಂಭೆ ರತಿ ಸಂತಸದ ಉನ್ಮತ್ತದಲಿ ಉದ್ಗಾರದ ಕೇಕೆಯ ರಾಗವ ಹಾಡುವಳು
ಮಂದರ ಸ್ಥಾಯಿಯಲೊಮ್ಮೆ ಅಲಾಪಿಸಿ, ತಾರದಲಿ, ಅತಿ ತಾರದಲಿ ಕೂಗುವಳು

ತಡವೇಕೆ ಎನ್ನೊಲವೆ? ಬಾಬೇಗ, ನಡೆ ಈಗಲೇ, ಇಡು ನಿನ್ನ ಬಲ ಪಾದ ಇತ್ತ
ತೊಡೆಯ ಕೊಡು ನಾ ನಿನ್ನ ಹತ್ತಿಸುವೆ ತುರಗ ಸವಾರಿಯ ಮಾಡಿಸುವೆ ಕುಣಿಸುತ್ತ

ಕುದುರೆಯೋಟದ ಗತಿಯ ರತಿ ನೀನು ಸಾವಧಾನದಿಂದ, ಅತಿ ವೇಗಕ್ಕೆ ಮನಸಾರೆ
ನಡೆಸು, ಓಡಿಸು, ನಿನ್ನ ಕೋಮಲ ಕೈಗಳ ಛಾವಟಿಯಿಂದ ಛೇಢಿಸುತ ಬಲುಸಾರಿ

ಮಧುಚಂದ್ರ ಯಾನದಲಿ ಅವಸರವು ಇಲ್ಲವೇ ಇಲ್ಲ; ಸುತ್ತಿ ಇಂದ್ರನರಮನೆಯನು
ಒಂದೇಕೆ, ಎರಡೇಕೆ, ನೂರೆಂಟು ಬಾರಿ ಹಾಕಿಸು ಸುತ್ತಿ, ಸುತ್ತುತ್ತ ಪ್ರದಕ್ಷಿಣೆಯನು

ಆತುರದ ತುರಗವಲ್ಲವೇ ಗಂಟೆಗಟ್ಟಲೆ ಮೆಟ್ಟುವ ಮಾಂಸ ಖಂಡದ ಕುದುರೆ ನಾನು
ನಿನಗೆಂದೇ ಬೆಳೆಸಿ ಪಾಲಿಸಿ ಕಾದ ಕುದುರೆಯಿದು ಪುಷ್ಟಿಯಿಂದಲಿ ತಿಂದು ಹಾಲು ಜೇನು

ತುಟಿಯಿತ್ತ ತಾ, ತುಟಿಯತ್ತ ತಾ, ಕಟಿಯಿತ್ತ ಬರಲಿ, ಮೆಟ್ಟಿ ಕೂರಲಿ ತುರಗದ ಮೇಲೆ
ಮೇಲೆತ್ತಿ, ಕೆಳಗೆ ಒತ್ತಿ, ಒಳಗೆ ಮೆತ್ತಗೆ ಒತ್ತಿ, ಬಂತು ಬಿತ್ತಿ ರತಿಯಾಟವ ಆಡುವ ವೇಳೆ

ದೇಹವೆರಡು, ಮಿಳಿತರೆ ಒಂದೇ; ಗುಂಡಿಗೆಗಳೆರಡು, ಬಡಿಯುವುದು ತಾಳವೊಂದೇ, ನಮ್ಮಿಬ್ಬರದು
ತಡಬೇಡ, ಅಮೃತವೂ ಹಳಸೀತು, ಬಿಸಿಯಲ್ಲಿ ಬೆಸೆಯಲಿ ಮದನ ರತಿಯರು ನಾನು ನೀನು ಬೆರೆತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ