tag:blogger.com,1999:blog-75059473047731578192024-02-08T05:57:28.922-08:00Murthy-Geniusಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ?
ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.Dr. KRS Murthy - A Geniushttp://www.blogger.com/profile/17116340018920818925noreply@blogger.comBlogger210125tag:blogger.com,1999:blog-7505947304773157819.post-1387153578298609412011-02-04T23:27:00.003-08:002011-02-04T23:27:33.741-08:00ಅನ್ವರ್ಥ ನಾಮಾವಳಿಅನ್ವರ್ಥ ನಾಮಾವಳಿ

ಕೆ. ಆರ್. ಎಸ್. ಮೂರ್ತಿ

ಸಣ್ಣ ಕಣ್ಣಯ್ಯ

ಇವನಿಗೆ ಚೀನಯ್ಯ, ನಿಪ್ಪಾನಯ್ಯ, ಕೊರಿಯಯ್ಯ, ವಿಯೇಟ್ಟನಾಮಯ್ಯ ಇತ್ಯಾದಿ ಹೆಸರುಗಳುಂಟು.

"ಯ್ಯ" ಇರುವ ಕಡೆ "ಮ್ಮ: ಅಥವಾ "ಕ್ಕ" ಹಾಕಿಕೊಳ್ಳಿ.

ಅರ್ಧ ಕಾಲೇಶ್ವರ

ಒಬಾಮ ಒಬ್ಬ ಅರ್ಧ ಕಾಲೇಶ್ವರ.

ಕೆಂಪು ಕಂಠಯ್ಯ

ಟೆಕ್ಸಾಸಿನ ಗೌರವರ್ಣೀಯ ಒರಟನಿಗೆ ಕೊಟ್ಟ ಬಿರುದು

ಬಚ್ಚಲು ಬಾಯಿ

ಯಾವಾಗಲೂ ಇಂಗ್ಲೀಷಿನ ನಾಲ್ಕು ಅಕ್ಷರದ ಪದಗಳ ಅಷ್ಟೋತ್ತರ ಮಂತ್ರ ಬೊಗಳುವ ಕೊರಚನಿಗೆ ಈ ಹೆಸರನ್ನು ಕೊಡಬಹುದುDr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-30480652871532882452011-02-04T22:45:00.001-08:002011-02-04T22:45:36.086-08:00ತುಂಟ ವ್ಯಾಲಂಟನ ದಿನ

ಕೆ. ಆರ್. ಎಸ. ಮೂರ್ತಿ

ಲಂಪಟ ತುಂಟ ವ್ಯಾಲಂಟ ಅಂತೂ ಮತ್ತೊಮ್ಮೆ ಬರಲಿರುವ

ಅಂಟಿಸಿ, ಜಂಟಿ ಕಟ್ಟಿ ಅವನ - ಅವಳ ಆಟವಾಡಿಸುವಲಿರುವ

ಹದಿನಾಕರಂದು ಚಂದಿರನ ಹಾಲು ಬೆಳದಿಂಗಳಿನ ಅಂಗಳದಲ್ಲಿ

ಜೇನಿನ ಹನಿಗಳು ತುಂತುರು ತುಂತುರಾಗಿ, ಮೂಡಿ ಆಗಸದಲ್ಲಿ

ಧರೆಗೆ ಧಾರೆ ಧಾರೆಯಾಗಿ ಇಳೆಯೆ, ನಾನೂ ನೀನೂ ನೆನೆಯುವ

ಬರಿ ಬೆತ್ತಲಲಿ ಮಿಲನದಲಿ ಮೀಯುವ ಮದನ ರತಿಯರಾಗುವ

ಬಾರಾ! ಮನದಣಿಯುವ ಮೈಮನಗಳ ಮರೆತು ಬೆರೆವ ಬಾರಾ!

ಒಬ್ಬರನ್ನೊಬ್ಬರ ಏರಿ ತಾರಾ ಮಂಡಲಗಳ ಅಲೆಯುವ ಬಾರಾ!

ತನುಗಳ ಸವಿಯುತ ಇಬ್ಬರೂ ಒಬ್ಬರನ್ನೊಬ್ಬರ ರುಚಿಸುವ ಬಾರಾ!

ಒಬ್ಬರ ಮನದಲಿ ಇನ್ನೊಬ್ಬರು ಹೊಕ್ಕು ಲೋಕಗಳ ರಚಿಸುವ ಬಾರಾ!Dr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-36067707251341582122011-01-25T23:59:00.001-08:002011-01-25T23:59:06.453-08:00ಬೇಡ ಶಾಪಬೇಡ ಶಾಪ

ಕೆ. ಆರ್. ಎಸ್. ಮೂರ್ತಿ

ಕೊಡದಿದ್ದರೆ ಬೇಡ ಹೋಗೋ ಹಾರುವಯ್ಯ

ಬೇಡ ನಾನೆಂದು ಬಿಲ್ಲು ಬಾಣದ ನಿನ್ನ ಶಿಷ್ಯ

ಹುಟ್ಟಿನಲಿ ಬೇಡ, ನನಗೇನೂ ಬೇಡ ಪಾಠ

ಬಿಟ್ಟೂ, ಬಿಟ್ಟೂ, ಗುರಿಯಿಟ್ಟೂ ಆಗುವೆ ನಿರತ

ಗುರುದಾನ ಕೇಳಿ, ಹೆಬ್ಬೆಟ್ಟ ಕಸಿದು ಕೊಂಡೆ

ಪಾರ್ಥನನು ಮೀರಿದವ ಇರಬಾರದೆಂದೇ

ಹೆಬ್ಬೆರಳು ಗೆದ್ದಿತು, ಶಿಷ್ಯನನು ಸೋಲಿಸುವ

ಇನ್ನೊಬ್ಬ ಶಿಷ್ಯನಾನು ಇರಬಾರದೆಂಬ ನೆವ

ಕೊಡುವೆನೋ ನಿನಗೆ ವರ ಶಾಪವೊಂದು

ಶಿಷ್ಯನೇ ನಿನ್ನ ಶತ್ರು, ಮೃತ್ಯುವಾಗಲೆಂದುDr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-16732388311839282642011-01-25T23:57:00.001-08:002011-01-25T23:57:56.267-08:00ಸಾಧಕರುಸಾಧಕರು

ಕೆ. ಆರ್. ಎಸ್. ಮೂರ್ತಿ

ಭೃಂಗದ ಬೆನ್ನೇರಿ ಬಂದ ಬೇಂದ್ರೆ.

ಭರ್ಜರಿ ಬೆಂದವರಿಗೆ ಮಾತ್ರ ಬೇಂದ್ರೆ

ಆಶು ಕವಿ, ಆಶು ವಾಕ್ ಪಟುವೆಂದರೆ

ಸದಾ ಸಿಧ್ಧ, ನೀ ತನನಾನ ಎಂದರೆ

ನಾರದನ ನಾಕೂ ತಂತಿ ಮೀಟಿದಂತೆ

ನಾರಾಯಣನನೇ ಶಯನದಿಂದೆದ್ದಂತೆ

ಗಂಗೆಯ ಇಳಿಸಿದ ಸಾಧನ ಕೇರಿಯ ಸಿಧ್ಧ

ಪದ ಲಾಲಿತ್ಯದ ಬುಧ್ಧಿವಂತರಲಿ ನೀ ಬುಧ್ಧ

--Dr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-43451561869894489202011-01-23T23:35:00.001-08:002011-01-23T23:35:23.778-08:00ಜೇನುಗನಸುಜೇನುಗನಸು

ಕೆ. ಆರ್. ಎಸ್. ಮೂರ್ತಿ

ಏರು ಬೇಗ ಬೆಡಗಿ; ಏರು ರೋಮಾಂಚನದ ಮಂಚಕ್ಕೆ ಮೈ ತಲುಕಿಸಿ

ನಾರಿ ನಿನಗಾಗೇ ಅಲಂಕರಸಿ ಕಾದಿಹೆ ಕುಸುಮಗಳ ಸುವಾಸನೆ ಸಿಂಚಿಸಿ

ಮಾರ ಶರವು ನಿನಗೆಂದೇ ಕಾದಿಹುದು ಕೆಂಪು ಕೆಂಡವಾಗಿ ಬೆಳೆದೂ ಬೆಳೆದೂ

ನರ ಮಂಡಲವೆಲ್ಲಾ ನೆಗೆದು ಏಳಕೊಂಡಿವೆ ಬಿಗಿಯಾಗಿ, ಸೆಟೆದೂ ಸೆಟೆದೂ

ಚಂದಿರನು ಕಾದಿಹನು ಹುಣ್ಣಿಮೆಯ ಹಾಲನ್ನು ಕೋಮಲೆ ನಿನಗೆ ಸ್ನಾನಕ್ಕೆಂದು

ಇಂದಿರನ ವದನೆಯರು ಕಾಮ ವರ್ಧಿನಿ ರಾಗದ ವಿಲಂಬಿತ ಆಲಾಪನೆಗೆಂದು

ದುಂಬಿಗಳ ಹಿಂಡು ಕೋಟಿ ಕೋಟಿ ನೂರಾರು ಮಲಿಗಳೇ ಹಾರಾಡಿ ವನವೆಲ್ಲಾ

ಕುಸುಮಗಳು ಅನೇಕಾನೇಕ ಮಧುವ ಧಾರೆ ಎರೆದಿವೆ ಬಣ್ಣ ಬಣ್ಣದ ಬಟ್ಟಲಲೆಲ್ಲಾ

ನಿನ್ನಧರಗಳೇ ಸವಿಯಲ್ಲವೇ ಜೇನಿನ ಸುಧಾಮೃತವನು ಸುರಿಸುವ ಕಾಮಧೇನು

ಹರಿಸುವುದು ಗಂಗಾಧಾರೆ, ರಭಸದಲಿ ಭೋರ್ಗರೆದು ಧಮನಿಯಲಿ ಆನಂದವನು

ಹೊಸತು ಹೊಸೆಯುವ, ಹಸಿವ ತಣಿಸುವ, ಆಸೆಗಳ ಬೆಸೆಯುವ, ಒಂದೇ ಕನಸ ಕಾಣುವ

ವಿನ್ಯಾಸದ ಲಾಸ್ಯವನಾಡುವ, ಬಂಧನದ ಭಾಷೆಯಾಡುವ, ನಿಮಿಷವನೇ ನಿಲ್ಲಿಸಿಬಿಡುವDr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-86220150645968631062011-01-20T13:29:00.001-08:002011-01-20T13:29:43.442-08:00ತಿರುಕನ ನನಸುತಿರುಕನ ನನಸು

ಕೆ. ಆರ್. ಎಸ್. ಮೂರ್ತಿ

ಪೆದ್ದರಲಿ ಅತಿ ಪೆದ್ದ ದಡ್ಡರಲ್ಲೆಲ್ಲಾ, ಮಹಾ ದಡ್ಡನಾಗಬೇಕೆಂಬ ಅಸಾಮಾನ್ಯ ಬಯಕೆ

ಈ ಕ್ಷಣದಲ್ಲೇ ಸಿಧ್ಧನಾಗಿಹೆ ನಾನು, ಭಾವಿಗೆ ಹಾರಿ ಬಿದ್ದು ಪ್ರಾಣವನ್ನು ತ್ಯಜಿಸುವುದಕೆ

ಸತ್ತು, ಮುಂದಿನ ಜನುಮದಲಿ ಮತ್ತೆ ಆಗುವೆ ಪೆದ್ದೇಶ್ವರ ಚಕ್ರವರ್ತಿ, ಪೆದ್ದ ಗಂಡನಾಗಿ

ಹುಟ್ಟಿ ಮತ್ತೆ ಬರುವ ಮಹದಾಸೆಯಿದೆ; ಸಾಧ್ಯವೇ ಇಲ್ಲವೆನುವುದನು ಸಾಧಿಸುವೆ ದಿಟವಾಗಿ

ಪೆದ್ದನಾದರೇನಂತೆ, ತ್ರಿಪುರ ಸುಂದರಿ, ಅಪ್ರತಿಮ ಜಾಣೆ, ರಾಜ ಕುವರಿಯ ಬಲಗೈ ಹಿಡಿವೆ

ದಡ್ಡನಾದರೇನಂತೆ, ದೊಡ್ಡ ಅರಮನೆಯ ಅಂತಃಪುರದಲಿ ರಾಜಕುವರಿಯೊಡನೆಯೇ ಮಲಗುವೆ

ಫಕ್ಕನೆ ನಗಬೇಡಿ, ಇಂತಹ ಕನಸನು ತಿರುಕನ ಕನಸೆಂದು ಕಿಂಚಿತ್ತೂ ಹೀಯಾಳಿಸಲೇ ಬೇಡಿ

ಅಸಾಧ್ಯವು ಕೂಡ ಆಗಬಲ್ಲುದು, ಮೂರ್ಖನಿಗೂ ಗರವೊಮ್ಮೆ ಬಡಿಯಬಹುದು ಯೋಚಿಸಿನೋಡಿ

ರಾಜನ ಕಟ್ಟಪ್ಪಣೆಯಂತೆ ಧೂತರು ಕುದುರೆಯೇರಿ ಧಾವಿಸಿ ಬರುವಾಗ ಇಡೀ ನಗರದಲ್ಲೇ

ದೊಡ್ಡ ಮೂರ್ಖನನು ಹುಡುಕುತ್ತಿರುವಾಗ ನಾನು ಪ್ರತ್ಯಕ್ಷ ಅದೇ ಕಾಡಿನ ಅವರ ದಾರಿಯಲೇ

ಹತ್ತುವೆನು ಭರದಲ್ಲಿ ಕೈಲಿ ಕೊಡಲಿಯೊಂದನು ಹಿಡಿದು, ಏರುವೆನು ಅತಿ ಎತ್ತರದ ದೊಡ್ಡ ಮರವನ್ನು

ಕೊಂಬೆಯ ತುದಿಗೇರಿ, ಕೊಡಲಿಯ ಹೊಡೆದು ಕೂತ ಕೊಂಬೆಯನೇ ಕತ್ತರಿಸುವ ಯೋಜನೆ ಮಾಡುವೆನು

ಧೂತರಿಗಿಂತ ಪೆದ್ದನಂತೂ ನಾನಲ್ಲ; ಪೋಲೀಸು ಪ್ಯಾದೆಗಳಿಗಿಂತ ಪೆದ್ದರುಂಟೇ ಈ ಲೋಕದಲ್ಲಿ ಹೇಳಿ?

ಬಂಧಿಸಿ ಒಯ್ಯುವುದು ಖಂಡಿತವು ನನ್ನನ್ನು; ಮುಂದಿನ ಕಥೆಯನ್ನು ನೀವೇ ಕೇಳೋಣ ಬೇಗ ಬೇಗ ಹೇಳಿ!Dr. KRS Murthy - A Geniushttp://www.blogger.com/profile/17116340018920818925noreply@blogger.com1tag:blogger.com,1999:blog-7505947304773157819.post-66487339867660444942011-01-20T12:22:00.000-08:002011-01-20T12:22:14.579-08:00ಕನ್ನಡತಿಗೆ ಉತ್ಸವಕನ್ನಡತಿಗೆ ಉತ್ಸವ

ಕೆ. ಆರ್. ಎಸ್. ಮೂರ್ತಿ

ಅಕ್ಷರ ಮಾಲೆಯ ಪೋಣಿಸಿದ ಕಂಠೀ ಹಾರ

ಸುಗಂಧ, ಮಲ್ಲಿಗೆ, ಗುಲಾಬಿ, ಕನಕಾಂಬರ

ಸಿಂಪಡಿಸುವೆವು ಸಿರಿಗಂಧ, ಚಂದನ, ಪನ್ನೀರು

ನಿರಂತರ ಮೈಮೇಲೆಲ್ಲಾ ಪಸರಿಸುವ ತುಂತುರು

ರಂಗು ರಂಗಿನ ನಯ ರೇಶಿಮೆಯ ಸೀರೆ ಉಡಿಸಲು

ಪಚ್ಚೆ, ಸುವರ್ಣ, ರತ್ನ ಅಲಂಕರಿಸಿದ ಪಸಿರು ಶಾಲು

ಕಾವೇರಿಯೇ ಮಾಡಿಸುತಾಳೆ ನಿನಗೆ ನಿತ್ಯ ಸ್ನಾನ

ಜೋರಿನ ಜೋಗ ಜಲಪಾತದ ಭರದ ಅಭ್ಯಂಜನ

ದುಂಬಿಯ ತಂಬೂರಿಯ ಶೃತಿ ಗುನುಗುವ ತನನಾನ

ಕರುನಾಡಿನ ಗಿಣಿ, ಕೋಗಿಲೆ ವೃಂದದ ಆಲಾಪನ

ಸ್ವರನಾಡಿನ ಗಿಣಿ, ಕೋಗಿಲೆ ವೃಂದದ ಆಲಾಪನ

ಸಾವಿರ ನಯನದ ಸಾವಿರ ಮಯೂರಗಳ ಕುಣಿತ

ವಾನರ ಸೈನ್ಯದ ಹುರುಪಿನ ಕೇಕೆಯಾಟದ ನೆಗೆತ

ವೀಳ್ಯ ಲೇಪಿತ ಕೆಂಪೇರಿದ ತೊಂಡೆಯ ತುಟಿಯ ಬಾಯಿ

ನಡೆವಾಗ ಹಾದಿಯಲಿ ಕೋಟಿ ತೆಂಗಿನ ಈಡು ಕಾಯಿ

ಕನ್ನಡತಿ ಬಾರೇ, ಕಣ್ತುಂಬ ನೋಡಿ ಧನ್ಯವಾದೇವು

ಎಡೆ ಬಿಡದೆ ಉತ್ಸಾಹದ ಅಮ್ಮನುತ್ಸವವ ನಡೆಸುವೆವು

ಕನ್ನಡತಿಯೇ ಸರಸತಿ, ವಾಗ್ದೇವಿ, ಗಾನ ಶಾರದೆಯು

ಕನ್ನಡಕೇ ಮೀಸಲು ನಮ್ಮೆಲ್ಲರ ಗುಂಡಿಗೆಯ ಗುಡಿಯುDr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-74581057974846052892011-01-10T18:07:00.001-08:002011-01-10T18:07:50.795-08:00ಅಣು ಸಮಾಜಅಣು ಸಮಾಜ

ಕೆ. ಆರ್. ಎಸ್. ಮೂರ್ತಿ

ಎಲಕ್ಟ್ರಾಣಿ: ಹೊಟ್ಟೆಯಲಿ ಋಣ ವಿದ್ಯುತ್ಕೋಶ, ಬಲು ಚಿಕ್ಕ, ಅತಿ ಚಕ್ಯ, ಸಾಮಾನ್ಯವಾಗಿ ಗುಂಪಿನಲ್ಲಿ, ಕೆಲವೊಮ್ಮೆ ಒಬ್ಬರ ಹಿಂದೆ ಮತ್ತೊಬ್ಬರಂತೆ ಓಡುತ್ತ ವಿದ್ಯುತ್ತನ್ನು ಹರಿಸುವವಳು. ಪ್ರೋಟಣ್ಣನೆಂದರೆ ಅತಿ ಪ್ರಿಯವೋ ಎಂಬಂತೆ, ಒಬ್ಬರೋ, ಅನೇಕರೋ ಪ್ರದಕ್ಷಿಣೆ ಹಾಕುವ ಕಾಯಕ; ಸುಸ್ತೇ ಇಲ್ಲವೆಂಬಂತೆ ನಿರಂತರ ಪ್ರದಕ್ಷಿಣೆ.

ಪ್ರೋಟಣ್ಣ: ದೊಡ್ಡ ಹೊಟ್ಟೆ, ದೊಡ್ಡ ದೇಹ; ಧನ ವಿದ್ಯುತ್ಕೋಶ. ಎಲಕ್ಟ್ರಾಣಿಗೆ ಇವನೆಂದರೆ ಬಹಳ ಪ್ರಿಯ; ಒಬ್ಬನೆಯೋ, ಇತರ ಪ್ರೋಟಣ್ಣರ ಜೊತೆಯಲ್ಲೋ ಅಣುವಿನ ಕೇಂದ್ರದಲಿ ವಾಸ.

ನ್ಯೂತ್ರಾಣ: ನಿಮಗೆ ಪ್ರೋಟಣ್ಣನ ಬಗ್ಗೆ ಗೊತ್ತಿದ್ದರೆ, ಇವನು ಒಬ್ಬ ನಿತ್ರಾಣಿ ಷಂಡನೆಂಬುದನ್ನು ಬಿಟ್ಟರೆ, ಇನ್ನೇನೂ ವ್ಯತ್ಯಾಸವಿಲ್ಲ. ಇವನೂ, ಇತರ ನ್ಯೂತ್ರಾಣರ ಜೊತೆಯಲ್ಲೂ, ಪ್ರೋಟಣ್ಣರ ಜೊತೆಯಲ್ಲೂ ಅಣುವಿನ ಕೇಂದ್ರದಲ್ಲಿ ವಾಸ. ಇವನ ಹೊಟ್ಟೆಯಲ್ಲಿ ವಿದ್ಯುತ್ಕೋಶ, ಹಾಗೂ ಎಲಕ್ಟ್ರಾಣಿಯರನ್ನು ಸೆಳೆಯುವ ಶಕ್ತಿಯಿಲ್ಲದ ಬಲು ಷಂಡ.

ಫೋಟಾನಯ್ಯ: ಇವನನ್ನು ಬೆಳಕಿನ ಕಣ ಎನ್ನಬಹುದು. ಅನೇಕ ಫೋಟಾನಯ್ಯರು ದೊಡ್ಡ ಗುಂಪಿನಲ್ಲಿ ಅತಿ ವೇಗದಲ್ಲಿ ಧಾವಿಸಿ ಅಲೆ ಅಲೆಯಾಗಿ ಓಡಿದಾಗ ವಿವಿಧ ಬಣ್ಣಗಳ ಬೆಳಕುಗಳು ನಮ್ಮ ಕಣ್ಣಿಗೆ ಗೋಚರವಾಗುತ್ತವೆ.

ನ್ಯೂತ್ರಿನೋ: ವಿದ್ಯುತ್ರಾಣ ವಿಲ್ಲದ ಅತಿ ಚಿಕ್ಕ, ಬಹಳಷ್ಟು ವೇಗದಲ್ಲಿ ಯಾವ ಅಣು, ಪರಮಾಣುಗಳನ್ನೂ ಸಂಪರ್ಕಿಸದೆ ಎಲ್ಲೆಲ್ಲೂ ತೂರಿ ಓಡುತ್ತಿರುವ, ಯಾವಾಗಲೂ ಅಜೀವ ಬ್ರಹ್ಮಚಾರಿಯಂತೆ, ಅದೃಶ್ಯನಾಗಿ ಅಲೆದಾಡುವ ಪರಮಾಣು.

ಫೋನಾಣಯ್ಯ: ಶಬ್ದವನ್ನು ಒಂದು ಕಡೆಯಿಂದ ಇನ್ನೊಂದು ಎಡೆಗೆ ಒಯ್ಯುವವನೇ ಫೋನಾಣಯ್ಯ. ವಿಶೇಷವೆಂದರೆ, ಘನವಸ್ತುಗಳಲ್ಲಿ ಶಾಖವು ಪ್ರಸಾರವಾಗುವಾಗಲೂ ಫೋನಾಣಯ್ಯನೇ ಕಾರಣ ಎಂದು ಶಾಖ ವಿಜ್ಞಾನಿಗಳು ವಿವರಿಸುತ್ತಾರೆ.

ಕ್ವಾರ್ಕು: ಪ್ರೋಟಾಣಯ್ಯರ ಹಾಗೂ ನ್ಯೂತ್ರಾಣಯ್ಯರ ಹೊಟ್ಟೆಯಲ್ಲಿ ಕ್ವಾರ್ಕುಗಳು ಇವೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಕ್ವಾರ್ಕುಗಳಲ್ಲಿ ಅನೇಕ ಜಾತಿ: ಒಟ್ಟು ಆರು ರೀತಿಯವು.Dr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-78366367796634861032011-01-10T18:05:00.001-08:002011-01-10T18:05:40.018-08:00ನಮ್ಮ ರವಿಯನ್ನು ನೀವು ಇತೀಚೆಗೆ ನೋಡಿದ್ದೀರಾ?ನಮ್ಮ ರವಿಯನ್ನು ನೀವು ಇತೀಚೆಗೆ ನೋಡಿದ್ದೀರಾ?

ಕೆ. ಆರ್. ಎಸ್. ಮೂರ್ತಿ

ನಾನು: ಇತ್ತೀಚಿಗೆ, ನೀವೇನಾದರೂ ನಮ್ಮ ರವಿಯನ್ನು ನೋಡಿದಿರಾ? ದಿನಾನೂ ಬರುತ್ತಿದ್ದವನು ಇತ್ತೇಚೆಗೆ ಏನೋ ಬರುತ್ತಲೇ ಇಲ್ಲ! ಏನ್ರೀ! ಅವನೇನಾದರೂ ರಜೆ ತೆಗೆದು ಕೊಂಡಿದ್ದಾನೇನು? ಅವನು ಹೀಗೆ ತಿಂಗಳಾನುಗಟ್ಟಲೆ ರಜೆ ತೆಗೆದುಕೊಂಡರೆ, ನಮ್ಮೆಲ್ಲರ ಗತಿಯೇನು? ಅವನಿಲ್ಲದಿದ್ದರೆ, ನಮ್ಮ ಜೀವನದಲ್ಲಿ ಕಪ್ಪು ಮೋಡ ಕವಿದು ಕೊಂಡ ಹಾಗೆ. ನನಗೇನೋ ಅವನಿಲ್ಲದಿದ್ದರೆ ಮೈಯಲ್ಲೆಲ್ಲಾ ಚಳಿ, ನಡುಕ ಬಂದು ಬಿಡುತ್ತದೆ.

ನೀವು: ಯಾರ್ರೀ ಅವನು? ಅವನ ಹೆಸರು ರವಿ ಅಂದಿರಾ? ಯಾರೋ ಅವನು ಹ್ಯಾಗಿದಾನೆ ಅಂತ ಜ್ಞಾಪಕ ಬರುತ್ತಿಲ್ಲವಲ್ಲ! ನಾನೂ, ನೀವೂ ನೋಡಿದ್ದು ಗ್ಯಾರಂಟಿ ತಾನೇ?

ನಾನು: ಏನ್ರೀ ನೀವು ಇಷ್ಟು ಪೆದ್ದು ಪೆದ್ದಾಗಿ ಮಾತಾಡ್ತಾ ಇದ್ದೀರಿ! ನಮ್ಮ ರವಿಯನ್ನು ನೋಡಿದ್ದು ಜ್ನಾಪಕವೇ ಇಲ್ಲಾ ಅಂತೀರಲ್ಲಾ! ನಾನೂ, ನೀವೂ, ಎಲ್ಲರೂ ನೋಡಿದ್ದೀವಿ ಸ್ವಾಮಿ!

ನೀವು: ನಾನು ಅಷ್ಟೊಂದು ಪೆದ್ದಾನೆನ್ರೀ? ಎಲ್ಲರೂ ನನ್ನನ್ನು ಪೆದ್ದಾ ಅಂತ ಒಂದೊಂದು ಸಾರಿ ಕರೆಯುವುದು, ನನ್ನನ್ನು ತಮಾಶಿ ಮಾಡಿ ಕೊಂಡು ನಗುವುದು ನನಗೂ ಗೊತ್ತು. ನನ್ನ ಹೆಂಡತಿ ಕೂಡ ನನ್ನನ್ನು, ಬೆಡ್ ರೂಮಿನಲ್ಲಿ ಶತ ಪೆದ್ದು ಅಂತ ಅಂತಾ ಇರ್ತಾಳೆ. ನನಗೆ ಏನೂ ಗೊತ್ತಿಲ್ಲಾ ಅಂತ ಅಣಕಿಸುತ್ತಾಳೆ; ಕಿಸಿ ಕಿಸೀ ಅಂತ ನಗುತ್ತಾಳೆ.

ನಾನು: ನಿಮ್ಮ ಹೆಂಡತಿ ನಿಮ್ಮನ್ನ ಪೆದ್ದು ಗುಂಡಾಂತ ಅಣಕಿಸಿ ನಗುವುದು ಊರಿಗೇ ಗೊತ್ತು. ನನ್ನ ಹತ್ರಾನೂ ಬಹಳ ಸಾರಿ ಹೇಳಿದ್ದಾಳೆ. ಅದೆಲ್ಲಾ, ನನ್ನ ಅವಳ ಗುಟ್ಟು; ಅದನ್ನು ನಿಮಗೆ ಹೇಳುವ ಹಾಗಿಲ್ಲ. ಅದಿರಲಿ ಬಿಡಿ. ಮುಖ್ಯ ವಿಷಯಕ್ಕೆ ಬನ್ನಿ.

ನೀವು: ಸರಿಯಪ್ಪಾ ಸರಿ. ನಿಮ್ಮಾನ್ನೂ ಅವಳು ಪೆದ್ದು ಅಂತ ಕರೆಯುವುದಿಲ್ಲ ತಾನೇ?

ನಾನು: ನನ್ನನ್ನು ಪ್ರಚಂಡ ಬುದ್ದಿವಂತ ಅಂತಾಳೆ. ನಮ್ಮ ರವಿಯ ವಿಷಯ ನಿಮಗೆ ಏನೂ ಗೊತ್ತಿಲ್ಲ; ಅವನನ್ನು ನೋಡಿದ್ದೇ ಜ್ನಾಪಕವಿಲ್ಲಾ ಅಂದ್ರಲ್ಲ. ಅವನು ಪ್ರತಿದಿನ ಬೆಳಿಗ್ಗೆ ಐದೋ, ಆರೋ..... ಒಂದೊಂದು ಸಾರಿ ಏಳು ಗಂತೇನೆ ಅಂದು ಕೊಂಡು ಬಿಡಿ; ಆದರೆ, ಅವನು ಬರುವುದಂತೂ ಬಹಳ ಗ್ಯಾರಂಟಿ. ಆದರೆ, ಅವನು ಇತೀಚೆಗೆ, ಸುಮಾರು ಎರಡು ತಿಂಗಳೇ ಆಗಿಹೋಯಿತು ಕಣ್ರೀ. ಬಂದೇ ಇಲ್ಲ.

ನೀವು: ಆಶ್ಚರ್ಯ! ಎರಡು ತಿಂಗಳಿಂದ ಬಂದೇ ಇಲ್ಲ ಅಂದರೆ, ಅವನು ಹವಾಯಿಗೋ, ಲಾಸ್ ವೇಗಸ್ಸಿಗೋ, ಮೆಕ್ಸಿಕೊಗೋ ಹೊರತು ಹೋಗಿರಬೇಕು ಕಣ್ರೀ! ಅವನಿಗೂ ರಜೆ ಬೇಕೇ ಬೇಕು ಅಲ್ಲವೇ?

ನಾನು: ನೀವು ಬರೀ ಶತ ಪೆದ್ದರಲ್ಲ; ಸಹಸ್ರ ಪೆದ್ದೋ, ಲಕ್ಷ ಪೆದ್ದೋ, ಕೋತಿ ಪೆದ್ದೋ ಇರಲೇ ಬೇಕು.

ನೀವು: ನನ್ನನ್ನು ಅಣಕಿಸಿದ್ದು ನಿಮಗೆ ಸಾಕಾಗಿದ್ದರೆ, ಆ ರವಿ ಹ್ಯಾಗಿದ್ದಾನೆ ಅಂತ ಸ್ವಲ್ಪ ಈ ಪೆದ್ದು ಪೆದ್ದೇಶ್ವರನಿಗೆ ಒಟ್ಟಾರೆ ಉತ್ತರವನ್ನು ಹೇಳಿ ಮೊದಲು.

ನಾನು: ಹಾಗೆ ಆಗಲಿ ಶ್ರೀ ಶ್ರೀ ಶ್ರೀ ಪೆದ್ದೇಶ್ವರ ಮಹಾ ಮಂಡಲಾಧೀಶ, ಮಠಾಧೀಶ ಸ್ವಾಮಿಗಳೇ, ರವಿ ಎಂದರೆ ಸೂರ್ಯ, ಭಾಸ್ಕರ, ಪ್ರಭಾಕರ, ದಿವಾಕರ, ದಿನಕರ ಇತ್ಯಾದಿ, ಇತ್ಯಾದಿ, ಇತ್ಯಾದಿ.Dr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-33552519258315748982011-01-10T18:02:00.000-08:002011-01-10T18:02:12.071-08:00ಹೊಸ ಸೂಚನೆ ಮತ್ತು ನಿಮ್ಮ ಕೋರಿಕೆಗಳು + ಕನ್ನಡಮ್ಮನಿಗೆ ಆರತಿಯ ಹಾಡುಹೊಸ ಸೂಚನೆ ಮತ್ತು ನಿಮ್ಮ ಕೋರಿಕೆಗಳು + ಕನ್ನಡಮ್ಮನಿಗೆ ಆರತಿಯ ಹಾಡು ಕೆ. ಆರ್. ಎಸ್. ಮೂರ್ತಿ

ಪ್ರಿಯ ಕನ್ನಡ ಹಾಡುಗಾರರಿಗೆ:

ನಾನು ಈ ಕೆಳಗಿನ ಆರತಿಯ ಹಾಡನ್ನು ಕನ್ನಡ ಕಾರ್ಯ ಕ್ರಮದ ಸಂದರ್ಭಗಳಲ್ಲಿ ಕನ್ನಡ ಮಾತೆಗೆ ಆರತಿಯನ್ನು ಮಾಡುವಾಗ ಮುನ್ನೆಲೆ ಗಾಯಕರು ಹಾಡಿ, ಜೊತೆಗೆ ಹಿನ್ನೆಲೆ ಗಾಯಕರು ಗುಂಪಿನಲ್ಲಿ "ಆರತಿ ಇತ್ತೀರೆ / ಆರತಿ ಬೆಳಗೀರೆ + ಜೊತೆಗೆ ----- ಬೆಳಕಿನಾರತಿ, ಮಂಗಳಾರತಿ ಮುತ್ತಿನಾರತಿ, ಹೂವಿನಾರತಿ, ಗಂಧದಾರತಿ, ಕುಸುಮದಾರತಿ, ಸುತ್ತಿನಾರತಿ... ಇತ್ಯಾದಿಯಾಗಿ ಒಂದಾದ ಮೇಲೊಂದಾಗಿ ಹೇಳಬಹುದು. ಜೊತೆಗೆ ಕೊಳಲು, ವೀಣೆ, ಪಿಟೀಲು, ಮೃದಂಗ, ತಬಲಾ ಮೊದಲಾದ ವಾದ್ಯಗಳು, ತಾಳ, ಗೆಜ್ಜೆ, ಗಂಟೆ ಇತರರ ತಾಳ ಸಲಕರಣೆಗಳು ಉಪಯೋಗಿಸುವುದು ಸೂಕ್ತ. ನಿಮ್ಮ ಅನುಕೂಲಕ್ಕೆ ಅನುಯಾಯಿ ಪದ ಪಲ್ಲಟ ಮಾಡಿಕೊಳ್ಳಿ.

ನಿಮಗೆ ಇಷ್ಟವಾದ ರಾಗವನ್ನೋ, ರಾಗ ಮಾಲಿಕೆಯಾಗೋ ಹಾಕಿಕೊಂಡು ಹಾಡಬಹುದು. ಅಗತ್ಯವಿದ್ದರೆ, ನನಗೆ ಈಮೈಲ್ ಮಾಡಿದರೆ ಅಥವಾ ೪೦೮-೪೬೪-೩೩೩೩ ಗೆ ಫೋನು ಮಾಡಿದರೆ, ನಾನು ರಾಗ ಹಾಕಿ ನಿಮಗೆ ಕಳಿಸಿಕೊಡುತ್ತೇನೆ.

ಹೊಸ ಸೂಚನೆ ಮತ್ತು ನಿಮ್ಮ ಕೋರಿಕೆಗಳು:

ಆಗಲೇ, ಕೆಲವು ಕನ್ನಡಿಗರು ಹಾಗೂ ನನ್ನ ಸ್ನೇಹಿತರು, ತಮಗೆ ಪ್ರಿಯವಾದ ಹೆಸರಾಂತ ಕನ್ನಡಿಗರನ್ನು ಈ ಆರತಿಯ ಹಾಡಿನಲ್ಲಿ ಸೇರಿಸ ಬೇಕೆಂದು ಕೋರಿದ್ದಾರೆ. ನೀವು ಕೂಡ ನಿಮ್ಮ ಕೋರಿಕೆಗಳನ್ನು ನನಗೆ ಕಳಿಸಿ ಕೊಡಿ. ಇದುವರೆಗೂ ಬಂದಿರಿರುವ ಕೋರಿಕೆಗಳು ಈ ಕೆಳಗಿವೆ:

ಎಲ್ಲ ಕನ್ನಡದ ಜ್ಞಾನ ಪೀಠ ಪ್ರಶಸ್ತಿಗಾರರು

ವಿಶೇಶ್ವರಯ್ಯ

ಹಕ್ಕ, ಬುಕ್ಕ

ವಿಷ್ಣುವರ್ಧನ - ರಾಜ (ಸಿನಿಮಾ ನಟರಲ್ಲ)

ನಿಮ್ಮ ಕೋರಿಕೆಗೆ ಉದಾಹರಣೆಗಳು: ಸಂಗೀತಗಾರರು, ಶಿಲ್ಪಿಗಳು, ಇತರ ಕಲಾಕಾರರು, ಮಹಾ ಸಂತ, ಶರಣ, ಗುರು, ಸ್ವಾಮಿಗಳು, ತೀರ್ಥ ಯಾತ್ರಾಸ್ಥಳಗಳು, ಆಧ್ಯಾತ್ಮಿಕ ನೇತಾರರು (ಜೈನ, ಹಿಂದೂ, ಇತ್ಯಾದಿ), ವಿಜ್ಞಾನಿಗಳು, ಸಮಾಜ ಸೇವಕರು, ಇತರ ಹೆಸರಾಂತ ಸಾಹಿತಿಗಳು.

ಆರತಿಯ ಹಾಡು

ಕೆ. ಆರ್. ಎಸ್. ಮೂರ್ತಿ

ಬೆಳಗಿರೆ ಆರತಿಯ ಅರಳಿಸಿ ಚಿತ್ತವನು ಬೆಳಗುವ ಸರಸತಿಗೆ

ನಿತ್ಯ ಸತ್ಯ ಆರತಿಯ ಯತಿಗಳ ಮತಿಯಲ್ಲಿ ಹೊಳೆಯುವಳಿಗೆ

ಹೂವಿನಾರತಿಯನೆತ್ತಿರೆ ಕನ್ನಡಮ್ಮ ದೇವಿ ಭುವನೇಶ್ವರಿಗೆ

ಸುತ್ತಿನಾರತಿಯ ಎತ್ತಿರೆ ಶೃಂಗೇರಿ ಮಾತೆ ಶಾರದಾ ದೇವಿಗೆ

ತುಪ್ಪದಾರತಿಯ ಒಪ್ಪದಲಿ ಅರ್ಪಿಸಿ ಹೊಗಳಿರೆ ಸರ್ವಮಂಗಲೆಗೆ

ಸಿರಿ ಗಂಧದಾರತಿಯ ಚೆಂದದಲಿ ಮನ ಮಂದಿರದಲಿ ನಲಿವಳಿಗೆ

ವೀರ ನಾರಾಯಣನ ವರಿಸಿ ಕರುನಾಡಿನ ಗದಗಿನಲ್ಲಿ ನೆಲೆಸಿದವಳಿಗೆ

ಕಾವ್ಯದಾರತಿಯ ನಾರಣಪ್ಪ ಕುಮಾರ ವ್ಯಾಸನನು ಹರಸಿದವಳಿಗೆ

ನಮ್ಮೆಲ್ಲರ ಪೆರ್ಮೆ ಪಂಪ ಮಹಾಕವಿಯ ಪೆತ್ತು, ಪೊತ್ತು ಇತ್ತವಳಿಗೆ

ರನ್ನ, ಜನ್ನ, ರಾಘವಾಂಕ, ಹರಿಹರ, ಮಾದೇವಿ, ಬಸವಣ್ಣನಮ್ಮನಿಗೆ

ಕನ್ನಡದ ಕಂಪು ಕುವೆಂಪು, ಸರ್ವಜ್ಞ, ಎಲ್ಲಬಲ್ಲ ಮಂಕುತಿಮ್ಮನಮ್ಮನಿಗೆ

ಬೆಂದು ಅಮೃತವಾದ ಬೇಂದ್ರೆ, ಕಾರ್ನಾಡರ ಮಡಿಲಲ್ಲಿ ಆಡಿಸಿದವಳಿಗೆ

ತಲಕಾಡಿನ ಕಾವೇರಿಯ ತೀರ್ಥ, ಮೈಸೂರಿನ ಸುವಾಸನೆಯ ಮಲ್ಲಿಗೆ

ಗಂಧ, ಚಂದನ ಲೇಪನ, ಶಾಂತಲೆಯ ನರ್ತನ, ಕೋಗಿಲೆಯ ಗಾನಕ್ಕೆ

ಕಾದು ಬಂದಿಹಳು ನಮ್ಮೆಲ್ಲರ ಹೊತ್ತು ಸಲಹಿದ ಅಕ್ಕರೆಯ ಅಮ್ಮನಿಗೆ

ಎದೆಯಿಂದ ತುಂಬಿ ಬಂದ ಕರುಳಿನ ಕರೆಯಿಂದ ಆರತಿ ಕನ್ನಡಮ್ಮನಿಗೆDr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-13816792425268143582011-01-10T17:56:00.001-08:002011-01-10T17:56:50.653-08:00ವಿಧ ವಿಧವಾಗಿ ಇದ್ದವರು; ನೀವ್ಯಾರು?ವಿಧ ವಿಧವಾಗಿ ಇದ್ದವರು; ನೀವ್ಯಾರು?

ಕೆ. ಆರ್. ಎಸ್. ಮೂರ್ತಿ

ಇದ್ದವರು, ಇರುವವರು, ಬರುವವರು;

ಗೆದ್ದವರು, ಬಿದ್ದವರು, ಬಿದ್ದು ಎದ್ದವರು;

ಕದ್ದವರು, ಮೆದ್ದವರು, ಕದ್ದು ಮೆದ್ದವರು;

ಕಳೆದುಕೊಂಡವರು, ಉಳಿಸಿಕೊಂಡವರು, ಬೆಳೆಸಿಕೊಂಡವರು;

ಕಂಡವರು, ಕುರುಡರು, ಓದಿದವರು;

ಓಡಿದವರು, ಕಾಡಿಗೆ ಓಡಿದವರು, ಗುಡ್ಡವನೇರಿದವರು, ಗುಹೆಯ ಸೇರಿದವರು,

ಬೇಡಿದವರು, ಕಾಡಿದವರು,

ಸಿಧ್ಧರು, ಸಂತರು, ಅವಧೂತರು, ಬೂದಿಯಲಿ ಮಿಂದವರು,

ಗಿಡ್ದರು, ಗಡ್ಡದವರು, ಮಡಿದವರು, ಮಾಡಿದವರು, ಮಾಡಿ ಮಡಿದವರು;

ದೊಡ್ಡ ಕುಂಡಿಯವರು, ದಡ್ಡರು, ಭಂಡರು,

ಚಂಡಿಯರು, ಚಿಕ್ಕ ಚಡ್ಡಿಯವರು;

ಸತ್ತವರು, ಬೇಸತ್ತವರು, ವೈಡೂರ್ಯ ಪಡೆದವರು;

ವಡ್ಡರು; ತಿದ್ದುವವರು, ತಿದ್ದಿಕೊಂಡವರು;

ತಿಂಡಿಗೆ ಬೋಂಡ ತಿಂದವರು, ಬೂಂದಿ ತಿಂದವರು,

ಮಿಂದವರು, ಮಿಂದದೆಯೇ ತಿಂದವರು;

ಗುದ್ದಿದವರು, ಗುದ್ದಿಸಿಕೊಂದವರು, ಗುದ್ದಿಸಿಕೊಂಡವರು,

ಮುದ್ದಿಸಿದವರು, ಮುದ್ದಿಸಿಕೊಂಡವರು, ಮುದ್ದು, ಮುದ್ದು ಮಾಡಿ ಕೊಂದವರು;

ಅಂಡ ಆಟವಾಡಿದವರು, ರಂಭೆ ಅನಿಸಿ ಕೊಂಡವರು, ರಂಭೆ ಅನಿಸಿ ಕೊಂಡಿದ್ದೂ ರಂಡೆಯಾವರು,

ರಂಡೆಯಾಗಿ ಮುಂಡೆಯಾದವರು, ಮುಂಡೆಯಾಗಿ ಮುಂಡೆ ಬೋಳಿಸಿಕೊಂಡವರು,

ಮುಂಡೆಯಾದರೂ ಮುಂಡೆ ಉಳಿಸಿಕೊಂಡವರು, ಗುಂಡು ಕುಂಡೆ ಬೆಳೆಸಿಕೊಂಡವರು;

ಗುಂಡು ಕುಡಿದವರು, ಗುಂಡು ಕುಡಿದು ಅಳಿಸಿಹೋದವರು, ಮದ್ದು ತಿಂದವರು;

ಮಡಿ ಮಡಿಯಾಗಿ ಗುಂಡು ಕುಡಿದವರು;

ಚೆಂಡು ಆಡಿದವರು, ಗುಂಡು ಕುಡಿದು ರಂಡೆಯ ಗುಂಡು ಚೆಂಡಾಡಿದವರು........

ಮುಗಿಯದ ವಿಧ, ವಿಧದವರು.

ನೀವು ಇವಲ್ಲಿ ಇರಲೇಬೇಕಲ್ಲವೇ?

ಇವಲ್ಲದೆಯೇ ಬಲು ವಿಧವಿರಲೇ ಬೇಕಲ್ಲವೇ? ಅರಸಿ, ಆರಿಸಿಕೊಳ್ಳಿ; ಬೇಕಾದದ್ದು ಆರಿಸಿಕೊಳ್ಳಿ;

ನಿಮ್ಮರಸ, ನಿಮ್ಮರಸಿ ಅರಸಿದ ಮೇಲೆ ಎಲ್ಲಾ ಬರೆದುಕೊಳ್ಳಿ; ಒಂದು ಕಡೆ ಒಪ್ಪವಾಗಿ ಬರೆದುಕೊಳ್ಳಿ;

ಅವರಿವರು ಯಾರಾದರೂ ಏನೇನು ಅರಸಿ, ಆರಿಸಿ ಬರೆದುಕೊಂಡಿರಬಹುದು?

ಚೆನ್ನಾಗಿ ಯೋಚಿಸಿ ನೋಡಿ!Dr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-12383214784247307232010-12-03T14:36:00.001-08:002010-12-03T14:36:48.159-08:00ನಂಬಿ ಕೆಟ್ಟವರು ನಿಮಗ್ಯಾರಾದರೂ ಗೊತ್ತೇ?ನಂಬಿ ಕೆಟ್ಟವರು ನಿಮಗ್ಯಾರಾದರೂ ಗೊತ್ತೇ?

ಕೆ. ಆರ್. ಎಸ್. ಮೂರ್ತಿ

ನಂಬಿ, ನಂಬಿಸಿ, ನಂಬಿಕೆಯನು ಅವಲಂಬಿಸಿ, "ಅವಲಂಬಿಸಿ" ಎಂದೆಲ್ಲರನೂ ನಂಬಿಸಿ,

ಆವುದನು ಅವಲಂಬಿಸೆ ಸರಿಯೆಂದು ತುಸು ಕೂಡ ಎಣಿಸದೆಯೇ, ಗುಣಿಸದೆಯೇ ತ್ಯಜಿಸಿ

ಕುರುಡು ಮನಸಿಂದ, ಅವಲಂಬನೆಯ ಹಸಿವಿಂದ ನಂಬಿ, ದಿಟವ ಬಿಟ್ಟವರಾರೆಂದು ಗೊತ್ತೇ?

ಉಂಬುವುದು ನಂಜು ಎಂಬ ಅಂಜಿಕೆಯಿಲ್ಲದೆಯೇ, ಉಂಡು ತೇಗಿದ ಲಂಬೋದರರು ಗೊತ್ತೇ?

ಮಾಟಾಚಾರಕ್ಕೆ ಮನವ ಕೊಟ್ಟವರು, ಕೆಟ್ಟ ಗುಟ್ಟನ್ನು ಗಂಟಲಲಿ ಗಟ್ಟಿ ಪಟ್ಟು ಪಿಡಿದವರ ಪತ್ತೆ

ಮತಾಚಾರಕ್ಕೆ ನಾಟಕದಿ ನೆಂಟರಿಷ್ಟರ ಬಿಟ್ಟು ಓಟ ಕಿತ್ತವರು, ಎಲ್ಲಿ ಬಚ್ಚಿ ಪೋದರೆನ್ನುವ ಪತ್ತೆ

ಎದೆಯಲ್ಲಿ ತೊಟ್ಟಿಯ ಹೊತ್ತವರು ಗೊತ್ತೇ? ಚಟ್ಟವ ಹತ್ತುವ ಮುನ್ನ ಸುಟ್ಟಿ ಹೋದವರು ಗೊತ್ತೇ?

ಅವರೇ? ಇವರೇ? ಮತ್ತವರೆ? ಅತ್ತಿತ್ತದವರೇ? ಅಂಥವರು ನೀವೆಯೇ ಇರಬಹುದೆಂದು ಗೊತ್ತೇ?Dr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-3016199802840626432010-11-29T14:15:00.001-08:002010-11-29T14:15:17.322-08:00ಅಚ್ಚರಿಅಚ್ಚರಿ

ಕೆ. ಆರ್. ಎಸ್. ಮೂರ್ತಿ

ಹುಲಿಗಿಂತ ಹುಲಿಯ ಬಾಲ, ಬಾಲಕ್ಕಿಂತ ಬಾಲದ ಕೂದಲು;

ಕೂದಲಿಗಿಂತ ಅದರ ಮೇಲೆ ಜಿಗಿದಾಡುವ ನೊಣದ ಕಾಲು

ಸಿಂಹಾಸನವನ್ನು ಏರಿ ಮೀಸೆ ತಿರುಗುವ ಭೂಪನ ಅಣುಕಿಸಿತ್ತು

ಮೂಗಿನ ಹೊಳ್ಳೆಯೊಳಗೆ ಫಕ್ಕನೆ ತೂರಿದ ಸೊಳ್ಳೆಯ ಕಸರತ್ತು

ಡೊಳ್ಳು ಹೊಟ್ಟೆಯ ಆನೆಯ ಹೊತ್ತು ತಿರುಗುವ ಪುಟ್ಟಿಲಿಯ ಗಮ್ಮತ್ತು

ಜಗಕೇ ಜೀವವ ಕೊಟ್ಟ ಬೆಂಕಿಯ ಉಂಡೆಯ ಕಬಳಿಸುವ ರಾಹು ಕೇತು

ನೂರು ಸೂರ್ಯರ ನುಂಗಿತ್ತು ದಿಟ್ಟ ಪುಟ್ಟ ಕಪ್ಪು ಬಕಾಸುರನ ಬಾಯಿ

ಎಲ್ಲ ಅಚ್ಚರಿಯನೂ ಮೀರಿಸಿದೆ ಆದಿ ಬಿಂದು ಉಗಿದಂಥ ಭವದ ಮಾಯೆDr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-1529236006966878542010-11-27T12:17:00.001-08:002010-11-27T12:17:57.247-08:00ಆಸೆ; ಅಪೇಕ್ಷೆ; ಆಗಮನ, ಭೂತ ಗಮನಆಸೆ; ಅಪೇಕ್ಷೆ; ಆಗಮನ, ಭೂತ ಗಮನ

ಕೆ. ಆರ್.ಎಸ್. ಮೂರ್ತಿ

ಬಂದರೆ ಚೆನ್ನ; ಬರಬಹುದು; ಬರುವುದು;

ಇನ್ನೇನು ಬರಲಿದೆ; ಬಂದೇ ಬಿಡುವುದು;

ಇನ್ನೇನು ಬಂತು; ಬಂದೇ ಬಿಟ್ಟಿತು;

ಇಂದೇ; ಇನ್ನೇನು ಆಗಿ ಹೋಯಿತು;

ನಿನ್ನೆಯೇ ಆಯಿತು; ಮೊನ್ನೆಯೇ ಆಯಿತು;

ಕೆಲವು ದಿನಗಳಾಯಿತು; ವಾರವಾಯಿತು;

ಹಲವು ದಿನಗಳಾಯಿತು; ವಾರಗಳಾಯಿತು;

ತಿಂಗಳಾಯಿತು; ಕೆಲವು ತಿಂಗಳಾಯಿತು;

ಹಲವು ತಿಂಗಳಾಯಿತು; ವರುಶವಾಯಿತು;

ಕೆಲವು ವರುಶಗಳಾಯಿತು;

ಹಲವು ವರುಶಗಳೇ ಆಯಿತು;

ದಶಕಗಳಾಯಿತಂತೆ;

ಶತಮಾನಗಳಾಗಿ ಹೋಯಿತಂತೆ;

ಯಾವಾಗಲೋ ಆಯಿತಂತೆ;

ಯಾವಾಗಲೋ ಆಗಿರಬಹುದು;

ಯಾರಿಗೂ ಗೊತ್ತಿಲ್ಲ

ಬರಲಿದೆ; ಬಂತು; ಹೋಯಿತು; ಮಾಯDr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-16087196355510934462010-11-24T13:06:00.001-08:002010-11-24T13:06:57.310-08:00ನೀವೊಂದು ಹೇಳಿದರೆ....ನೀವೊಂದು ಹೇಳಿದರೆ....

ಕೆ. ಆರ್. ಎಸ್. ಮೂರ್ತಿ

ನೀವು ಹೇಳಿದ್ದೆ ಒಂದು; ಅವರ ಕಿವಿಗೆ ಬಿದ್ದಿದ್ದೇ ಇನ್ನೊಂದು;

ಅವರ ಮನಸ್ಸಿಗೆ ತಾಟಿದ್ದೇ ಮತ್ತೊಂದು; ಹೃದಯಕ್ಕೆ ಇನ್ನೇನೋ ಒಂದು

ಸ್ನೇಹಿತರೊಬ್ಬರು ನಿನ್ನೆ ನನ್ನ ಮುಂದೆ ಬಂದ ತಕ್ಷಣ

ನಾನಂದೆ "ಏನ್ರೀ ಹೊಸಬಟ್ಟೆ ಕೊಂಡು ಕೊಂಡ್ರ?"

ಅವರ ಮುಖದಲ್ಲಿ ಹೆಮ್ಮೆಯ ನಗೆ.

"ಬಹಳ ಚೆನ್ನಾಗಿದೆ ರೀ. ಒಳ್ಳೆ ಕಲರ್ರು; ಒಳ್ಳೆ ದಿಸೈನೂ...."

ನಾನಂದದ್ದು ಅಷ್ಟೇ; ಅವರ ಕಿವಿಗೆ ಬಿದ್ದಿದ್ದೇ ಬೇರೆ.

ಅವರ ಮುಖ ಹಿಗ್ಗಿ, ಅವರ ಹೃದಯ ಬಲೂನಿನ ತರಹ ಊದಿ ಬಿಟ್ಟಿತು.

ಅವರ ಕಿವಿಗೆ ಕೇಳಿದ್ದು: "ನೀವು ಆ ಹೊಸ ಬಟ್ಟೆಯಲ್ಲಿ ಬಹಳಾ ಸುಂದರವಾಗಿ ಕಾಣ್ತೀರ"

ಅವರ ಹೃದಯ ಬಡಿದು ಕೊಂಡಿದ್ದು: "ನಾನು ಈ ಭೂಲೋಕದಲ್ಲೇ ಬಹಳ ಸುಂದರ"

ಹೊಸ ಬಟ್ಟೆ ಒಂದೇ ಅಲ್ಲ; ಅವರ ಮೈಮೇಲೆ, ಅವರ ಮನೆಯಲ್ಲಿ ಇರುವುದೆಲ್ಲ,

ಅವರಿಗೆ ಸೇರಿದ್ದೆಲ್ಲಾದ್ದಕ್ಕೂ ಅದೇ ರೀತಿ ಹೆಮ್ಮೆ, ಭಾವನೆ, ಹೆಚ್ಚುಗಾರಿಕೆ....

ಬಟ್ಟೆ, ಬರೆ, ಮನೆ, ಮನೆಯಲ್ಲಿರುವ ಸುಂದರ ವಸ್ತುಗಳನ್ನೆಲ್ಲಾ

ತಾವೇ ಅಂದು ಕೊಂಡಿರುತ್ತಾರೆ; ಮೆಚ್ಚುಗೆಯೆಲ್ಲಾ ಅವರಿಗೆ ಸೇರತಕ್ಕದ್ದು.

ಬಟ್ಟೆ ಹೊಲಿದವರು ಯಾರೋ; ಮಗ್ಗ ನೇಯ್ದವರು ಯಾರೋ,

ಬಟ್ಟೆಯ ವಿನ್ಯಾಸ ಯಾರ ತಲೆಯಿಂದ ಹೊರ ಬಿತ್ತೋ,

ಯಾರೂ ಯೋಚಿಸುವುದಿಲ್ಲ; ಯಾರೇಕೆ ಮಾತ್ರವಲ್ಲ,

ಯಾವ ಯಂತ್ರ, ಯಾವ ಕಂಪ್ಯೂಟರ್.........

ಎಂದೆಲ್ಲಾ ಯೋಚಿಸ ಬೇಕು ಈಗಿನ, ಹಿಂದಿನ, ಮುಂದಿನ ಶತಮಾನದಲ್ಲಿ.

ನಿಮ್ಮ ಬಟ್ಟೆಯನ್ನು, ನಿಮ್ಮದನ್ನು ನೋಡಿ, ನಿಮ್ಮ ಮನೆಯನ್ನು ನೋಡಿ,

ಯಾರಾದರೂ ಸ್ವಲ್ಪವೋ, ಬಹಳವೋ ಒಳ್ಳೆಯ ಮಾತನಾಡಿದರೆ,

ಏನು ಹೇಳಿ ನೋಡೋಣ? ನಿಜವಾಗಿ ಯಾರಿಗೆ ಸೇರಬೇಕು ಆ ಸಕ್ಕರೆ ಮಾತು?

ಯಾವ ಯಂತ್ರಕ್ಕೆ ಸೇರಬೇಕು? ಅದು ಇನ್ಯಾವ ದೇಶದಲ್ಲಿ ಇರಬಹುದು?

ಆತುರದಲ್ಲಿ ಹಿಗ್ಗುವ ಮುಂಚೆ, ಯೋಚಿಸುವ ತಂತ್ರ ಅಂತರ್ಗತ ಆಯಿತು ತಾನೇ?Dr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-20798885537721988972010-11-24T11:35:00.001-08:002010-11-24T11:35:48.942-08:00ಗೊತ್ತಾಯಿತೇ ನಿಮಗೆ?ಗೊತ್ತಾಯಿತೇ ನಿಮಗೆ?

ಕೆ. ಆರ್. ಎಸ್. ಮೂರ್ತಿ

ಗೊತ್ತು. ಗೊತ್ತಿಲ್ಲ

ಗೊತ್ತೆಂದು ಗೊತ್ತಿಲ್ಲ

ಗೊತ್ತಿರಬಹುದೆಂದೂ ಗೊತ್ತಿಲ್ಲ

ಗೊತ್ತಿಲ್ಲವೆಂದು ಗೊತ್ತಿಲ್ಲ

ಗೊತ್ತಿಲ್ಲವೆಂದು ಒಪ್ಪಿಕೊಳ್ಳುವುದಿಲ್ಲ

ಗೊತ್ತಿಲ್ಲವೆಂದರೆ ತಲೆ ಬಾಗಿಸ ಬೇಕಲ್ಲ

ಮುಖ ತಗ್ಗಿಸಬೇಕಲ್ಲ

ಕೆಲವೋ, ಬಹಳವೋ ಗೊತ್ತು

ಬಹಳ ಬಹಳ ಬಹಳ ಗೊತ್ತಿಲ್ಲ

ಭಾರಿ ಬಹಳ ಗೊತ್ತಿಲ್ಲವೆಂದು ಗೊತ್ತಿಲ್ಲ

ಇನ್ನೊಬ್ಬರ ಮುಂದೆ ಗೊತ್ತಿಲ್ಲ ಎನ್ನುವುದುಂಟೇ!

"ಗೊತ್ತಿಲ್ಲ" ಎಂದು ಬಿಟ್ಟರೆ ಮೀಸೆ ಬೋಳಿಸಿದ ಹಾಗೆ;

ಮಣ್ಣು ಮುಕ್ಕಿದ ಹಾಗೆ; ಬೆತ್ತಲೆಯಾಗಿ ಬಿಟ್ಟ ಹಾಗೆ;

ಹೆಂಗಸಾದರೆ ತಲೆ ಬೋಳಿಸಿಕೊಂಡ ಹಾಗೆ;

ಗಂಡಸಾದರೆ ಇದ್ದಿಕಿದ್ದಂತೆಯೇ ನಪುಂಸಕನಾದ ಹಾಗೆ.

ಏನಂತೀರಿ ನೀವು?

ನಿಮ್ಮಗೆ ಏನೆಲ್ಲಾ ಗೊತ್ತು?

ಏನೇನು ಗೊತ್ತಿಲ್ಲ?

ನಿಮಗೆ ಸಿಕ್ಕವರನ್ನೆಲ್ಲಾ, ನಿಮ್ಮ ಸ್ನೇಹಿತರನ್ನೆಲ್ಲಾ,

ನಿಮ್ಮ ಸಂಸಾರದಲ್ಲಿ ಇರುವವರನ್ನೆಲ್ಲಾ,

ನಿಮ್ಮ ಗುರುಗಳನ್ನೆಲ್ಲಾ, ನಿಮ್ಮ ಮಠದ ಸ್ವಾಮಿಗಳನ್ನೆಲ್ಲಾ,

ಈ ಪ್ರಶ್ನೆಗಳ್ಳನ್ನು ಕೇಳಿ ನೋಡಿ.

ಯಾರಾದರೂ ಮುನಿಸಿಕೊಂಡರೆ,

ಯಾರಾದರೂ ಏನೂ ಹೇಳದೆ ಹೋದರೆ,

ಯಾರಾದರೂ ನಿಮ್ಮ ಜೊತೆ ಮಾತಾಡುವುದನ್ನೇ

ಬಿಟ್ಟುಬಿಟ್ಟರೆ........

ಗೊತ್ತಾಯಿತಲ್ಲ? ಗೊತ್ತಾಯಿತೇ ನಿಮಗೆ?Dr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-66126109507678356442010-11-24T11:09:00.000-08:002010-11-24T11:09:08.574-08:00ಗೊತ್ತಾಯಿತೇ ನಿಮಗೆ?ಗೊತ್ತಾಯಿತೇ ನಿಮಗೆ?

ಕೆ. ಆರ್. ಎಸ್. ಮೂರ್ತಿ

ಗೊತ್ತು. ಗೊತ್ತಿಲ್ಲ

ಗೊತ್ತೆಂದು ಗೊತ್ತಿಲ್ಲ

ಗೊತ್ತಿರಬಹುದೆಂದೂ ಗೊತ್ತಿಲ್ಲ

ಗೊತ್ತಿಲ್ಲವೆಂದು ಗೊತ್ತಿಲ್ಲ

ಗೊತ್ತಿಲ್ಲವೆಂದು ಒಪ್ಪಿಕೊಳ್ಳುವುದಿಲ್ಲ

ಗೊತ್ತಿಲ್ಲವೆಂದರೆ ತಲೆ ಬಾಗಿಸ ಬೇಕಲ್ಲ

ಮುಖ ತಗ್ಗಿಸಬೇಕಲ್ಲ

ಕೆಲವೋ, ಬಹಳವೋ ಗೊತ್ತು

ಬಹಳ ಬಹಳ ಬಹಳ ಗೊತ್ತಿಲ್ಲ

ಭಾರಿ ಬಹಳ ಗೊತ್ತಿಲ್ಲವೆಂದು ಗೊತ್ತಿಲ್ಲ

ಇನ್ನೊಬ್ಬರ ಮುಂದೆ ಗೊತ್ತಿಲ್ಲ ಎನ್ನುವುದುಂಟೇ!

"ಗೊತ್ತಿಲ್ಲ" ಎಂದು ಬಿಟ್ಟರೆ ಮೀಸೆ ಬೋಳಿಸಿದ ಹಾಗೆ;

ಮಣ್ಣು ಮುಕ್ಕಿದ ಹಾಗೆ; ಬೆತ್ತಲೆಯಾಗಿ ಬಿಟ್ಟ ಹಾಗೆ;

ಹೆಂಗಸಾದರೆ ತಲೆ ಬೋಳಿಸಿಕೊಂಡ ಹಾಗೆ;

ಗಂಡಸಾದರೆ ಇದ್ದಿಕಿದ್ದಂತೆಯೇ ನಪುಂಸ್ಕನಾದ ಹಾಗೆ.

ಏನಂತೀರಿ ನೀವು?

ನಿಮ್ಮಗೆ ಏನೆಲ್ಲಾ ಗೊತ್ತು?

ಏನೇನು ಗೊತ್ತಿಲ್ಲ?

ನಿಮಗೆ ಸಿಕ್ಕವರನ್ನೆಲ್ಲಾ, ನಿಮ್ಮ ಸ್ಣೇಹಿತರನ್ನೇಲ್ಲಾ,

ನಿಮ್ಮ ಸಂಸಾರದಲ್ಲಿ ಇರುವವರನ್ನೆಲ್ಲಾ,

ನಿಮ್ಮ ಗುರುಗಳನ್ನೆಲ್ಲಾ, ನಿಮ್ಮ ಮಠದ ಸ್ವಾಮಿಗಳನ್ನೆಲ್ಲಾ,

ಈ ಪ್ರಶ್ನೆಗಳ್ಳನ್ನು ಕೇಳಿ ನೋಡಿ.

ಯಾರಾದರೂ ಮುನಿಸಿಕೊಂಡರೆ,

ಯಾರಾದರೂ ಏನೂ ಹೇಳದೆ ಹೋದರೆ,

ಯಾರಾದರೂ ನಿಮ್ಮ ಜೊತೆ ಮಾತಾಡುವುದನ್ನೇ

ಬಿಟ್ಟುಬೆಟ್ಟರೆ........

ಗೊತ್ತಾಯಿತಲ್ಲ? ಗೊತ್ತಾಯಿತೇ ನಿಮಗೆ?Dr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-18179476253787981512010-11-12T17:40:00.001-08:002010-11-12T17:40:09.626-08:00ಕಿವಿ ಕೊಟ್ಟು ಕೇಳಿಕಿವಿ ಕೊಟ್ಟು ಕೇಳಿ

ಕೆ. ಆರ್. ಎಸ್. ಮೂರ್ತಿ

ಡಂಗುರ ಢಂ, ಡಂಗುರ ಢಂ, ಕೇಳಿರೀ! ಕೇಳಿರೀi! ಕಿವಿ ಕೊಟ್ಟು ಕೇಳಿರೀ!

ಬಿಸಿ, ಬಿಸಿ, ಸುದ್ದಿ. ಗಾಳಿಯಲಿ ತೇಲಿ ಬಂದಿರುವ ನಂಬಲಾಗದ ಆಲಿಸಿರಿ

ನಾಗ ಮುಂಗಸಿಯರ ಸುಮಹೂರ್ತ ಲಗ್ನ; ರಾಮ ರಾವಣರ ಮಿತ್ರೋತ್ಸವ

ಹಿರಣ್ಯ ಕಷ್ಯಪು ನಡೆಸುವನು ಇಡೀ ರಾತ್ರಿ ಹರಿ ಭಜನೆಯ ಜಾಗರಣೆ ಸೇವೆ

ಬೀಮ ಧುರ್ಯೋಧನರ ಸಂಧಾನ, ಬೀಷ್ಮ ಶಿಖಂಡಿಯರ ಯುಗಳಗಾನ

ಹನುಮಂತ ಚೆಂದೊಳ್ಳಿ ಹಿಡಂಬಿಯರ ಪ್ರೇಮಾಲಾಪ, ನಾಟ್ಯ ಪ್ರದರ್ಶನ

ಕಾಗೆ ಕೋಗಿಲೆಗೆ ಕಲಿಸಿದ ಸುಮಧುರ ರಾಗಗಳ ಸಂಗೀತ ಕಲೆಯ ಮೇಳ

ಉಪ್ಪಿನ ಬಿಸಿ, ಬಿಸಿ, ಪಾಯಸ, ಕಬ್ಬಿಣದ ಕಾಳುಗಳ ಹೂರಣದ ಹೋಳಿಗೆ

ಕಳ್ಳನ ಭುಜದ ಮೇಲೆ ಪೊಲೀಸನ ಕೈ, ಕಳ್ಳನ ಕೈ ಪೊಲೀಸನ ಜೇಬೊಳಗೆ

ಅರ್ಧ-ಅರ್ಧ ಮಸಾಲೆ ದೋಸೆ, ಜಾಮೂನು, ಬೈಟೂ ಕಾಫಿ, ಬಿಲ್ಲು ಯಾರಿಗೆ?

ಏನ್ರೀ? ನಂಬುವುದಿಲ್ಲವೋ ನೀವು? ಅಸಂಬಧ್ಧ ಪ್ರಲಾಪ ಅಂತೀರಾ ನೀವೆಲ್ಲಾ?

ಯಾರಿಗೆ ಗೊತ್ತು? ಅಂತಹ ಕಾಲಾನೂ ಬರಬಹುದು! ಸಾಧ್ಯ ಸ್ವಾಮಿ ಎಲ್ಲ.

ತೆರಿಗೆ, ಕಂದಾಯ ಅಧಿಕಾರಿ ತನ್ನ ಮಗಳನ್ನು ಮೋಸಗಾರ ವ್ಯಾಪಾರಿಗೆ ಕೊಟ್ಟ

ಪೊಲೀಸನ ಮಗನಿಗೆ ಕಳ್ಳನಾಗುವ ಅತಿ ಅಸ್ಸೆ ಅಂತ ಅವನ ತಾಯಿಗೆ ಹೇಳಿ ಬಿಟ್ಟ

ಅಪ್ಪ ವೆಂಕಟರಮಣನ ಗುಡಿಯಲ್ಲಿ ಪೂಜಾರಿ, ಮಗ ಕುಡಿಯೋದು ವೈನು, ಬೀರು

ಅವನಿಗೆ ಬೇಕು ಚಿಕ್ಕನ್ನು, ಮಟನ್ನು, ದಿನ್ನಕ್ಕೆ ಎರಡು ಸಲ; ಅವನದು ಕದ್ದ ಕಾರು

ಬೇಜಾರು ಮಾತ್ರ ಮಾಡಿಕೋ ಬೇಡಿ; ನನಗೆ ಗೊತ್ತಿರಲಿಲ್ಲ ನೀವು ಸತ್ಯಾನೆ ಹೇಳೋದು

ಇದ್ದದ್ದು ಹೇಳಿದೆ ಅಷ್ಟೇ; ನನ್ನ ಖಯಾಲಿ ಡಂಗುರ ಹೊಡೆಯೋದು, ಕವನ ಬರೆಯೋದುDr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-47616230202000474032010-11-12T14:32:00.000-08:002010-11-12T14:32:00.526-08:00ಸುಮ್ಮನೆ ತಲೆ ಆಡಿಸಿ ಸಾಕುಸುಮ್ಮನೆ ತಲೆ ಆಡಿಸಿ ಸಾಕು

ಕೆ. ಆರ್. ಎಸ್. ಮೂರ್ತಿ

ಹೂಂ? ಉಹೂಂ?

ಹೌದು, ಅದೂ ಹೌದು, ಇನ್ನೊಂದೂ ಹೌದು. ಆಹಾಂ!

ಹುಟ್ಟು, ಹುಟ್ಟಿದ್ದು, ಹುಟ್ಟುವುದು, ಹುಟ್ಟಿಸುವುದು ಒಂದೇ:

ಹೂಂ? ಉಹೂಂ?

ತಿಂಡಿ, ತಿಂದಿದ್ದು, ತಿನ್ನುವುದು, ತಿನ್ನಿಸುವುದು ಒಂದೇ:

ಹೂಂ? ಉಹೂಂ?

ನಾಗ, ಮುಂಗುಸಿ; ಹುಲಿ, ಹುಲ್ಲೆ; ಹುಲ್ಲು, ಹಸು ಒಂದೇ:

ಹೂಂ? ಉಹೂಂ?

ಕಣ್ಣು ಮುಚ್ಚುವುದು, ಬಿಚ್ಚುವುದು, ಮಿಟುಕಿಸುವುದು ಒಂದೇ:

ಹೂಂ? ಉಹೂಂ?

ಶಂಕರ, ಚಾಂಡಾಲ, ಪುರಂದರ, ವಿಠಲ; ಆಕ್ಕಮ, ಮಹಾದೇವ ಒಂದೇ:

ಹೂಂ? ಉಹೂಂ?

ನಿನ್ನೆ, ಇಂದು, ನಾಳೆ; ನೀರು, ಮಂಜು, ಆವಿ; ಹುಲ್ಲು, ಹಾಲು, ಮೊಸರು ಒಂದೇ:

ಹೂಂ? ಉಹೂಂ?

ಹೇಳಿ! ಹೌದೋ? ಅಲ್ಲವೋ? ಸುಮ್ಮನೆ ತಲೆ ಆಡಿಸಿ ಸಾಕು: ಹೂಂ? ಉಹೂಂ?Dr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-50574746560916726062010-11-08T15:48:00.001-08:002010-11-08T16:14:05.796-08:00ಆಲದ, ಆಳದ ಬೇರು ಹಾರಿ ಹೋದಂತೆಆಲದ, ಆಳದ ಬೇರು ಹಾರಿ ಹೋದಂತೆ

ಕೆ. ಆರ್. ಎಸ್. ಮೂರ್ತಿ

ಎಲ್ಲಿಂದಲೋ ಬಂದವರು

ಇವರೆಲ್ಲಾ ಎಲ್ಲಿದ್ದಂದಲೋ ಬಂದರಂತೆ

ಇಲ್ಲಿದ್ದವರು ಎಲ್ಲೋ ಹೋದರಂತೆ

ಅಲ್ಲಿಂದ ಇಲ್ಲಿಗೆ ಬಂದವರು; ಬಂದು ಇಲ್ಲಿಯೇ ಇದ್ದು ಬಿಟ್ಟವರು

ಇಲ್ಲಿಯೇ, ಹತ್ತಿರದಲ್ಲಿಯೇ ಇದ್ದವರು ಅದೆಲ್ಲಿಗೋ ಹೋಗಿಬಿಟ್ಟವರು

ಮತ್ತೆ ಇಲ್ಲಿಗೆ ಬರದೇ ಇದ್ದವರು; ಯಾರು ಯಾವಾಗ ಎಲ್ಲಿರಬೇಕು?

ಎಂಬುದೆಲ್ಲಾ ಅವರವ ಹಣೆಯ ಬರಹವೇನೋ!

ಊರು ಬಿಟ್ಟು, ಕೇರಿ ಬಿಟ್ಟು, ಪ್ರಾಂತ್ಯ, ಪ್ರದೇಶ ಬಿಟ್ಟು,

ದೇಶವನ್ನೇ ಬಿಟ್ಟು ಹೊರಟು ಹೋದವರು; ಹೊರತು ಆದವರು.

ಹೊಸಬರು ಹಳಬರಾದವರು, ಬಳಗವಾದವರು

ಸುಡುವ ಬಿಸಿಲಿನಲ್ಲಿ ನಡೆದು, ತಲೆಯ ಮೇಲೆ,

ಹೊಟ್ಟೆಯ ಮೇಲೆ ತಣ್ಣಗಿನ ಬಟ್ಟೆ ಹಾಕಿಕೊಂಡು ಹೋದವರು;

ರಾತ್ರೋ, ರಾತ್ರಿ ಯಾರಿಗೋ ಹೆದರಿ ಓಡಿ ಹೋದವರು,

ತುರುಕರುಗಳಿಗೆ ಹೆದರಿ, ತುರುಕರುಗಳನ್ನು ನಡೆಸಿಕೊಂಡು,

ಕುದುರೆಯನು ಏರಿ ಸವಾರಿ ಹೋದವರು,

ಗಾಡಿಯಲ್ಲಿ ಹೆಂಡಿರು, ಹುಡುಗರ ಜೊತೆ ಕೂತು ಹೋದವರು.

ಹುಲ್ಲಿನ ಮೈದಾನವನ್ನು ಬಿಟ್ಟು, ಬೆಟ್ಟದ ಮೇಲೆ ಅಡಗಿದವರು

ನದಿಯಲ್ಲಿ, ಸಾಗರದಲ್ಲಿ, ಸಮುದ್ರದಲ್ಲಿ ದೋಣಿಯಲ್ಲಿ ತೇಲಿ ಹೋದವರು

ಹಕ್ಕಿಗಳಂತೆ ಹಾರಿ ವಲಸೆ ಹೋದವರು, ಮತ್ತೆ ಬರದೆಯೇ ಇರುವವರು

ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಪೂರ್ವಜರ ಹಣೆಬರಹ, ನೆಲದ ಋಣ,

ಆನು, ನೀನು, ತಾನು, ಅವನು, ಅವಳು, ಅವರುಗಲಿಗೆಲ್ಲಾ

ಅವರದೇ ಋಣ; ಬೇರೆ, ಬೇರೆ ಬರಹ;

ನೆಲಸುವಿಕೆ; ಹೊಸ, ಹೊಸ ಕನಸಿನಲಿ ಕನವರಿಸುವಿಕೆ.

ಪೂರ್ವಜರ ಕನಸೇ ಬೇರೆ, ಇವರ ಅಪೂರ್ವ ಭೂತ ನನಸೆ ಬೇರೆ.

ಮೊಗ್ಗುಗಳು, ಅರಳುವ ಕುಸುಮಗಳು, ಭಾರದಿಂದ ತೂಗುವ ಹಣ್ಣುಗಳು.

ಒಳಗಿನ ಬೀಜಗಳು, ಜೀನುಗಳು ಬೇರೆ, ಬೇರೆ, ಕೊಂಬೆಗಳು ಬೇರೆ;

ಕಾಂಡ ಮಾತ್ರ ಅದೇ, ತಾಯಿ, ತಂದೆ, ಮಿಕ್ಕ ಮಂದಿ ಬೇರು ಮಾತ್ರ ಒಂದೇ;

ಬೇರನ್ನೇ ಕಿತ್ತು ಒಗೆದು ಹೋಗಿ ಬಿಟ್ಟು, ಇನ್ನೆಲ್ಲೋ ಬೇರು ಬಿಟ್ಟಂತೆ

ಆಲದ ಮರವನ್ನು ಬುಡದಿಂದ ಕಿತ್ತು ನೆಡವೋರು ಉಂಟೆ? ಇರಬೇಕು, ಹೀಗಿರಬೇಕು

Dr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-87947395746339372322010-11-07T15:14:00.000-08:002010-11-07T15:14:04.285-08:00ಅಂಟಿದ ನೆಂಟುಅಂಟಿದ ನೆಂಟು

ಕೆ. ಆರ್. ಎಸ್. ಮೂರ್ತಿ

ಹುಟ್ಟಿನಿಂದಲೇ ಅಂಟಿಕೊಳ್ಳುವುದಯ್ಯಾ ನೆಂಟರಿಷ್ಟರ ಅಂಟು

ಹುಟ್ಟಿಗೆ ಮುಂಚೆಯೇ ಜೀವ ಕೊಟ್ಟವಳ ಹೊಟ್ಟೆಯಲಿ ಗಂಟು

ಅವಳ ಧಮನಿಯ ಧರ, ಧರ ರಕ್ತದ ಧಾರೆ ರಾಗದ ಸೆರೆ ಹಾಕಿ

ಹೊಕ್ಕಳ ಬಳ್ಳಿಯ ಜೊತೆಯೇ ಹೊರಬಿದ್ದು, ಅತ್ತು ಬಿಕ್ಕಿ, ಬಿಕ್ಕಿ

ತುಂಬು ನಿತಂಬದ ಅಂಬನು ಹೀರಿ, ಉಂಡಿದ್ದು ರುಚಿಯಲ್ಲವೇ?

ಪ್ರತಿ ಗುಟುಕನ್ನೂ, ಗಟ, ಗಟ ಕುಡಿದು, ತೇಗಿದ್ದು ನೆನಪಿದೆಯೇ?

ಅವಳ ಅಪ್ಪುಗೆ, ಬೆಪ್ಪು ನಿನಗೆ ತಿಳಿಯದಿರದು ಅಬಲೆಯ ದೊಡ್ಡ ಬಲೆ

ಒಂದೊಂದರಂತೆ ಇಹದ ಪ್ರತಿ ಸೆಳೆತವೂ ಹಿಡಿದು ಹಾಕಿತ್ತು ಜಾಲೇ

ಅನುಜ, ಅನುಯಾಯಿ, ಒಡನಾಟಿ, ಮನವ ಅಪಹರಿಸಿದ ಕೊಮಲೆಯರೆಲ್ಲ

ಹೊಸ, ಹೊಸ, ಬಂಧನಗಳ ಹೊಸೆದಾಯ್ತು, ಕಳಚಿ ಹೊರ ಬರುವ ಬಗೆಯಿಲ್ಲ

ಉಸಿರು, ಉಸಿರಿಗೂ, ಬಸಿರಿನಿಂದಲೇ ನಿನ್ನ ಹಿಂಬಾಲಿಸಿತು ಭವದ ಬೇತಾಳ

ವಾಸನೆಯು ಬಿಗಿಯಾಗಿ ನೀ ಸಿಕ್ಕಿಯಾಯ್ತು ತೀರಿಸು ಜೀವ ಸವೆಸುತಾ ಸಾಲDr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-23585312474600404482010-11-07T12:16:00.000-08:002010-11-07T12:16:13.587-08:00ಆನೇಆನೇ

ಕೆ. ಆರ್. ಎಸ್. ಮೂರ್ತಿ

ಆನೇ ಕಿವಿ, ಆನೇ ಕಣ್ಣು, ಆನೇ ತಲೆ, ಆನೇ ಚರಣ, ಆನೇ ಕರಣ.

ಆನೇ ಹಲ್ಲು, ಆನೇ ಜೊಲ್ಲು, ಆನೇ ಲಂಬೋದರ, ಲಂಬ ನಾಸಿಕ

ಆನೇ ತದೇಕ ಚಿತ್ತವು, ಅತ್ತಿತ್ತ ಸುತ್ತಾಡುವ ಕೋತಿ ಮನವೂ ಆನೇ

ಆನೇ ಅತಿ ಉದಾರ ದಾನಿಯು, ಕೈ ಪಿಡಿದು ಬೇಡುವವನೂ ಆನೇ

ಆನೇ ಕತ್ತಲು, ಬೆಳಕೂ ಆನೇ; ಆನೇ ಮಳೆಯೂ, ಬೆಳೆಯೂ ಆನೇ

ಆನೇ ನದಿ, ಸಾಗರಗಳು; ಬೀಸುವ ಗಾಳಿ, ಮಾರುತಗಳೂ ಆನೇ

ಆನೇ ಭವನ, ಭುವನವೂ ಆನೇ; ಆನೇ ಬಾನು, ಭಾನುವೂ ಆನೇ

ಸಕಲ ಗ್ರಹಗಳೂ ಆನೇ; ಅನೇಕಾನೇಕ ನೋವ, ತಾರೆಗಳೂ ಆನೇ

ಆನೇ ಸರಸ, ವಿರಸವೂ ಆನೇ; ಸಕಲ ರಸ, ಭಾವ, ಅನುಭವವೂ ಆನೇ

ಆನೇ ನೀರಸ ವಿರಕ್ತಿಯೂ; ರಾಗ ರಹಿತ, ಸುಖ, ದುಖ ನಿರ್ವಿಭಾವ ಆನೇ

ಹುಟ್ಟಿಸುವನು ಆನೇ, ಸುಡುವವನೂ ಆನೇ; ಪೊರೆಯುವವನು ಆನೇ

ಬೆಳೆಸುವವನೂ ಆನೇ, ಉಳಿಸುವವನೂ ಆನೇ, ಅಳಿಸುವನೂ ಆನೇ

ಆನೇ ಸತ್ಯ, ಅಸತ್ಯವೂ ಆನೇ; ಆನೇ ಮಿಥ್ಯ, ನಿತ್ಯ ಸತ್ಯವೂ ಆನೇ

ಆನೇ ಭಯ, ಭಕ್ತಿಯಲಿ ಭಜಿಪನೂ, ಪೂಜಿಸಿಕೊಳ್ಳುವವನೂ ಆನೇ

ಆನೇ ಹೊರಗೂ, ಆನೇ ಒಳಗೂ; ಇಳೆಯಲೆಲ್ಲ, ಇಹದಲ್ಲೆಲ್ಲೆಲ್ಲಾ ಆನೇ

ಆನೇ ಅಣು; ಎಲಕ್ಟ್ರಾಣುವೂ, ಪ್ರೋಟಾನೂ, ನ್ಯೂಟ್ರಾನುಗಳೂ ಆನೇ

ಆನಿಲ್ಲದಿಲ್ಲ, ಆನೇ ಎಲ್ಲ, ಹಿಂದು, ಮುಂದು, ಎಂದೂ ಇರುವುದೂ ಆನೇ

ಆನೆಲ್ಲೂ ಇಲ್ಲ, ಆನೆಲ್ಲೂ ಇರಬಲ್ಲ, ಅನೇಕಾನೇಕ ಅನುಮಾನವೂ ಆನೇDr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-64127975468279428742010-11-06T16:16:00.000-07:002010-11-06T16:16:03.763-07:00ಕೇಳಿ: ನನ್ನ ಅದೃಷ್ಟಕೇಳಿ: ನನ್ನ ಅದೃಷ್ಟ

ಕೆ. ಆರ್. ಎಸ್. ಮೂರ್ತಿ

ನನ್ನ ಅದೃಷ್ಟಕ್ಕೆ ನನಗೆ ಒಬ್ಬಳು ಸುಂದರ ಮಡದಿ

ನಡೆಸಿದಾಗಲೆಲ್ಲ ಕೆಡವಿದಳು ಹೆಣ್ಣು ಮಕ್ಕಳ ಆತರದಿ

ನನ್ನ ನೂರಾರು ಕಂದಗಳಿಗೆ ಹೆಸರಿಟ್ಟೆ ಹಲವಾರು

ಹೆಸರಿನಂತೆಯೇ ಇರಲೆಂದು ಅವರ ಪ್ರತಿ ಉಸಿರಿರು

ಆಶಾ, ಉಷಾ, ನಿಶಾ, ಯಶ, ಭಾಷಾ, ಅನೇಕ ಷ ಶ

ನೀತ, ಗೀತ, ಕಥಾ, ಕವಿತಾ, ಮಾತಾ, ಎಲ್ಲಥರದ ಹೃತಿ, ತ

ಪದ್ಮ, ಮಲ್ಲಿಕಾ, ಸುಗಂಧ, ಎಲ್ಲ ಬಣ್ಣದ, ಅಂದದ ಕುಸುಮ

ಅರ್ಚನ, ಪೂಜಾ, ಶ್ರುತಿ, ವ್ರತ, ಯಾವಾಗಲೂ ದೇವರ ನಾಮ

ಪ್ರೇಮ, ಪ್ರೀತಿ, ರತಿ, ಮಿಲನ ಅವರಿಗೆ ಬೇಕಾದ ಒಲವಿರಲಿ ಅಂದೇ

ಸರಸ್ವತಿ, ಲಕ್ಷ್ಮಿ, ಪಾರ್ವತಿ, ಸೀತಾ, ಗಾಯತ್ರಿ ದೇವತೆಯರೆಂದೇ

ಬೆಳೆಯುತ್ತಾ ಅವರೆಲ್ಲ ಏನಾದರು ಎಂದು ಮಾತ್ರ ನನ್ನನ್ನು ಕೇಳಬೇಡಿ

ಉಳಿದದ್ದು ನೀವೇ ಬೇಕಾದ ಹಾಗೆ ಊಹಿಸಿ ಕೊಳ್ಳಿ, ಆದರೆ ಅಳಬೇಡಿDr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-77876943867520542762010-11-06T15:30:00.001-07:002010-11-06T15:44:48.290-07:00ನಿಷೆಯಲ್ಲಿಯೂ ಒಂದು ಕಿರಣನಿಷೆಯಲ್ಲಿಯೂ ಒಂದು ಕಿರಣ

ಕೆ. ಆರ್. ಎಸ್. ಮೂರ್ತಿ

ಅತ್ತ, ಇತ್ತ, ಸುತ್ತ ಮುತ್ತ, ಎತ್ತೆತ್ತಲೂ ಸುತ್ತಿಕೊಂಡಿದೆ ಕತ್ತಲೆಯ ಕಾಟ

ಬಟ್ಟ ಬಯಲಲ್ಲಿ, ಬಿಟ್ಟ ಕಣ್ಣಲ್ಲಿ, ಅಟ್ಟೂ, ಇಟ್ಟೂ, ತಡಕಾಡುವ ಹುಚ್ಚಾಟ

ಕಿಡಿಯೊಂದ ಕಂಡರೆ ಸಾಕು, ಎಲ್ಲೆಲ್ಲೂ ಬೆಳಕ ಚೆಲಾಡುವ ತವಕದಲಿ

ಅಡಿಯಿಂದ ಅಡಿಗೆ ಸಾಗಿ, ಇಡೀ ಬಯಲ ಹುಡುಕಿ, ಕೊನೆಗೆ ಬರಿಗೈಲಿ

ಹಿಡಿಯಷ್ಟು ಇಂಧನ ಸಾಕು, ಹುಲ್ಲಿನ ಮೈದಾನದಲಿ ಮತ್ತೆ, ಮತ್ತೆ ಕೈಹಾಕಿ

ಬರಿ ಖಾಲಿ ಮನದಲ್ಲಿ, ಬಡ ಬಡ ಬಡಿಯುವ ಎದೆಯಲ್ಲಿ ಕುಸಿದು ಸುಸ್ತಾಗಿ

ಹತಾಶೆ; ಮುಂದಿನ ಗತಿಯೇನು, ಇಂದಿನ ವತಿಯೇನು, ಹಿಂದನು ಮರೆವೆನೇನು?

ಕಿರು ಆಶೆ, ಕಿರಣವೊಂದಾದರೂ ಉಳಿದಿದೆಯೋ, ಅದಾದರೂ ಬೆಳಗುವುದೇನು?Dr. KRS Murthy - A Geniushttp://www.blogger.com/profile/17116340018920818925noreply@blogger.com0tag:blogger.com,1999:blog-7505947304773157819.post-92232488189901795082010-11-06T13:40:00.000-07:002010-11-06T14:35:35.619-07:00ಕತ್ತಲೆಯಲಿ ಅಡಗಿದೆ ಬೆಳಕುಕತ್ತಲೆಯಲಿ ಅಡಗಿದೆ ಬೆಳಕು

ಕೆ. ಆರ್. ಎಸ್. ಮೂರ್ತಿ

ಕತ್ತಲೆಯಿಂದ ಬೆಳಕಿಗೆ ಸಾಗಲು ಕಾತರ; ಮಬ್ಬಿನಿಂದ ಎದ್ದೇಳುವ ಥರ

ಅರಿ: ಇರುವುದು ಕತ್ತಲೆಯ ಒಳಗೆ, ಎಂದೂ ಉರಿಯುತಿಹ ಬೆಳಕಿನ ದೀವಿಗೆ

ರಾಗ ವಿರಕ್ತಿಯೂ ಸಾಕು ಮುಕ್ತಿ ಸಾಧಿಸಲು; ಯುಕ್ತಿ ಬೇಕು ಶಕ್ತಿಯ ಎದ್ದೆಬ್ಬಿಸಲು

ಕೆಂಡದ ಅಂದ ಕಾದ ಇದ್ದಿಲಿಗೆ ಗೊತ್ತು; ಕಪ್ಪು ಕೆಂಪಾದಾಗ ಸುಪ್ತವು ಚೇತನ ಆಯ್ತು

ಕತ್ತಲೆಯಲಿ ಅಡಗಿದೆ ಬೆಳಕಿನ ಚೇತನ; ಮತ್ತೇಕೆ ಹುಡುಕುವೆ ಎತ್ತೆತ್ತಲಿನ ತಾಣDr. KRS Murthy - A Geniushttp://www.blogger.com/profile/17116340018920818925noreply@blogger.com0