ಶುಕ್ರವಾರ, ಮೇ 14, 2010

ಪರಮಾಣು ಕವಿತೆಗಳು

ಪರಮಾಣು ಕವಿತೆಗಳು

ಕೆ. ಆರ್. ಎಸ್. ಮೂರ್ತಿ

ನಾನು ಹೊಸ ಪ್ರಕಾರದ ಕವಿತೆಗಳನ್ನು ಪ್ರಾರಂಭಿಸಿದ್ದೇನೆ. ಈ ನವೀನ ಪ್ರಕಾರದ ಹೆಸರು: ಪರಮಾಣು ಕವಿತೆ.
ಈ ಪ್ರಕಾರದಲ್ಲಿ ನಾನು ಉಪ ಪ್ರಕಾರಗಳನ್ನು ಗುರುತಿಸಿದ್ದೇನೆ. ಈ ಉಪ ಪ್ರಕಾರಗಳು:

೧. ಕೆಲವೇ ಪದಗಳ ಕವಿತೆ
೨. ಒಂದೇ ಪದದ ಕವಿತೆ
೩. ಕೆಲವೇ ಅಕ್ಷರಗಳ ಕವಿತೆ
೪. ಒಂದೇ ಅಕ್ಷರದ ಕವಿತೆ
೫. ಚಿನ್ಹೆಗಳ ಕವಿತೆ
೬. ಶೂನ್ಯ ಕವಿತೆ
೭. ಮಾಯಾವಿ ಕವಿತೆ
೮. ಸಂಭಾಶಣಾ ಪರಮಾಣು ಕವಿತಾ ಮಾಲೆ - ಈ ಕವಿತಾ ಮಾಲೆಯಲ್ಲಿ ಕವಿಯು ಅನೇಕ ಕವಿತೆಗಳನ್ನು ಸಂಭಾಷಣೆಯ ರೀತಿಯಲ್ಲಿ ಪೋಣಿಸುತ್ತಾನೆ.
೯. ಪರಮಾಣು ಕವಿತಾ ವಿನ್ಯಾಸ - ಈ ಪ್ರಕಾರದಲ್ಲಿ ಅನೇಕ ಉಪ ಪ್ರಕಾರದ ಪರಮಾಣು ಕವಿತೆಗಳನ್ನು ವಿಶೇಷ ವಿನ್ಯಾಸಗಳಲ್ಲಿ ಜೋಡಿಸಬಹುದು. ಓದುಗರು ವಿವಿಧ ಕ್ರಮದಲ್ಲಿ ಓದಿದರೆ ಈ ಕವಿತಾಗರಗಳು ವಿವಿಧ ಅರ್ಥಗಳನ್ನು ಕೊಡುವುವು.

ಕವಿತೆಯ ಶೀರ್ಷಿಕೆಯಲ್ಲಿ ಉಪಯೋಗಿಸುವ ಅಕ್ಷರಗಳ ಹಾಗೂ ಪದಗಳ ಸಂಖ್ಯೆಯನ್ನು ನಿಭಂದಿಸಬಹುದು. ಈ ನಿಭಂದನೆಯಿಂದ ಕವಿಗಳು ಅತಿ ಉದ್ದದ ಶೀರ್ಷಿಕೆಯನ್ನು ಉಪಯೋಗಿಸುವುದಕ್ಕೆ ಅವಕಾಶ ಕೊಡದ ಹಾಗೆ ನಿಯಂತ್ರಿಸಬಹುದು.

ಉದಾಹರಣೆಗೆ, ನಾನು ಈ ಕೆಳಗಿನ ಪರಮಾಣು ಕವಿತೆಗಳಲ್ಲಿ ಕೆಲವೇ ಪದಗಳ ಮಿತಿ ಹಾಕಿಕೊಂಡಿದ್ದೇನೆ.

ಕವಿತೆ ೧

ಕವಿತೆಯ ಉಪಪ್ರಕಾರ: ಒಂದಕ್ಷರದ ಕವಿತೆ

ಶೀರ್ಷಿಕೆ: ನಾನು ಹುಟ್ಟಿಸಿದ ಈ ಜಗತ್ತಿನಲ್ಲಿ ನಾನೊಬ್ಬನೇ ಇದ್ದೇನೆಯೇ?

ಕವಿತೆ: ಹುಂ.

ಇದನ್ನು ಮುದ್ರಿಸುವಾಗ "ಹುಂ" ಅಕ್ಷರವನ್ನು ದೊಡ್ಡದಾಗಿ ಮುದ್ರಿದರೆ ಕವಿತೆಯ ಗೂಡಾರ್ಥ ಪ್ರಕಟವಾಗುತ್ತದೆ. ಇದರ ಜೊತೆಗೆ, ಪೂರ್ಣವಿರಾಮವನ್ನು ಬಹು ದೊಡ್ಡದಾಗಿ ಮುದ್ರಿಸಿದರೆ ಈ ಉತ್ತರವೇ ಖಾತರಿಯ ಮತ್ತು ಅಂತ್ಯ ಉತ್ತರವೆಂಬುದು ಓದುಗರಿಗೆ ವೇದ್ಯವಾಗುತ್ತದೆ.

ಕವಿತೆ ೨

ಕವಿತೆಯ ಉಪಪ್ರಕಾರ: ಅಕ್ಷರ ಹಾಗೂ ಪದಗಳೇ ಇಲ್ಲದ ಕವಿತೆ.

ಶೀರ್ಷಿಕೆ: ಈ ಜಗತ್ತಿನ ಉದ್ದೇಶವೇನು; ಇದು ಹುಟ್ಟಿಸಲ್ಪಟ್ಟಿದ್ದೇ?

ಕವಿತೆ: !?!?!?!?!? ....................

ಕವಿತೆ ೩

ಕವಿತೆಯ ಉಪಪ್ರಕಾರ: ಅಕ್ಷರ ಹಾಗೂ ಚಿನ್ಹೆಗಳಿಲ್ಲದ ಕವಿತೆ

ಶೀರ್ಷಿಕೆ: ಈ ಜಗತ್ತಿನಲ್ಲಿ ಇನ್ಯಾರಾದರೂ ಉಂಟೆ?

ಕವಿತೆ:

ಉಪ ಸೂಚನೆ: ಉತ್ತರವಿಲ್ಲ!

ಕವಿತೆ ೪

ಕವಿತೆಯ ಉಪಪ್ರಕಾರ: ಮಾಯಾವಿ ಕವಿತೆ!

ಕವಿತೆ ಓದುವುದಕ್ಕೆ ಮುನ್ನ ಕಿರು ಸೂಚನೆ: ನೀವು ನಿಮ್ಮ ಕಣ್ಣನ್ನು ಹಾಯಿಸುವ ಹೊತ್ತಿಗೆ ಈ ಕವಿತೆ ಮಾಯವಾಗಿ ಬಿಟ್ಟಿರುವ ಹಾಗೆ ಕಾಣುತ್ತದೆ!

ಕವಿತೆ ೫

ಕವಿತೆಯ ಉಪಪ್ರಕಾರ: ಕಿವಿಯಿಂದ ಕೇಳುವ ಕವಿತೆ

ಶೀರ್ಷಿಕೆ: ಇದೇನು! ಈ ಜಗತ್ತಿನಲ್ಲಿ ನಾನೊಬ್ಬನೇ ಇರುವೆನೆ?

ಕವಿತೆ:

ಉಪಸೂಚನೆ: ನಿಶ್ಶಬ್ದ! ಪ್ರತಿಧ್ವನಿ ಕೂಡ ಇಲ್ಲ!

ಕವಿತೆ ೬

ಶೀರ್ಷಿಕೆ: ಈ ಜಗತ್ತನ್ನು ಹುಟ್ಟಿಸಿದ ತಂದೆ ನಾನೆ?

ಕವಿತೆ: ಹುಂ.

ಕವಿತೆ ೭

ಶೀರ್ಷಿಕೆ: ದೇವರನ್ನು ಹುಟ್ಟಿಸಿದ್ದು ಯಾರು?

ಕವಿತೆ: ಮಾನವ

ಕವಿತೆ ೮

ಶೀರ್ಷಿಕೆ: ದೇವರೇಕಿದ್ದಾನೆ?

ಕವಿತೆ: ಇದು ನಮ್ಮಿಬ್ಬರಲ್ಲಿ ಮಾತ್ರ ಇರುವ ಗುಟ್ಟಿರಲಿ: ಅವನ ಕರ್ತ್ರುವನ್ನು ರಕ್ಷಿಸಲು!

ಅಂತಿಮ ಸೂಚನೆ: ಈ ಮೇಲಿನ ನನ್ನ ಪರಮಾಣು ಕವಿತೆಗಳನ್ನು ಪರಮಾಣು ಕವಿತಾ ವಿನ್ಯಾಸದ ಪ್ರಕಾರಕ್ಕೆ ಸೇರಿಸಬಹುದು. ಈ ಕವಿತೆಗಳನ್ನು ಬೇರೆ ಬೇರೆ ಕ್ರಮದಲ್ಲಿ ಓದಿದರೆ ಬೇರೆ ಬೇರೆ ಅರ್ಥಗಳನ್ನು ಕೋಡುತ್ತವೆ. ಈ ಕವಿತೆಗಳನ್ನು ಎಂಟು ಕೋಣದ ಹಸೆಯ ವಿನ್ಯಾಸದಲ್ಲಿ ಮುದ್ರಿಸಿ, ಪ್ರತಿ ಕೋಣದಿಂದಲೂ ಮಿಕ್ಕೆಲ್ಲಾ ಕೋಣದಲ್ಲಿರುವ ಕವಿತೆಗಳಿಗೆ ಬಾಹುಗಳನ್ನು ಎಳೆದರೆ ಓದುಗರು ಈ ಕವಿತಾ ವಿನ್ಯಾಸದ ಬಹು ಮುಖಗಳನ್ನು ಕಾಣಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ