ಶುಕ್ರವಾರ, ಮೇ 14, 2010

ಪರಿಚಿತ್ರ ನಿರೂಪಣಾ ಪ್ರಕಾರಗಳು

ಪರಿಚಿತ್ರ ನಿರೂಪಣಾ ಪ್ರಕಾರಗಳು

ಸ್ವಗತ ಸಾಹಿತ್ಯ ಪ್ರಕಾರ

ಸ್ವಗತ ಕಥೆ / ಕಾದಂಬರಿ: ಈ ಪ್ರಕಾರದಲ್ಲಿ ಲೇಖಕನು ತನ್ನ ಕೃತಿಯ ಪೂರ್ತಿ ಸ್ವಗತದಲ್ಲೇ ಬರೆಯುತ್ತಾನೆ. ಉದಾಹರಣೆಗೆ, ಒಂದು ಕಥೆಯನ್ನು ಹೇಳಬೇಕಾದರೆ, ಕಥೆಯ ನಿರೂಪಣೆ ಲೇಖಕನ ಸ್ವಗತ ಅಥವಾ ಕಥೆಯ ಒಂದು ಪಾತ್ರದಲ್ಲಿ ಸ್ವಗತ ಶೈಲಿಯಲ್ಲಿ ಮಾಡುತ್ತಾನೆ. ಈ ಸಾಹಿತ್ಯ ಪ್ರಕಾರ ಸುಲಭ ಪ್ರಕಾರವಲ್ಲ; ಲೇಖಕನ ಕಥಾ ನಿರೂಪಣಾ ಶಕ್ತಿಗೆ ಸವಾಲು ಹಾಕುತ್ತದೆ; ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ, ಲೇಖಕನಿಗೆ ಸ್ರಿನಷ್ಟಿಶೀಲತೆಯನ್ನು ಉಪಯೋಗಿಸಲು ಮತ್ತು ಪ್ರಯೋಗಿಸಲು ಆ ಪ್ರಕಾರವು ಬಹಳ ಅವಕಾಶಗಳನ್ನು ಒದಗಿಸುತ್ತದೆ. ಕಾದಂಬರಿಯಲ್ಲಿ ಕೂಡ ಸ್ವಗತ ಪ್ರಕಾರವು ವಿಭಿನ್ನತೆಯನ್ನು ಒದಗಿಸುತ್ತದೆ.

ಸ್ವಗತ ಕವನ: ಕವನದಲ್ಲಿ ಸ್ವಗತ ಪ್ರಕಾರವನ್ನು ಬಹಳ ರಸವತ್ತಾಗಿಯೂ, ಚಾಣಾಕ್ಷತೆಯಿಂದಲೂ ಉಪಯೋಗಿಸಿಕೊಳ್ಳಬಹುದು.

ಸ್ವಗತ ನಾಟಕ: ನಾಟಕದ ಪೂರ್ತಿ ಎಲ್ಲ ಪಾತ್ರಗಳೂ ಸ್ವಗತದಲ್ಲಿ ಮಾತ್ರ ಮಾತನಾಡಿಕೊಳ್ಳಬೇಕು; ಒಬ್ಬರಿಗೊಬ್ಬರು ಮಾತನಾಡುವ ಹಾಗಿಲ್ಲ.

ಏಕಪಾತ್ರಕಾಯಪ್ರವೇಶ: ಈ ಪ್ರಕಾರದಲ್ಲಿ ಲೇಖಕನು ಕವನ, ಕಥೆ, ಕಾದಂಬರಿ ಮೊದಲಾದವುಗಳಲ್ಲಿ ಒಂದು ಪಾತ್ರದ ಮೂಲಕ, ಆ ಪಾತ್ರವು ತನ್ನ ಕಥೆಯನ್ನು ಹೇಳಿಕೊಳ್ಳುವಂತೆ ಬರೆಯಬೇಕು. ಉದಾಹರಣೆಗೆ, ಮಹಾಭಾರತವನ್ನು, ಅಥವಾ ಅದರ ಒಂದು ಅಂಕವನ್ನೋ, ಘಟನೆಯನ್ನೋ, ಕರ್ಣನ ದೃಶ್ಟಿಯಲ್ಲಿ ಅಥವಾ ಕರ್ಣನೇ ಹೇಳಿದಹಾಗೆ ಬರೆಯುವುದು. ರಾಮಾಯಣವನ್ನು, ರಾವಣನ ದೃಷ್ಟಿಯಲ್ಲೋ, ಹನುಮಂತನ ದೄಷ್ಟಿಯಲ್ಲೋ ಹೇಳುವುದು. ಮುಖ್ಯ ಪಾತ್ರದಲ್ಲಿಯೂ ಹೇಳಬಹುದು; ಒಂದು ಸಣ್ಣ ಪಾತ್ರದ ದೃಷ್ಟಿಯಲ್ಲಿಯಾದರೂ ಹೇಳಿ ಕಥೆಗೆ ಕಳೆಯನ್ನು ಕಟ್ಟಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ