ಬುಧವಾರ, ಮೇ 5, 2010

ಅಮೃತ ಪೂರ್ಣೆ

ಅಮೃತ ಪೂರ್ಣೆ
ಕೆ. ಆರ್. ಎಸ್. ಮೂರ್ತಿ

ಕಣ್ಮುಚ್ಚಿ, ಮೈಮರೆದು, ಪರಿಸರದ ಪರಿವೆ ಬಲು ದೂರ ಹಾರಿ,
ನಿನ್ನ ಒಲವಿನಾಲಿಂಗನದ ಸಗ್ಗದ ಸವಿಮೇಲೋಗರವನು ಹೀರಿ,

ವೈಭವದ ಹಬ್ಬದರಮನೆಯಲಿ ಉಬ್ಬಿ, ಕೊಬ್ಬಿ ಬಲು ಓಲಾಡುತಿರೆ,
ನಿನ್ನ ಮುತ್ತಿನ ಮುದ್ರೆ ಎನ್ನ ಮೈಮೇಲೆಲ್ಲಾ ನಿದ್ರಾದೇವಿ ನೀ ಒತ್ತುತಿರೆ,

ಕಡುಬಡತನ, ಭಾರಿ ಸಿರಿತನ, ಪುಟ್ಟ ಗುಡಿಸಲು, ಗಟ್ಟಿ ಚಿನ್ನದರಮನೆ,
ಊರಾಚೆಯ ಚಪ್ಪಡಿ ಜಗಲಿಕಲ್ಲು, ಮಲಗಿದ ಮೇಲೆ ಎಲ್ಲ ಒಂದೇ ತಾನೆ!

ಇದೇ ಗಳಿಗೆ ಧರೆಗಿಳಿದ ಹಸುಗೂಸಾದರೇನು, ನೂರೆಂಟರ ಮುದಿಯಾದರೇನು
ನಿನಗಿಲ್ಲ ಎಳ್ಳಷ್ಟೂ ತಾರತಮ್ಯ, ಅಮೃತಪೂರ್ಣೆ ಸರಿ, ನೀನು ನಿಜ ಕಾಮಧೇನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ