ಕೆ. ಆರ್. ಎಸ್. ಮೂರ್ತಿ
ಮೂರ್ತಿಯ ಆರಾಧ್ಯ ದೇವತೆ ಸರಸ್ವತಿ, ಜಗತ್ ಸೃಷ್ಟಿ ಕರ್ತ ಬ್ರಃಮನ ರಾಣಿ.
ದಿನ, ರಾತ್ರಿಗಳಲ್ಲೆಲ್ಲಾ ಮೂರ್ತಿಯು ಸೃಸ್ಟಿಶೀಲತೆಯ ವ್ರತ ನಡೆಸಿ ವಿಶ್ವಾಮಿತ್ರನಮ್ತೆ ಹಲವು ಕ್ಷೇತ್ರಗಳಲ್ಲಿ ದಿಕ್ ಪರಿವರ್ತನೆಯನ್ನೇ ಮಾಡಿಬಿಟ್ಟಿದಾರೆ. ಕನ್ನಡ ಸಾಹಿತ್ಯ, ಸಮ್ಗೀತ, ನಾಟಕ, ವಿಜ್ಞಾನ, ತಮ್ತ್ರೋದ್ಯಮ, ಕ್ರಿಕೆಟ್ ಗಳಲ್ಲೆಲ್ಲಾ ತಪಸ್ಸು ಮಾಡಿರುವ ಇವರಿಗೆ ಇದುವರೆಗೂ ಯಾವ ಮೇನಕೆಯೂ ಅವರ ಘೋರ ತಪಸ್ಸಿಗೆ ಭಮ್ಗ ತರುವ ಸಾಹಸ ಮಾಡಿಲ್ಲ. ಇತ್ತೀಚೆಗೆ ಇವರು ೫೦೦ಕ್ಕೂ ಹೆಚ್ಚು ಹೊಸ ಸಮ್ಗೀತದ ಸಮ್ಯೋಜನೆ ಮಾಡಿದ್ದಾರೆ.
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ