ಸತ್ಯ ಬೇಕೇ? ಸುಳ್ಳು ಬೇಕೇ?
ಕೆ. ಆರ್. ಎಸ್. ಮೂರ್ತಿ
ಸತ್ಯಕ್ಕೆ ಬೆಲೆಯುಂಟು, ಒಮ್ಮೊಮ್ಮೆ ಬೆಲೆಯಿಲ್ಲ
ಸತ್ಯವನು ಕೇಳುವವರಿಗೆ, ಸತ್ಯವಾವುದೋ, ಅಸತ್ಯವಾವುದೋ ತಿಳಿಯ ಬಲ್ಲುದೆ?
ಸತ್ಯವನ್ನೇ ನಿತ್ಯ ಹೇಳುವವರನ್ನು ಕೆಳುವವರಾರೂ ಇಲ್ಲ.
ಅಸತ್ಯಕ್ಕೆ ಒಮ್ಮೆ ಮಾತ್ರ ಬೆಲೆ ಕೊಟ್ಟಾರು.
ಅಸತ್ಯದಿಂದ ಕೈ ಸುಟ್ಟುಕೊಂಡವರು, ಬಿಸಿಹಾಲು ಕುಡಿದ ಬೆಕ್ಕಿನ ಮರಿಯಂತೆ ಅಲ್ಲವೇ?
ಸುಳ್ಳು, ಅದರ ಮೇಲೆ ಮತ್ತೊಂದು ಸುಳ್ಳು, ಪೇರಿಸಿ, ಪೇರಿಸಿ, ಕಂತೆಯೊಂದನ್ನೇ ಕಟ್ಟಿ ಕಥೆಗಳನ್ನು ಹೇಳುವವರನ್ನು, ಅಡಿಪಾಯವಿಲ್ಲದೆ ಅರಮನೆಯನ್ನೇ ಕಟ್ಟುವವರನ್ನು ಕಿವಿಗೊಟ್ಟು ಕೇಳುವವರು ಉಂಟೆ?
ನಿತ್ಯ ಸತ್ತವರಿಗೆ ಅಳುವರಾರೂ ಇಲ್ಲ, ನಿತ್ಯ ಸುಳ್ಳಿನ ಅರಮನೆ ಕಟ್ಟುವವರಿಗೆ ಅದರ ಗೃಹ ಪ್ರವೇಶ ಮಾಡಿ ಭಾರಿ ಸುಳ್ಳಿನ ಔತಣ ಹಾಕಿದರೂ ಉಣ್ಣುವವರಿಲ್ಲ.
ಒಂದೊಂದು ಸಾರಿ ಸತ್ಯ, ಇನ್ನೊದು ಸಾರಿ ಸುಳ್ಳು ಹೇಳಿದವರನ್ನು ಕೇಳುತ್ತಾರೆಯೇ?
ಕೇಳಿದರೂ ನಂಬುತ್ತಾರೆಯೇ? ಆಗ ಸತ್ಯಕ್ಕೂ ಬೆಲೆಯಿಲ್ಲ; ಸುಳ್ಳಿಗೂ ಬೆಲೆಯಿಲ್ಲ
ಬೇಳೆಕಾಳು ಬೆಂದಿದೆಯೋ, ಇಲ್ಲವೊ ಎಂದೂ ನೋಡುವರು ಯಾರೂ ಇರುವುದಿಲ್ಲ. satya
ಸುಳ್ಳನ್ನು, ಸತ್ಯದ ತಲೆಯಮೇಲೆ ಹೊಡೆದಂತೆ ಹೇಳಿದರೆ ಹೇಗಿರುತ್ತದೆ?
ಸತ್ಯವನ್ನು ಹೇಳಿ ಸುಳ್ಳನ್ನು ಹೂಳಿದರೆ ಹೇಗೆ? ಸರಿ, ಯಾರ ಸುಳ್ಳು, ಯಾರ ಮುಂದೆ ಹೂಳುತ್ತಿದ್ದೀರಿ ಜೋಕೆ;
ನಿಮ್ಮನ್ನೇ ಹೂಳಿಹಾಕಿಬಿಟ್ಟಾರು!
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ