ಶುಕ್ರವಾರ, ಮೇ 14, 2010

ಲೇಖಕನ ಅನಿಸಿಕೆಗಳು

ಲೇಖಕನ ಅನಿಸಿಕೆಗಳು

ಲೇಖಕನು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬೇರೆ, ಬೇರೆ ರಚನೆಗಳನ್ನು ಮಾಡಬಹುದು. ಆದರೆ, ಲೇಖನವನ್ನು ಬರೆಯುವ ಮುಂಚೆ, ಲೇಖನವು ಪೂರ್ತಿ ರೂಪಗೊಳ್ಳುವ ಮೊದಲು ಲೇಖಕನ ಅಂತರಂಗದಲ್ಲಿ ಆಗುವ ಅನಿಸಿಕೆಗಳನ್ನೂ, ಹಾಗೂ ರಚನೆಗೆ ಮುಂಚೆ, ರಚನೆಯ ಸಮಯದಲ್ಲಿ, ರಚನೆಯ ನಂತರ ಆಗುವ ಅನಿಸಿಕೆಗಳನ್ನು ಸ್ವಾರಸ್ಯವಾಗಿ ಹೇಳುವುದು ಈ ಪ್ರಕಾರದ ವೈಶಿಷ್ಠ್ಯ. ಇದನ್ನು ಸಾಹಿತಿಯೇ ಬರೆದಿಡುವುದು; ಈ ಪ್ರಕಾರವು ಲೇಖಕನೊಡನೆ ಸಂದರ್ಶನ, ಸಂಭಾಷಣೆಗಳಲ್ಲಿ, ಸಂದರ್ಶನವನ್ನು ನಡೆಸುವವರು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಉತ್ತರಗಳನ್ನು ಕೊಡುವ ರೀತಿ ಇದಕ್ಕಿಂತ ಭಿನ್ನ ರೂಪದ್ದು. ಈ ಪ್ರಕಾರದಲ್ಲಿ, ಲೇಖಕನೇ ತನ್ನ ಮನಸ್ಸನ್ನು ತಾನೇ ತೋಡಿಕೊಳ್ಳುತ್ತಾನೆ. ಹೀಗೆ ತೋಡಿಕೊಳ್ಳುವುದು ಬರೆಯುವ ಲೇಖಕನಿಗೂ ಪ್ರಯೋಜನಕಾರಿ; ಲೇಖಕನ ಮನಸ್ಸಿನೊಳಗೆ ಪಯಣಿಸುವ ಸದಾವಕಾಶ ಓದುಗರಿಗೆ; ಇಂತಹ ಇಣುಕುನೋಟಕ್ಕೆ ದಾರಿಮಾಡಿಕೊಡುವವನು ಸ್ವತಃ ಲೇಖಕನೇ, ಯಾರ ಸಂದರ್ಶನಾ ಪ್ರಶ್ನೆಗಳ ಬಾಣಗಳಿಗೆ ಒಳಗಾಗದೆಯೇ, ಲೇಖಕನು ತನ್ನ ಮನಃ ಪೂರ್ವಕವಾಗಿ ಬರೆದಿಡುತ್ತಾನೆ. ಲೇಖಕನಿಗೆ ಇಷ್ಟವಾದರೆ, ತನ್ನ ಅನಿಸಿಕೆಗಳನ್ನು ಬಾಯಲ್ಲಿ ಹೇಳಿ ಧ್ವನಿಮುದ್ರಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ