ಶನಿವಾರ, ಮೇ 8, 2010

ಹೊತ್ತಿಸು ವಿವೇಕದ ನಂದಾದೀಪ

ಹೊತ್ತಿಸು ವಿವೇಕದ ನಂದಾದೀಪ
ಕೆ. ಆರ್. ಎಸ್. ಮೂರ್ತಿ

ಬೆತ್ತಲೆ ಕುಣಿದರೇನು, ಕತ್ತಲೆಯಲಿ ನಿನ್ನ ನೋಡುವರಾರು!
ಕಗ್ಗತ್ತಲೆಯಲಿ ಎತ್ತೆತ್ತಲೂ ಯಾರು ಕಣ್ಣು ಹಾಯಿಸಿದರೇನು!

ಮನದೊಳಗೆ ಕತ್ತಲೆ ಕವಿದಿರಲು ಇಲ್ಲದ್ದು ಭ್ರಮಿಸಿದಂತೆ
ಸತ್ಯ ಅಸತ್ಯ ಕತ್ತಲೆಯ ಮತಿಯೊಳಗೆ ಅವಳಿ-ಜವಳಿಯಂತೆ

ಹೊಟ್ಟೆ ಕಿಚ್ಚು ಉರಿದು ಸುಡುತಿರಲು ಹತ್ತು ತಲೆಯೊಳಗೆ
ರಾಮಚಂದ್ರನ ಸತಿ ಸೀತೆಯೂ ಆದಳು ಕಿಚ್ಚು ರಾವಣನಿಗೆ

ಹೊತ್ತಿಸಿಕೋ ವಿವೇಕದ ಜ್ಯೋತಿಯನು ನಂದಾದೀಪದ ತೆರದಿ
ಸಾವಧಾನದ ಮಂದ ಮಾರುತನು ಮನದ ಬೇಗೆಯ ತಣಿಸಿ

ಮನವ ಹದಗೊಳಿಸುವನು, ಸಮ ತೂಕದ ತೋಲನ ನ್ಯಾಯವು,
ಧರ್ಮರಾಯನ ಮೀರಿಸುವ ಸಮ ಬುಧ್ಧಿಯೆಲ್ಲವೂ ನಿನ್ನದಾಗುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ