ಬೇಗನೆ ಲಕುಮಿ ಬಾರಮ್ಮ
ಕೆ. ಆರ್. ಎಸ್. ಮೂರ್ತಿ
ಲೇ! ಲೇ! ಲೇ! ಲೇ! ಲಕ್ಕಮ್ಮ, ಲಚ್ಚಮ್ಮ, ಲಕುಮಿ
ನನಗೇಕೇ ಒಂದು ಚೂರೂನೂ ಲಕ್ಕೇ ಇಲ್ಲ, ಲಕುಮಿ
ನನಗೆ ಲಕ್ಕು ಕಮ್ಮಿ ಮಾಡಿದ್ದೀಯಲ್ಲೇ, ಲಕ್ಕಮ್ಮ
ಲೆಕ್ಕ ಹಾಕಿ, ಹಾಕಿ ಭಾಳ ಕಡಿಮೆ ಕೋಡ್ತೀಯಮ್ಮ
ಲಂಚ, ಗಿಂಚ ಏನೂ ಗಿಟ್ಟಕ್ಕಿಲ್ಲ ನನಗೆ ಲಚ್ಚಮ್ಮ
ಮಂಚದ ಕೆಳಗಂತೂ ಒಂದು ಬಿಡಿಗಾಸೂ ಇಲ್ಲಮ್ಮ
ನಾನು ಪೆದ್ದ, ಸರಸ್ವತಿ ನನ್ನ ಕಡೇನೇ ನೋಡಾಕಿಲ್ಲಮ್ಮ
ನೀನೂನೂ ಮರೆತು ಬಿಟ್ರೆ, ನನ್ನ ಗತಿ ಏನಾಗಬೇಕಮ್ಮ
ಬಾರಮ್ಮ, ಬಾರೇ ಸ್ವಲ್ಪ ಹೊತ್ತು ಆದ್ರೂ ಬಾರೆ ಒಳಗೆ
ಬಾರಮ್ಮ ನಿನ್ನ ಬಲಗಾಲಿಟ್ಟು ನನ್ನ ಅಟ್ಟಿ ಗುಡಿಸಲ್ಗೆ
ಸಕ್ಕರೆ, ತುಪ್ಪ ಹಾಲಿನ ಹೊಳೆಯೆಲ್ಲ ನನಗೆ ಬೇಡಮ್ಮ
ಸಣ್ಣ ಲೋಟ ಹಾಲು, ಒಂದು ಚಮಚ ಸಕ್ಕರೆ ಸಾಕಮ್ಮ
ತುಪ್ಪ, ಗಿಪ್ಪ ಎಲ್ಲಾ ಪಕ್ಕದ ಮನೆಗಳಿಗೇ ಕೊಟ್ಟು ಬಿಡಮ್ಮ
ಶುಕ್ರವಾರ ಆದ್ರಾಯ್ತು, ಮಧ್ಯ ರಾತ್ರಿಲಾದ್ರೂ ಅಡ್ಡಿಯಿಲ್ಲಮ್ಮ
ರಾಹು ಕಾಲದಲ್ಲಾದ್ರೂ ಪರವಾಗಿಲ್ಲ, ಕೇತು ಕಾಲವಾದರೂ,
ಗುಳಿಕ ಕಾಲದಲ್ಲಾದ್ರೂ ಬಂದು ಬಿಡಮ್ಮ, ಒಂದು ಕಿತವಾದರೂ
ಕೊಂಚು ಆಸೆ, ನಿನ್ನ ಮುಖ ಹೇಗಿದೇಂತ ಒಂದು ಕಿತ ನೋಡೋಣ ಅಂತ
ಹೆದರೋದ್ಯಾಕೆ ಗುಡಿಸಲು ಚಿಕ್ಕದು, ನನಗೆ ಹೆಂಡ್ರು ಯಾರೂ ಇಲ್ಲಾಅಂತ?
ನನ್ನ ಅಟ್ಟಿ ಶಾನೆ ಕೊಳಕಾದ್ರೂ, ನನ್ನ ಋದಯದಲ್ಲಿ ಕೊಳಕು ಇಲ್ಲಾ
ನೀನು ಕಾಲಿಟ್ಟ ನನ್ ಆಟ್ಟಿ, ಅರಮನೆ ಆಗದೆ ಇದ್ರೂನೂ ಚಿಂತೆಯಿಲ್ಲ
ನೀನು ಮನಸು ಮಾಡಿ ಒಳಗೆ ಬಂದರೇನೇ, ಅದೇ ಲಕ್ಷಕ್ಕಿಂತ ಹೆಚ್ಚು
ನಿನ್ನ ಮುಖ ನೋಡದ್ರೆ, ಅದೆ ನನಗೆ ಕೋಟಿ ರೂಪಾಯಿಗಿಂತ ಮೆಚ್ಚು
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ