ಶನಿವಾರ, ಮೇ 15, 2010

ಮಾಟಗಾತಿಯ ಅಡಿಯಾಳು ನಾನು

ಮಾಟಗಾತಿಯ ಅಡಿಯಾಳು ನಾನು
ಕೆ. ಆರ್. ಎಸ್. ಮೂರ್ತಿ

ಚಿನ್ನದ ಗುಂಗುರು ಕೂದಲಿನ ಚಿಂಗಾರಿಯೇ
ನನ್ನೆದೆಗೇ ಗುರಿಯಿಟ್ಟಿಹೆ ಹೊನ್ನ ಕಳಶದ್ವಯ

ತುಂಬು ಚೊಂಬುಗಳು ಎಗರಿ ಕುಣಿದರೂ
ಹನಿಯೂ ಚೆಲ್ಲದೆಯೇ ನಡೆಯುವ ಚಮ್ಮಕ್ಕು

ಗುಂಡು ಗುಂಡನೆಯ ಚೆಂಡುಗಳನು ಕಂಡು
ಗುಂಡಿಗೆಯೊಳಗೆ ಚಂಡೆಯನೇ ಬಡಿಸುತಿವೆ

ನಡುವೆಯ ಕಟಿ ಮಾತ್ರ ಎರಡೇ ಕೈಗಳಲಿ
ಪೂರ ಹಿಡಿಯುತ ಬಂಧಿಸುವಷ್ಟು ಸಪೂರ

ನೀಳ ದಟ್ಟ ಜಡೆಯು ಅತ್ತಿತ ಓಲಾಡುತಿರೆ
ಕುಚ್ಚಿನ ಭಾರ ಬಲವಾಗಿ ಆಂದೋಲಿಸುತಿದೆ

ನನ್ನ ಕಣ್ಣುಗಳು ಆಂದೋಲನದ ಮಾಯಕ್ಕೆ
ಸಿಕ್ಕಿಹಾಕಿ ಮನಕೆ ಮಾಟವ ಮಾಡಿಹಾಕಿದೆ

ಮಾಯಾವಿನಿಯೇ! ಮನಕೆ ಮಾಟದ ಬಲೆಯ
ಎರಚಿಹ ಮೋಹಿನಿಯೇ! ನಿನ್ನಾಳು ಹುಳು ನಾನು

ನಿನೆತ್ತ ನಡೆವತ್ತ ಮೋಡಿಯಲಿ ಹಿಂಬಾಲಿಸುವೆನು
ಅಡಿಯಾಳು ದಿನ ಇರುಳು ಮುಡುಪು ಇಡುವೆನು

ಪ್ರತಿಯುಸಿರು ನಿನಗೆಂದೇ ವ್ರತವ ಹಿಡಿದಿಹೆ ನಲ್ಲೆ
ನಿನ್ನವನು ನಾನು ಇದು ಆಣೆ, ನನ್ನವಳು ಆಗುವೆ ತಾನೆ?

ಮೈಯೆಲ್ಲ ಸುಟ್ಟು, ಸರ್ವ ಭೂತಗಳೆಲ್ಲ ಹಿಡಿ ಬೂದಿ
ನಿನಗೆಂದೇ ಮಾಡುವೆನೇ ನನ್ನನು ನಾನೇ ಅಗ್ನಿ ಸಮರ್ಪಣೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ