ಹಿತ್ತಲ ಮನೆಯ ಶಾಂತಿ
ಕೆ. ಆರ್. ಎಸ್. ಮೂರ್ತಿ
ಸೂಚನೆ: ನಾನು ಈ ಕವನವನ್ನು ನನ್ನ ಪ್ರಿಯವಾದ "ಇಚ್ಛಂದ ಛಂದಸ್ಸಿ" ನಲ್ಲೇ ರಚಿಸಿರುವೆನು
ಬೆತ್ತಲೆ ಮಲಗುವಳಯ್ಯ ಇಡಿ ರಾತ್ರಿ
ಹಿತ್ತಲ ಮನೆಯ ಇಪ್ಪತ್ತಿನ ಸುಂದರಿ
ಶಾಂತಿಯವಳ ಹೆಸರು, ಬೆಳಗುವಳು
ಕತ್ತಲೆಯು ಹೌದು, ಬೆತ್ತಲೆಯಾದರೆನಂತೆ
ಚಂದಿರನ ಕಾಂತಿಯಲಿ ಕಂಡೆ ನಾನವಳ
ನನಗೆ ಮಾತ್ರ ಮನಸ್ಸೆಲ್ಲಾ, ಮೈಯೆಲ್ಲಾ ಅಶಾಂತಿ.
ಮೆತ್ತನೆಯ ಹಾಸಿಗೆಯ ಮೇಲೆ ಹೊರಳುವಳು
ಕತ್ತೆತ್ತಿ ನನ್ನತ್ತ ನೋಡುವಳು ಕಿಟಿಕಿಯಲಿ
ಇಟುಕಿ ನೋಡುವ ನನ್ನ ಕೀಟಲೆಯಲಿ
ಪಟಪಟನೆ ಮಿಟುಕಿಸುವಳು ಬಟ್ಟಲು ಕಣ್ಣು.
ಸೊಟ್ಟ ಮೂತಿಯ ಮಾಡಿಕೊಂಡು ಅಣಕಿಸುವಳು,
ಮತ್ತೆ ಫಕ್ಕನೆ ನಕ್ಕು, ನಾಲಿಗೆಯಲಿ ತುಟಿಯ ನೆಕ್ಕುತ:
'ಬಾರೋ! ನಿನಗೆ ಹಸಿವೆಯಾದರೆ ಕೊಡುವೆನು ಚಕ್ಕೊತನೆ ಹಣ್ಣು,
ಹುಳಿಯಲ್ಲವಿದು, ಒಂದಲ್ಲ, ದೊಡ್ದದೆರಡು ಹೀರುವೆಯಾ
ಸಿಹಿಯು ಅಮೃತಕ್ಕಿಂತ, ಕೈನೀಡಿ ಬಾರೋ ಈಗಲೇ
ಎಷ್ಟು ಮೆದ್ದರೂ ಮುಗಿಯದ, ಇನ್ನಷ್ಟು ಬೇಕೆನಿಸುವ ಹೆಣ್ಣು ನಾನು’
ಇಷ್ಟೆಲ್ಲಾ ಹೇಳುವಳು ತುಂಟ ನಗೆಯಲಿ ಮಾತ್ರ.
ಮೈಯೆಲ್ಲಾ ಸೆಟೆದು, ಕೈಕಾಲು ಕುಣಿಸಿ, ಎಗರಿ,
ಕುಪ್ಪಳಿಸಿದಂತೆ ಕಪ್ಪೆಯ ತೆರದಿ, ಎಲ್ಲೆಲ್ಲೂ ಉಬ್ಬಿ ಬೆವರುತಲಿರಲು
ಅವಳು ಮಾತ್ರ ಅವಳ ಅವಳಿ ಜವಳಿಯ ನನ್ನೆಡೆಗೆ ತೋರಿಸುತ
ಬೀರುವಳು ತುಂಟ ತುಟಿಯನು, ನನ್ನ ತುಟಿಯು ಮಾತ್ರ
ಮರಳುಗಾಡಿನ ಓತಿಕ್ಯಾತನಂತೆ ಇನ್ನೂ ಒಣಗಿಯೇ ಬೇಗೆಯಲಿ.
ಸಾಕಪ್ಪ ಸಾಕು ಸಿಕ್ಕದ ಕೆಂಪು ನೇರಳೆ ಹಣ್ಣು ಸುಮ್ಮನೆಯೇ ನೋಡಿದರೆ ಸಾಕೆ?
ಬೇಕಪ್ಪ ಬೇಕು, ನಾಕದ ಹೆಣ್ಣು ನೋಟದಲೇ ಇಷ್ಟು ಆಟವನಾಡಿಸಿದರೆ,
ದಿಟದಿ ಮೈಗೆ ಎಟುಕಿದರೆ, ಊರ ಹನುಮಗೆ ನೂರೆಂಟು ತೆಂಗಿನ ಕಾಯಿ.
ಹನುಮ ನೀನು ಜೀವ ಬ್ರಹ್ಮಚಾರಿ, ನಿನಗೇನು ಗೊತ್ತೋ ನನ್ನ ತವಕ
ಹರಕೆ ನನ್ನದು, ಮಹದಾಸೆ ನನ್ನದು, ನಿನ್ನದು ವರವ ಕೈನೀಡಿ ಕೊಡುವುದಷ್ಟೇ!
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ