ಶನಿವಾರ, ಮೇ 8, 2010

ಜೀವಕ್ಕೆ ಮುಖ ಎರಡು

ಜೀವಕ್ಕೆ ಮುಖ ಎರಡು
ಕೆ. ಆರ್. ಎಸ್. ಮೂರ್ತಿ

ನೋವು - ನಲಿವು,
ಕತ್ತಲೆ - ಬೆಳಕುಗಳಂತೆ
ಒಂದರ ಬಾಲ ಇನ್ನೊಂದು
ಜೀವದ ಹಣೆಬರಹದಲ್ಲಿ
ನೋವಿಲ್ಲದೆ ನಲಿವಿಲ್ಲವಲ್ಲ!
ನೋವಿಲ್ಲದಾಗ ನಲಿವೋ,
ಜೀತದ ಮುಖಗಳಿವೆರಡೋ,
ಸದಾ ನೋವುಂಡ ಬಡ ಜೀವಕ್ಕೆ
ಕ್ಷಣ ಮಾತ್ರ ನೋವು ಮರೆತರೆ
ನಲಿವಿನ ಮೊಳಕೆ ಒಡೆದೀತೇನೋ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ