ವಿರೋಧಿಯ ವರುಷ ಬಂತು
ಡಾಕ್ಟರ್. ಕೆ. ಆರ್. ಎಸ್. ಮೂರ್ತಿ
ವಿರೋಧಿಯ ವರುಷ ಬಂತು, ಹರುಷದಿ ಘೋಷಿಸುವ ಬೇಗ ಬನ್ನಿ
ವಿರೋಧವ ವಿರೋಧಿಸುವ ದಿವಸಗಳು ರಭಸದಲಿ ಬಂದಿದೆ ಎನ್ನಿ
ಅಡ್ಡಿಗಳೆಲ್ಲವ ಹೊಡೆದೋಡಿಸುವ ಗಿಡ್ಡ ಗುಂಡನಿಗೆ ಜಯಜಯವೆನ್ನಿ
ಸೊಟ್ಟ ಸೊಂಡಿಲಲಿ ಕಡುಬು ಹಿಡಿದವಗೆ ಮುದದಿ ಮಣಿಸುವ ಬನ್ನಿ
ವಿರೋಧಿಸುವ ದಿಟ್ಟದಿಂ ಕಿಟ್ಟನಂತೆ ಕೆಟ್ಟತನವ ಕೊಂದು ಕುಟಿಲತೆಯಲ್ಲಿ
ಆರಾಧಿಸುವ ಹರನ, ಮೈಯೆಲ್ಲ ಧರಿಸಿ ಸುಟ್ಟ ವಿಭೂತಿಯನು ದಿಟ್ಟತನದಲ್ಲಿ
ಬೆಟ್ಟದ ಭೈರವನು, ದುಷ್ಟತನವ ತನ್ನ ಕಾಲಲಿ ಮೆಟ್ಟಿ ಮೆರೆದ ನಟರಾಜನಂತೆ
ಒಟ್ಟಾದ ಭುವಿನರರು ದುಷ್ಟರಕ್ಕಸರ ಬಡಿದಿಕ್ಕಿ ಓಡಿಸುವ ಭರದಿ ಬನ್ನಿ ಇಂದೆ
ಅನಿರುಧ್ಧ ನಮ್ನಿಮ್ಮ ಆರಾಧ್ಯದೇವ, ಸಕಲ ಅನ್ಯಾಯವನು ನಿರೋಧಿಸುವ
ಸಮೃಧ್ಧ, ಸೌಹಾರ್ದ, ಸುಭಾಶೆ, ಶಾಂತಿ ಜೀವನವ ಭುವಿಯಲ್ಲಿ ವೃಧ್ಧಿಸುವ
ವಿರೋಧಿಯ ಹರುಷವನು ವಸುಧೆಯ ಮೇಲೆಲ್ಲ ಹೆಮ್ಮೆಯಲಿ ಹಂಚೋಣ ಬನ್ನಿ
ವೃಧ್ಧಿಯ ಅಮೃತದ ವರ್ಷವನು ಎಲ್ಲೆಲ್ಲೂ ಧರಧರನೆ ಸುರಿಸೋಣ ಬೇಗ ಬನ್ನಿ
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ