ವಿಧಿರಾಯ ನಿನ್ನ ಅಡಿಯಾಳು
ಕೆ. ಆರ್. ಎಸ್. ಮೂರ್ತಿ
ನಿನ್ನ ಸುಡುಗಾಡು ಹಣೆಯ ಬರಹವು
ಕಾಡಿ ಸುಟ್ಟಿತೆಂದು ಕೊರಗಿ
ಬಾಡಬೇಡಲೋ ಮರುಳೆ
ತನ್ನ ವಿಧಿಬರಹವನು
ಅಳಿಸಿ, ತಿದ್ದಿ ಬರೆಯುವ ಕವಿಯ
ಕುಶಲತೆ ಸುಲಭ ಸರಳ
ಹಣೆಯ ಫಲಕವು
ಮಸ್ತಕದೊಳು ಅಡಗಿರುವ
ಮೆತ್ತನೆಯ ಮಿದುಳು
ನಿನ್ನ ಅಮ್ಮನ
ಗರ್ಭವಾಸದ ಕಾಲದಿಂದಲೇ
ಪ್ರತಿ ನಿಮಿಷವೂ ಬರೆದು, ಅಳಿಸಿ,
ಮತ್ತೆ ಮತ್ತೆ ಬರೆದಾಗಿದೆಯಲ್ಲವೇ?
ಮಿದುಳಿನ ಹೊರಗಿನ ಫಲಕದ ಬರಹವನು
ನೀ ನಿನ್ನಾಸೆ,
ಅದರ ಜೊತೆ ನಿನ್ನ ಕಪಾಳದಿಂದ
ಸುರಿಸುವ ಬೆವರಿಂದ
ಫಲಕದ ಬರಹವನ್ನು ಒರೆಸಿಕೋ,
ನಿನ್ನ ಬಲಯುತ ಮಾಂಸದ ತೋಳು,
ಮುಂಗೈ, ಹಸ್ತದ ಕೊನೆಯಲ್ಲಿರುವ
ಹತ್ತು ಬೆರಳ ಕುಶಲತೆಯಿಂದ
ಮನಸ್ಪೂರ್ತಿ ಹೊಸ ವಿಧಿಯನೇ
ಮಾಡಿಕೊಳೋ ಚತುರ.
ನಿನ್ನ ಉಬ್ಬಿದ ಮಾಂಸ ಖಂಡಕೆ
ಹೆದರುವನೋ ನಿನ್ನ ಅಡಿಯಾಳು ವಿಧಿರಾಯ;
ನೀ ಸುರಿಸುವ ಬೆವರೇ ಅವನ ಕಣ್ಣೀರು;
ನೀ ಕಾಣುವ ಸುಖದ ಕನಸೇ
ಅವನಿಗೆ ಹೆದರಿಸಿ
ನಡಗಿಸುವ ಭಯಂಕರ ದುಃಸ್ವಪ್ನ.
"ನಾ ಹುಟ್ಟಿಬಂದಾಗ ಕೇಳಿಕೊಂಡು ಬಂದ
ನನ್ನ ಪ್ರಾರಭ್ದ ಕರ್ಮವನು
ನಾನು ಅನುಭವಿಸಿಯೇ ತೀರಬೇಕು"
ಎನ್ನುವ ಹೇಡಿ, ಸೋಮಾರಿಯ
ಮರುಕ ಮುಖವನು ನೋಡಿದರೇ
ಅಪಶಕುನ, ಅಪರ ಕಾಲ,
ಸೋಮಾರಿ ಕಾಲ ಬಂದೀತು,
ಅವರಿಂದ ಕಾಲುಕಿತ್ತಿ
ಪರಾರಿಯಾಗು, ಹುಶಾರಿಯಿಂದ
ಹಿಂತಿರುಗಿ, ಬೆನ್ನ ಹಿಂದೆಯೂ ನೋಡದ
ರಾಜಾ ತ್ರಿವಿಕ್ರಮನಂತೆ.
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ