ಐದು ಬೆರಳೂ ಸಮವೇ ಅಲ್ಲವೇ!
ಕೆ. ಆರ್. ಎಸ್. ಮೂರ್ತಿ
ಪಾಂಡುವಿನ ಐದು ಮಕ್ಕಳೂ ಪಾಂಡವರಾಗಿದ್ದ ಹಾಗೆ
ಕುರುವಂಶದ ನೂರು ಅಣ್ಣತಮ್ಮಂದಿರೂ ಕೌರವರಂತೆ
ರಾಮನಂತೆ ಲಕ್ಷ್ಮಣ, ಭರತ, ಶತೃಘ್ನರೂ ದಾಶರಥಿ ಅಲ್ಲವೆ!
ಕೌಸಲ್ಯನ ಅಕ್ಕ ತಂಗಿಯರೂ ಕೋಸಲ ರಾಜನ ಮಕ್ಕಳೇ ಅಲ್ಲವೆ
ಬಲರಾಮನೂ ತಮ್ಮ ಕೃಷ್ಣನಂತೆ ಒಬ್ಬ ವಾಸುದೇವನಲ್ಲವೇ
ಸಕಲರನ್ನೂ ರಮಿಸುವ ಕೌಸಲ್ಯನ ಮಗ ರಾಮಚಂದ್ರನ ಹಾಗೆ
ಬಲರಾಮನೂ, ಪರಶುರಾಮನೂ ರಮಿಸುವರಾಗಿದ್ದರೆ?
ಕೈ ಬಿಚ್ಚಿ ನೋಡಿ, ಈಗಲೇ ನೊಡಿಕೊಳ್ಳಿ, ಐದು ಬೆರಳೂ ಸಮವೇ?
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ