ಪ್ರೆಟ್ಟಿ ಕಿಟ್ಟ
ಕೆ. ಆರ್. ಎಸ್. ಮೂರ್ತಿ
ಸೂಚನೆ:
ಇದು ಮಕ್ಕಳಿಗೆ ಹೇಳಿ ಕೊಡ ಬಹುದಾದ ಹಾಡು.
ಈ ಹಾಡನ್ನು ಸುಲಭವಾದ ರಾಗದಲ್ಲಿ ಹೇಳಿಕೊಟ್ಟು,
ಒಂದು ಸಣ್ಣ ನೃತ್ಯ-ನಾಟಕ ರೂಪವನ್ನಾಗಿ
ರಂಗದ ಮೇಲೆ ಮಾಡಿಸ ಬಹುದು
ಪ್ರೇ, ಪ್ರೇ, ಪ್ರೇ ಪ್ರೇ ಪ್ರೇಮಾಡಿ ಪ್ರೇಮಿ
ಪ್ರೇ, ಪ್ರೇ, ಪ್ರೇ ಪ್ರೆಟ್ಟಿ ಕೃಷ್ಣ ಸ್ವಾಮಿ
ಪ್ರೆಟ್ಟಿ, ಪ್ರೆಟ್ಟಿ, ಚಿಂಟೂ ಪುಟ್ಟಾಣಿ ಕಿಟ್ಟ
ಪಾಟ್ ಬಟ್ಟರೆಲ್ಲ ಈ ಪಾಟಿ ತಿಂದು ಬಿಟ್ಟ
ತುತ್ತೂರಿ ರಾಗ ಕೇಳಿ ನಮ್ಮ ಅಟ್ಟೀಲೆಲ್ಲಾ
ಕೇಳಿಸ್ತಾನೇ ಬೇಗ ಪ್ರೆಟ್ಟಿ ಹುಡ್ಗೀರ್ಗೆಲ್ಲಾ
ಬಂದು ಬಿಟ್ರಪ್ಪಾ ದೊಡ್ಡ ಹುಡ್ಗೀರ ಹಿಂಡು
ಕುಣೀತ ನಲಿದ್ರು ಕಿಟ್ಟನ ಸುತ್ತ ಮುತ್ಕೊಂಡು
ಕೊಡ್ತ ಮುತ್ತಿನ ಮೇಲೆ ಮುತ್ತು ಮುದ್ದು ಕಿಟ್ಟನ್ಗೆ
ಒತ್ತೊತ್ತಿ ಬಿತ್ತು ನೂರೆಂಟು ಮುತ್ತು ಅವನ ಕೆನ್ನೇಗೆ
ದನ ಕಾಯೋ ಚೆಲುವ ಕಿಟ್ಟಣ್ಣ ಇನ್ಯಾರೂ ಅಲ್ಲ
ದೇವರ ಅವತಾರ ಇವನೇ ಅಪ್ಪ ಅಂತ ಊರಲ್ಲೆಲ್ಲಾ
ತಟ್ಟಿರೋ ಜೋರಾಗಿ ನಿಮ್ಮ ಕೈ ಜೈ ಜೈ ಜೈ ಜೈ
ಜೈ ಕೃಷ್ಣನಿಗೆ, ಜೈ, ಜೈ, ಶ್ರೀ ಕೃಷ್ಣನಿಗೆ ಜೈ ಜೈ
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ