ಏನದು?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಏನದು? ಯಾವುದು? ಎಲ್ಲಿದೆ? ಹೇಗಿದೆ?
ಪ್ರಶ್ನೆ ಮೇಲೆ ಪ್ರಶ್ನೆ; ಪ್ರಶ್ನೆ ಒಳಗೆ ಪ್ರಶ್ನೆ.
ಕೇಳಿದವರಾರು? ಅದನ ಕೇಳುವವರಾರು?
ಪೇಳಬಲ್ಲವರಾರು? ತಿಳಿಯಬಲ್ಲವರಾರು?
ಅನಂತ ತನನಾನ, ಆತನ ತರ, ಆತನ ಥರ, ಇದೆಯೇ ಇತರ ಮಂಜುಳ ಗಾನ?
ದಿಗಂತ ತನುಮಾನ, ಚೇತನ ತನು, ಚ್ಯುತವಲ್ಲ, ನಿಶ್ಚಯ ಇದಕಿಲ್ಲ ಸಮಾನ
ನಿಮಗೆ, ನನಗೆ, ಎಲ್ಲರಿಗೂ, ಕಣ್ಣಿಗೆ ಕಾಣುವ, ಕಾಣದ, ತಾಣದಲಿ ಇದರಾಟ
ಅರಿತ, ಅರಿಯದ, ಮರೆಯದ, ಅರಿಯಲಾಗದ, ಗುರಿಯಿಲ್ಲದ ಒಗಟಿನಾಟ
ಅಳೆಯಲಾಗದ, ಕಳಿಯಲಾಗದ, ಬೆಳೆಯಲಾಗದ, ಹೇಳಲಾಗದ ಸಂಪೂರಣ
ಹಿಡಿಯಲಾಗದ, ಮಡಿಯದ, ಮುಗಿಯದ, ಕುಗ್ಗದ, ಹಿಗ್ಗದ ಸಕಲ ಕಾರಣ
ನನ್ನತ್ವಕ್ಕೆ, ನಿಮ್ಮತ್ವಕ್ಕೆ, ಸಮಸ್ತ ಅಸ್ತಿತ್ವಕ್ಕೆ ಸಮತ್ವ ಕಾಣುವುದು ನಿನ್ನ ಮನ
ನಿತ್ಯ ಸತ್ಯಕ್ಕೆ, ಅಮೃತತ್ವಕ್ಕೆ, ಅಚಿಂತ್ಯ, ಚೇತನದಲಿ ಮೂಡಲಿ ನಿನ್ನ ಚಿತ ಆನುದಿನ
ನಾನದು. ನೀವದು, ಇಲ್ಲಿದೆ. ಹೀಗಿದೆ.
ಪ್ರಶ್ನೆಯಲೇ ಉತ್ತರ; ಮತ್ತೇಕೆ ಕೇಳುವೆ ಪ್ರಶ್ನೆ?
ಕೇಳಿದವ ನೀನು. ಕೇಳುವವ ನೀನು.
ಪೇಳಬಲ್ಲವ ನೀನೆ. ತಿಲಿದುಬಲ್ಲವ ನೀನೆ.
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ