ಶನಿವಾರ, ಮೇ 8, 2010

ನೀ ಕಟ್ಟಿದ ಕಂಕಣವು ಮಾಸಿಲ್ಲ

ನೀ ಕಟ್ಟಿದ ಕಂಕಣವು ಮಾಸಿಲ್ಲ
ಕೆ. ಆರ್. ಎಸ್. ಮೂರ್ತಿ

ಷಕಾರವನು ತೆಗೆದ ನನ್ನ ಜ್ಯೋತಿಷ್ಯ
ಅಂಟಿ ಹೋಗಿ ಕಂಪಿಸಿದೆ ಗುಂಡಿಗೆಯ

ಸಹಿಯೋ ಹಣೆಬರಹವ ಕೊಡಹುವುದು
ಅಹುದೋ ಹುಲು ಮಾನವಗೆ ಅಳಿಸುವುದು

ಹಿಂದೆ ಆಗಿ ನಡೆದದ್ದು ಹೋದದ್ದೇ ಖರೆ
ನಂಟು, ಗಂಟು, ಬಿಡಿಸಿ ಕೊಳ್ಳುವರೇ!

ಗಿಟ್ಟಿದ್ದನ್ನು ಗಿಟ್ಟಿಸಿಯಾಯ್ತು ನಾವು ಬಹಳಷ್ಟು
ಬಿಡಿಸಿಕೊಳ್ಳುವ ತಂಟೆಯೇಕೆ ಅಂಟಿದ್ದನ್ನು ಬಿಟ್ಟು

ದಿಟ್ಟನಾಗಿ ಮೆಟ್ಟುವೆನು ಅಟ್ಟಹಾಸದಲಿ ಮುಂದೆ
ಪ್ರಾಸದ ಪ್ರೀತಿ ತ್ರಾಸವಾದರೂ ಕಲಿತೆ ನಿನ್ನಿಂದೇ

ಮನದಿಂದ ಮನಕೆ, ಎದೆಯಿಂದ ಎದೆಗೆ ಕೊಡುಗೆ
ಒಲವಿಂದ ನೀನಿತ್ತ ಬಾಗಿನವ ಮುದದಿ ಸಲಹುವೆನೇ

ಕುಂಚವನು ಕಿಂಚಿತ್ತೂ ಸಿಂಚಿಸಿ ಹಚ್ಚಿ ತಾಳೆಯ ಗರಿಗೆ
ಕಾವ್ಯ ಸುಂದರಿಯು ಕುಣಿದು ಮನವ ತಣಿಸುವವರೆಗೆ

ಪ್ರಾಸದ ವ್ರತದಲಿ ಕಟ್ಟಿದೆ ಒಲವಿಂದ ಕಂಕಣವನೇ
ಅತಿ ನಿಷ್ಠೆಯಿಂದಲಿ ಕಟ್ಟು ನಿಟ್ಟಾಗಿ ಪಾಲಿಸುವೆನೇ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ