ಶುಕ್ರವಾರ, ಮಾರ್ಚ್ 26, 2010

ಕುಸುಮ ಕೇಳಿ

ಕುಸುಮ ಕೇಳಿ
ಕೆ. ಆರ್. ಎಸ್. ಮೂರ್ತಿ

ದುಂಡನೆಯ ಕೆನ್ನೆಯ ಮೇಲೆ ಕಂಡಾಗ ತುಂಟ ಮುಗುಳ್ನಗೆಯ
ಗುಂಡಿಗೆಯ ವಿಕಂಪಿಸಿತ್ತು ನಿನ್ನ ಸವಿ ನುಡಿಯು ಡವ ಡವ

ಅರಿವಾಯ್ತು ತುಂಟ ತುಟಿಯು ಬಿರಿದಾಗ ದುಂಬಿಯಾ ಅರಮನೆಯೇ
ಕರೆದು ತೆರೆಯುತಿದೆ ಕುಂಕಮ ಕೆಂಪಿನ ರಂಭೆ ರಾಣಿಯ ದ್ವಾರವನೇ

ನಿನ್ನೆದೆಯೂ ಏರಿ ಉಬ್ಬುತಿದೆ, ಲಯಕೆ ಅನುಕಂಪನದ ಲಯ ನಾದದಿಂದೆ
ಜೇನಿನಮೃತದ ಕಾಮಧೇನುಗಳು ಒಂದಲ್ಲ, ಎರಡೂ ನಸುನಡುಕದಿಂದೆ

ಕುಸುಮ ಹೃದಯೆ ನೀ ಸೂಸುವ ಸುಗಂಧ ಸನ್ಮೋಹನಾಸ್ತ್ರವೇ ಸರಿ
ನಿನ್ನಭಿಲಾಶೆಗೆ ಸರ್ವಸಿಧ್ಧನಾಗಿಹ, ನನ್ನ ಮದನ ಸೆಟೆದಿಹನೆ ನಾರಿ

ಕುಸುಮಶರ ಹೂಡಿಹನು ಭರದಿ ಬಿಲ್ಲಿಗೆ, ಮೀಟಿಹನು ಝೇಂಕಾರ
ತನುವಿಗೆ ತನುವಿನ ಕಾತುರ, ಅಧರಕ್ಕೆ ಅಧರದ ರತಿಕೇಳಿಯ ಆತುರ

ನಸುನಗುತ ಕುಸುಮ ಲೋಚನವ ತಾರೆ, ಆಲಿಂಗನಕೆ ಆಹ್ವಾನವಿದೆ
ಕುಣಿದಿಹರು ಸುರರೆಲ್ಲ ನಮ್ಮೊಳಗೆ, ಇಂದ್ರನ ಕಹಳೆ ಮೊಳಗುತಿದೆ,

ಕಾಮ ಹುಣ್ಣಿಮೆ ಇಂದು, ಕುಡಿದಿಹನೋ ಸೋಮರಸವನು ಇಂದು ಕೂಡ
ಹೊರಲಾರೆ ಇನ್ನು ಧಮನಿಯ ಒತ್ತಡ, ಚಂದಿರ ಮತಿ ಇನ್ನು ಬೇಡ ತಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ