ಶುಕ್ರವಾರ, ಮಾರ್ಚ್ 26, 2010

ಮೂರ್ತಿಯ ಕಿವಿ ಗುಟ್ಟು

ಮೂರ್ತಿಯ ಕಿವಿ ಗುಟ್ಟು
ಕೆ. ಆರ್. ಎಸ್. ಮೂರ್ತಿ

ಎಲ್ಲರ ಮಾತು ಕಿವಿಕೊಟ್ಟು ಕೇಳಬೇಡಿ
ಲಕ್ಷಕ್ಕೆ ಒಬ್ಬರಿಗೆ ಕೂಡ ಇಲ್ಲಪ್ಪ ಬುಧ್ಧಿ

ನಿಮ್ಮ ಜೀವನದಲ್ಲಿ ಒಬ್ಬರು ಮಾತ್ರ ಸಾಕು
ಎರಡೊ, ಮೂರೋ..., ಹೆಚ್ಚೆಂದರೆ ನಾಲ್ಕು

ನಿಮಗೆ ಎಷ್ಟು ಜನರು ಗೊತ್ತು ಎಣಿಸಿ ನೋಡಿ
ಸಾವಿರ, ಹತ್ತು ಸಾವಿರ ಮತ್ತೆ ಲೆಕ್ಕ ಮಾಡಿ

ದಾನ ಶೂರನಂತೆ ನಿಮ್ಮ ಕಿವಿ ಕೊಟ್ಟರೆ ಸಾಕು
ಹರಿಕಥೆ, ಸರಿಯೋ, ಬೊಕಳೆಯೋ ಬೇಡ ಮೈಕು

ಆಡಿ ನಡೆವವರನ್ನು ಒಂದು ಕೈಯಲ್ಲಿ ಎಣಿಸಿ
ಕೇಡಿ ಜನಗಳನ್ನು ಕಂಡು ಕಾಲುಗಳನ್ನು ಓಡಿಸಿ

ಸುಳ್ಳರ, ಮಳ್ಳರ, ಕಳ್ಳರ ಸ್ನೇಹ ಮಾಡಬೇಡಿ
ಚಿಲ್ಲರೆ ಬುಧ್ಧಿ, ದೊಡ್ಡ ಕುದುರೆ ದೂರ ಮಾಡಿ

ಚಾಡಿ ಹೇಳುತ್ತ ಕಿವಿ ಚುಚ್ಚುವವರೇ ಬೇಡ
ಚಾಡಿ ನಿಮ್ಮ ಬಗ್ಗೆ ಯಾರಿಗೂ ಡಂಗುರ ಬೇಡ

ಕಳ್ಳು ಕುಡಿಯುವವರ ಒಡನಾಟ ಊಟ ನಿಮಗೇಕೆ?
ಧೂಮ ಊದುವವರೇ ಬೇಡಪ್ಪ ನಿಮ್ಮ ಮುಖಕ್ಕೆ

ಹಣ ಬೇಕು; ಮಣಗಟ್ಟಲೆ ಬೇಡ; ಇದ್ದಷ್ಟು ಸಾಕು
ಜನ ಬೇಕು; ಪಟ್ಟಣಗಟ್ಟಲೆ ಬೇಡ; ಮಿತಿ ಇರ ಬೇಕು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ