ಶುಕ್ರವಾರ, ಮಾರ್ಚ್ 26, 2010

ಗುಂಡು ವೃತ್ತ ಕಾವ್ಯ

ಗುಂಡು ವೃತ್ತ ಕಾವ್ಯ
ಕೆ. ಆರ್. ಎಸ್. ಮೂರ್ತಿ

ಗುಂಡು ಸುಂದರ ಕಣ್ಣಿಗೆ,
ಗಂಡಸಿನ ಚಂಚಲ ಮನಸಿಗೆ,
ಗುಂಡು ಪ್ರಿಯನ ನಾಲಿಗೆಗೆ,
ಗುಂಡನೆಯ ನಾಟಿ ಬೆಲ್ಲದ ದಾಹಕ್ಕೆ,
ಗುಂಡಾಗಿ ಬೆಳೆಸಲು ಹೊಟ್ಟೆಗೆ,
ಉಂಡಾಡಿ ಗುಂಡನ ಮಿದುಳಿಗೆ,
ಗುಂಡು ಹೆಣ್ಣಿನ ಮೋಹಕ್ಕೆ, ಕಾಮಕ್ಕೆ,
ಗುಂಡು ಸಕಲಕ್ಕೆ, ಚತುರ್ವಿಧ ಪುರುಷಾರ್ಥಕ್ಕೆ,
ಬ್ರಹ್ಮಾನಂದ ಪಡೆಯುವುದಕ್ಕೆ.

ಗುಂಡು ಕಣ್ಣಿಗೆ ಸುಂದರ:
ಗುಂಡು ಹೆಣ್ಣಿಗೆ ಸುಂದರ;
ಗುಂಡು ತರಣಿಯ ಮೊಗ ಚೆನ್ನ,
ಮೈಮೇಲೆ ಗುಂಡು ಚೆಂಡುಗಳು ಚೆನ್ನ

ಗುಂಡು ನಾಲಿಗೆಗೆ ಅಂದ:
"ಗುಂಡು ಬಲು ಚೆಂದ"
ಗಂಡು ಗೂಂಡನೊಬ್ಬ ನಾನು;
ಗುಂಡು ಮೊದಲು ಕುಡಿದಾದ ಮೇಲೆ
ಉಂಡು ಗುಂಡ ತೇಗಿ ಮಲಗಿದರೆ
ಭ್ರಹ್ಮಾಂಡವೇ ಗುಂಡು ಗುಂಡಾಗಿ
ಸುತ್ತುತಿರೆ ಅದೇ ಒಂದು ಗಮ್ಮತ್ತು

ಗುಂಡು ಕಾಮಕ್ಕೆ ಚೆಂದ:
ಗುಂಡು ಕುಡಿಸಿದರೆ,
ಚಂಡಿ ಹೆಣ್ಣೂ
ಉಂಡಾಡಿ ಗುಂಡನ
ಮಂಡಿಯ ಮೇಲೆ
ಗುಂಡಾದ ಕುಂಡೆ ಊರುವಳು;
ಜಗವೆಲ್ಲ ತೋರುವಳು;
ಜಾಗರಣೆ ಮಾಡಿಸುವಳು

ಗುಂಡು ಪ್ರಿಯ
’ಗುಂಡೂ ರಾಯ’
ಟಿಪಿಕಲ್ ಕೈಲಾಸಂ ಕೂಡ
ಗುಂಡಿನ ಕೈಲಾಸ ನೋಡಿ ಕೊಂಡಾಡಿದರು

ಶಿಶ್ಯ, ಕವಿ ರಾಜ, ರಾಜರತ್ನಮ್
ಹಾಡಿ ಕೊಂಡಾಡಿದರು,
ಹೆಂಡ ಕುಡುಕ ರತ್ನನ್ನ.
ಬ್ರಾಹ್ಮಣರಾದರೂ ಬ್ರಹ್ಮ ಜ್ಞಾನಿಯೋ
ಎಂಬಂತೆ ಎಂಡ ಕುಡುಕ ರತ್ನನ ಬಾಯಲ್ಲಿ
"ಬ್ರಮ್ಮಾ ನಿನ್ಗೆ ಜೋಡಿಸ್ತೀನಿ"
ಅಂತ ಹಾಡುತ್ತ
ರತ್ನನ ಹೆಂಡ ಮುಟ್ಟಿದ ಕೈಯಲ್ಲಿ
ಬ್ರಮ್ಮಂಗೆ ಕೈ ಮುಗಿಸಿದರು.
ಗುಂಡಿನ ತೇಗಿದ್ದರೆ ಬ್ರಮ್ಮನನ್ನೇ ಒಲಿಸಬಹುದೇನೋ?

ಬೂಂದಿಯ ಲಾಡೂ ಗುಂಡಲ್ಲವೇ!
ರಂಭೆಯ ಚತುರ್ವಿಧ ಚೆಂಡುಗಳೂ ಗುಂಡಲ್ಲವೇ?
ಸರಸ್ವತಿಯು ಮೀಟುವ ವೀಣೆಯೂ ಗುಂಡಲ್ಲವೇ
ನಮ್ಮೆಲ್ಲರ ಪೊತ್ತ, ವಸುಧೆಯೂ ಗುಂಡಲ್ಲವೇ
ಗುಂಡು ರವಿಯ ನವಗ್ರಹಗಳೂ ಗುಂಡಲ್ಲವೇ
ನಕ್ಷತ್ರ ಲೋಕದ ತಾರೆಗಳು ಗುಂಡಲ್ಲವೇ
ಬಾಲಿವುಡ್ ನಲ್ಲಿ ಮೆರೆಯುವ ತಾರೆಗಳೂ ಗುಂಡಲ್ಲವೇ
ರಂಡೆಯರು ಸೇವಿಸುವ ಸನ್ಯಾಸಿಯ ತಲೆಯೂ ಗುಂಡಲ್ಲವೇ?

ಅಧಮರು ಆಡಮ್-ಈವ್ ತಿಂದ ಆಪಲ್ಲೂ ಗುಂಡಲ್ಲವೆ
ಶಿವ ಪಾರ್ವತಿ ತನಯ ’ಗ’ಕಾರನೂ ಗುಂಡಲ್ಲವೇ

ಪ್ರತಿದಿನವೂ ನೀವೂ, ನಿಮ್ಮ ರಂಭೆಯನ್ನು ಒಡಗೊಂಡು,
ಗುಂಡೂ ವ್ರತವನ್ನು ಮಡಿಯಲ್ಲಿ ಅತಿ ನಿಷ್ಟೆಯಲಿ ಮಾಡಿ,
ಗುಂಡು ಗುಂಡಾದ ವಿವಿಧ ಪ್ರಸಾದಗಳನ್ನು ಚೆನ್ನಾಗಿ ಉಂಡು
ಗಂಡಾಂತರ ಕಳೆಯಲು ಕಂಕಣ ಕಟ್ಟಿಕೊಳ್ಳಿ ನೀವೆಲ್ಲ ಇಂದೇ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ