ಚಿಂಕಷ್ಟೋತ್ತರ ನಾಮಾವಳಿ
ಕೆ. ಆರ್. ಎಸ್. ಮೂರ್ತಿ
ಚಿಂಕುರುಳಿ, ಚಿನ್ನಾರಿ, ಚಿಂಕುಲೋಚನೆ, ಚಿನ್ಮುಖಿ, ಚಿಂಕುಮಾರಿ, ಚಿಂಕುವಾಣಿ, ಚಿಂಕುವದನೆ, ಚಿಂಕುರಾಣಿ, ಚಿಂದುಟಿ, ಚಿನ್ನಾಸಿಕೆ, ಚಿಂಕುಚೆ, ಚಿನ್ನಾಭಿ, ಚಿನ್ನೋದರೆ, ಚಿನ್ನೇತ್ರೆ, ಚಿನ್ನಧರೆ, ಚಿನ್ನಯನೆ, ಚಿನ್ಹಸ್ತೆ, ಚಿನ್ಕಪಾಳೆ, ಚಿನ್ಭಾಷಾ ಪರಿಪೂರ್ಣೆ ........ ಮುಂದುವರಿಸಿ......
ಈ ಅಷ್ಟೋತ್ತರವನ್ನು ಹೇಳುವಾಗ ಚಿಂಕಮಲ, ಚಿಂದಾವರೆ, ಚಿಂದಾರ ಪುಷ್ಪ, ಚಿನ್ಪತ್ರ ಗಳನ್ನೂ, ಚಿಂಧೂಪ, ಚಿಂದೀಪಗಳನ್ನು ಅರ್ಪಿಸ ಬಹುದು.
ಪ್ರಸಾದಕ್ಕೆ ಚಿಂದೇವಿಗೆ ಏನು ಇಡಬೇಕು. ಅವಳಿಗೆ ಏನು ಇಷ್ಟ?
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ