ಶುಕ್ರವಾರ, ಮಾರ್ಚ್ 26, 2010

ಒಂದೇ ಹೊಕ್ಕಳ ಒಕ್ಕಲಿಗರು

ಒಂದೇ ಹೊಕ್ಕಳ ಒಕ್ಕಲಿಗರು
ಕೆ. ಆರ್. ಎಸ್. ಮೂರ್ತಿ

ಒಕ್ಕಲಿಗ ನಾನೆಂಬ ಅತಿ ಹೆಮ್ಮೆ
ಹರಿಯ ಹೊಕ್ಕಳಿನಿಂದ ಹೊರಹೊಮ್ಮಿ

ಕಮಲದ ಮೊಳಕೆ ಬೆಳೆಯಿತು ಅರಳಿ
ಕೋಮಲ ಮನಸಿಗನು ಉದ್ಭವಿಸೆ,
ಬೊಮ್ಮ ಸರಸತಿಯರು ಮನಬೆರೆಸೆ
ನಮ್ಮೆಲ್ಲರ ಒಕ್ಕಲು ಬೆಳೆಯಿತು

ಒಂದೇ ಹೊಕ್ಕಳ ಬಳ್ಳಿಯ ಮಕ್ಕಳು
ಒಂದೇ ಒಕ್ಕಲ ನೂರೊಂದು ಮಕ್ಕಳು

ಕಳ್ಳ ಒಕ್ಕಲು ಕುಲವು ನಮ್ಮದು
ಬೆಣ್ಣೆ ಕಳ್ಳನ ಒಕ್ಕಲು ನಮ್ಮದು

ಆಕಳು ಕಾಯುವ ಗೊಲ್ಲರು ನಾವೆಲ್ಲ
ಗೊಲ್ಲ ಗೋಪಣ್ಣನ ಬಲ್ಲವರು ದಿನವೆಲ್ಲ

ಬಾಗಿಲು ದಿನ, ರಾತ್ರಿ ಕಾಯುವವರು
ವೈಕುಂಠದ ಬಾಗಿಲು ಕಾಯುವ,
ಜನುಮ ಜನುಮಕೂ ಜಗಳ ಕಾಯುವವರು
ಇಳೆಯೆಲ್ಲ ಆಳಿದವರು, ಕಡೆಯಲ್ಲಿ
ಹರಿಯೊಡನೇ ಜಗಳವಾಡಿದವರು

ಹುಟ್ಟಿನಿಂದಲೇ ಒಕ್ಕಲಿಗರಲ್ಲವೇ,
ಒಂದೇ ಹೊಕ್ಕಳ ಬಳ್ಳಿಯವರು ಅಲ್ಲವೇ
ಹರಿಯ ಹೊಕ್ಕಳ ಬೊಮ್ಮನವರು
ಅಮ್ಮ ವಾಚಾಳಿ, ಅವಳ ನುಡಿಯಂತೆ
ಹ ಕಾರವಾದರೇನು? ಅ ಕಾರವಾದರೇನು?
ಹೊಕ್ಕಳಿಗರೂ, ಒಕಲಿಗರೂ,
ಲೆಕ್ಕ ಹಾಕುವ ರೊಕ್ಕಲಿಗರೂ,
ಚೊಕ್ಕಣ್ಣ ಲಿಂಗನ ಆಲಂಗಿಸುವ
ಚಿಕ್ಕಣ್ಣನಮ್ಮನ ಮೈಯಿಂದ ಹೊರಬಂದ
ಅಕ್ಕಮ್ಮನ ಬೊಕ್ಕಣ್ಣನ ಮಕ್ಕಳೂ
ಮಿಕ್ಕವರೆಲ್ಲರೂ ನಾವೆಲ್ಲ ಅಲ್ಲವೇ

ದಾರವಿಲ್ಲ, ಭಾರವಿಲ್ಲ ಎಮಗೆ
ಉದಾರದಲಿ ಇತರರ ಉದರ ಪೊಷಿಸುತ
ಆದರದಲ್ಲಿ ಸಡಗರದಲಿ ಸಂಭಾಷಿಸುತ
ಇತರರ ಸಂಭಾವಿಸುವರು ಇತರರು

ಮಳೆ, ಬೆಳೆ, ಕಾಳು, ಬೇಳೆ,
ನೆಲೆ ಇತ್ತ ಇಳೆಯ ಮಕ್ಕಳು
ಬೊಮ್ಮನ ಗೋತ್ರದ ಸಪಾತ್ರಿಗಳು ಅಲ್ಲವೇ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ