ಶುಕ್ರವಾರ, ಮಾರ್ಚ್ 26, 2010

ಕಾವಿಯ ಮಹಿಮೆಯ ಸಾರ

ಕಾವಿಯ ಮಹಿಮೆಯ ಸಾರ
ಕೆ. ಆರ್. ಎಸ್. ಮೂರ್ತಿ

ಕಾವಿಯಿದ್ದರೆ ನಿಮ್ಮ ಮೈಮೇಲೆ ಕೈಲಾಸ ಯಾರಿಗೆ ಬೇಕು?
ಕಾವಿಯ ಕಿಸೆಯಲ್ಲಿ ಕಾಸಿನ ಬಲು ದೊಡ್ದ ಗಂಟಿರಲೇ ಬೇಕು!

ಕಾವಿಯೊಂದಿದ್ದರೆ ಯೂನಿಫ಼ಾರಮ್ಮು ಎಲ್ಲಿಹೋದರೂ ಸಾಕಾದೀತು
ಬಂಗಲೆ ಬೇಕೆ? ಹೆಂಗಳು ಬೇಕೆ? ಬೇಕಾದಿದ್ದೆಲ್ಲಾ ನಿಮ್ಮದಾದೀತು

ಈಗ ನನ್ನ ಬಿಸಿನೆಸ್ಸು ಐಡಿಯಾ ಕೇಳಿ, ಇದು ನನ್ನ-ನಿಮ್ಮ ಗುಟ್ಟು
ಬಟ್ಟೆ ಫ಼್ಯಾಕ್ಟರಿ ಮಾಡುವ ಆಶೆ ನನಗೆ ಬಹಳ ಕಾಲದಿಂದ ಇತ್ತು

ನನ್ನ ಐಡಿಯಾ ಬಹಳ ಸಿಂಪಲ್ಲು; ಅದರಲ್ಲಿ ಮಾಡೊದು ಬಣ್ಣ ಒಂದೇ
ಬಣ್ಣ ಒಂದಾದರೂ ಅನೇಕ ಸ್ಟೈಲಿನ ಡಿಸೈನಿನ ಐಡಿಯಾ ಮಾತ್ರ ನಂದೇ

ಸೀರೆ ಬೇಕಾ? ಅದು ಮೂರು ಮೊಳ ಮಾತ್ರ; ಒಳಗಿನ ಸೀ ಥ್ರೂ ಲಂಗದ ಗುಟ್ಟು!
ರವಿಕೆ ಬೇಕಾ? ಲೋ ಕಟ್ಟು ಬ್ಲೌಸು ಬೇಕಾ? ಎಷ್ಟು ಬಾಕದರೂ ಮಾಡ್ತೀವಿ ಕಟ್ಟು

ಸ್ಲೀವ್ ಲೆಸ್ಸು ಬೇಕಾ? ಬ್ರಾ ಏಕೆ ಬೇಕು? ಅದು ಮಾತ್ರ ಮಾಡಲ್ಲ. ದಿಮಾಂಡೇ ಇಲ್ಲ
ಸೊಂಟ ಕಾಣ ಬೇಕಾ, ಅದಕ್ಕೆ ತೊಂದರೆ ಇಲ್ಲ, ಹೊಕ್ಕಳು ಪ್ರದರ್ಶನಕ್ಕೆ ಅಡ್ಡಿ ಇಲ್ಲ

ಸ್ಕರ್ಟು ಬೇಕೇನು, ಬಟ್ಟೆ ಉಳಿತಾಯ ನಮ್ಮ ಸ್ಲೋಗನ್ನು! ಪುಟಾಣಿ ಸೈಜ಼ು ಮಾತ್ರ ಉಂಟು
ಬಿಕಿನಿಗೆ ಮಾತ್ರ ನಾವು ಫ಼ೇಮಸ್ಸು! ತೆಳುವಿನ ದಾರದ್ದು, ಅದ್ದಕ್ಕೆ ಅಂದದ ಅತಿ ಪುಟ್ಟ ಗಂಟು

ಗಂಡಸರಿಗೆ ಪ್ಯಾಂಟು ಕೂಡ ಇದೆ, ಚಿಕ್ಕ ಚಡ್ಡಿಯ ಡಿಸೈನು ಬಹಳ ತರಹ ಬೇಕೇ?
ಬೆಳಿಗ್ಗೆ ಒಂದು ಸೈಜ಼ು, ಬೀಚಿಗೊಂದು ಇರ ಬೇಕೆ? ರಾತ್ರಿಗೆ ಟೈಟಾದ್ದು ಪುಟ್ಟದಿರಬೇಕೇ!

ಶರ್ಟು ಟೈಟು ಉಂಟು, ನಾನು ಮಾಡಿದ ಡಿಸೈನು ಕಚ್ಚೆ ಪಂಚೆಗೆ ಸ್ವಲ್ಪ ಲೂಸು ಗಂಟು
ಜುಬ್ಬ, ಕೋಟು, ಶಲ್ಯ, ಕರ್ಚೀಫ಼ು ಒಂದು ಸೆಟ್ಟು; ದುಡ್ಡಿಗೆ ಸೀಕ್ರೆಟ್ ಪಾಕೆಟ್ಟೂ ಉಂಟು,

ಯಾವುದಕ್ಕೂ ಗುಂಡಿ ನಾಪತ್ತೆ! ಎಲ್ಲಕೂ ಬೇಕಿದ್ದರೆ ಮಾತ್ರ ಹೊಲಿಯೋದು ಸ್ಪೆಶಲ್ ಜ಼ಿಪ್ಪು
ರಿಮೋಟ್ ಕಂಟ್ರೋಲ್ ಬಹಳ ಮಾಡ್ರನ್ನು; ಚಿಟಿಕೆ ಹೊಡೆದರೆ ಸಾಕು ಸರಿಯುವುದು ಗಪ್ಪು ಚಿಪ್ಪು

ಸೆಲ್ವಾರು, ಕಮ್ಮೀಸು, ಚೈನೀಸು, ಜ್ಯಾಪನೀಸು, ಫ಼್ರೆಂಚು, ಇಟ್ಯಾಲಿಯನ್ನು ನನ್ನದಿದೆ ಡಿಸೈನೂ
ಎಲ್ಲ ದೇಶದಲ್ಲಿ ನಮ್ಮ ಅಂಗಡಿಯ ಶೋರೂಮು. ಕ್ರೆಡಿಟ್ಟು ಇಲ್ಲ, ಕೊಡಿ ಕ್ಯಾಷು ನೋಡಿ ನಮ್ಮ ಸೈನು

ನಿಮ್ಮ ಮೈಮೇಲೆ ನಮ್ಮ ಅಂಗಡಿಯ ಕಾವಿಯೊಂದಿದ್ದರೆ ಸಾವಿನವರೆಗೂ ಸಿಗುವುದು ಎಲ್ಲ ಕೇಳಿದ ವರ
ವಿಭೂತಿ ಕೈಲಿದ್ದರೆ ವರಗಳೂ, ವಧುಗಳೂ ನಿಮ್ಮ ವಶ; ಇದು ಕಾವಿಯ ಮಹಾ ಮಹಿಮೆಯ ಸಾರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ