ಶುಕ್ರವಾರ, ಮಾರ್ಚ್ 26, 2010

ಪದ ಸೃಷ್ಟಿ ಮೈದಾನ

ಪದ ಸೃಷ್ಟಿ ಮೈದಾನ
ಕೆ. ಆರ್. ಎಸ್. ಮೂರ್ತಿ

ಅ ಆ ಇ ಈ ಉ ಊ..ಸ್ವರ ಕೋಗಿಲೆ ಗಳೆಲ್ಲ ಹಾಡುತಿದೆ
ಕನ್ನಡದ ಕಿವಿಗಿಂಪಿನ ಮಾಧುರ್ಯ ಎಲ್ಲೆಲ್ಲೂ ಕೇಳುತಿದೆ

ರಾಗಕ್ಕೆ ತಕ್ಕಂತೆ, ಜೊತೆಗೆ ಬೇಕಲ್ಲವೇ ಮೇಲೋಗರ?
ಕೇಳಿ ನೋಡಿ ಭೋಜನ ಕುಶಲ ನಳ ಮಹಾರಾಜರ

ಭೀಮನನ್ನೇ ಅಡುಗೆಗೆ ಕರೆಸಿದರೆ ತಿಳಿಯ ಹೇಳುವರು
ರುಚಿ ಬೆರೆಸುವುದಕ್ಕೆ ವ್ಯಂಜನಗಳ ತಿಳಿಸುವರು

ಕ ಚ ಟ ತ ಪ ಯ ಆದಿ ವ್ಯಂಜನಗಳು ಹೇರಳ
ಐವತ್ತೆರಡು ಅಕ್ಷರಗಳ ಭಂಡಾರವು ಇದೆಯಲ್ಲ

ಮತ್ತೆ, ಮತ್ತೆ ಸುತ್ತಿ ಕನ್ನಡದ ಪದ ಕುಸುಮಗಳ
ಸೇರಿಸಿದರೆ ಆಗದೇ ಪದ ಮಾಲೆ ಸುತ್ತಿ ಜಗವೆಲ್ಲ

ಅಮ್ಮನ ಪೆಸರಿನ ಕಂಪು ಸೂಸುವುದು ಸರಿ ಪಸರಿಸೆ
ಒಂದೇ ಸಾಕು, ಎರಡು, ಮೂರು, ಹತ್ತು ಸಾಕೇ ಸೇರಿಸೆ

ಈಗ ಕೇಳಿ ಮಜ: ತೆಗೆದು ಕೊಳ್ಳಿ ಬೇಕಾದ ಒಂದು ಪದ
ಕನ್ನಡದ ಗದುಗಿನ ವೀರ ನಾರಣಪ್ಪನಿಗೇನು ಪ್ರಿಯ ಪದ?

ಕವನ: ಕ ವ ನ ಇದಕ್ಕೆ ಸ್ವರಗಳ ಒಲವಿನ ಮಿಲನ
ಕ ಗೆ ಆಗಲಿ ಹದಿನಾರು ಹದಿಹರೆಯರ ಸ್ವರ ಮಿಲನ

ವ ನ ಗಳಿಗೆ ಆಗಿಹೋಗಲಿ ಇದೇ ರೀತಿಯ ಪರಿ ಪ್ರಣಯ
ವ್ಯಂಜನ, ಅನುಸಾರ, ವಿಸರ್ಗಗಳ ಜೊತೆಗೆ ಸ್ವರ ಪ್ರನಯ

ಒಟ್ಟು ನಲವತ್ತೆಂಟು, ಮೂರಕ್ಷರದ ಪದಗಳ ಗಣಿತ
ನಾನೇನೋ ಪೆದ್ದ, ನಿಮಗೆಲ್ಲ ಗೊತ್ತು, ನಾನಲ್ಲ ಪರಿಣಿತ

ಮೂರೇ ಅಕ್ಷರದ ಪದಗಳನ್ನು ಎಷ್ಟು ಜೋಡಿಸಬಹುದು
ಒಪ್ಪಿದೆ: ಕೆಲವು ಪದಗಳು ಅಸಂಬಧ್ಧ, ಆಗಿಹೋಗಬಹುದು

ಉಳಿದಾವು ಅನೇಕ ಪದಗಳು ನಮ್ಮ ಭಾಷೆಗೇ ಹೊಸತು
ಕೊಡಬಹುದೇ ಹೊಸ ಅರ್ಥಗಳ, ಭಂಡಾರವೇ ಬೆಳೆದೀತು

ಕಿವನ, ಕೀವನ, ಕುವನ, ಕೂವನ, ಕೃವನ, ಕ್ರೂಪವನ = ೬
ಕೆವನ, ಕೇವನ, ಕೈವನ, ಕೊವನ, ಕೋವನ, ಕೌವನ = ೬

ಆಗಲೇ ಇದ್ದದ್ದು: ನಾವಿಕ, ನಾವೇಕೆ, ನಾವೈಕ್ಯ, ನೂಕುವ,
ಕವನ ದಿಂದ ೫: ಕನವ, ವಕನ, ವನಕ, ನಕವ, ನವಕ

ಇಲ್ಲದ್ದನ್ನು ಸೃಷ್ಟಿಸುವವನು ಅಲ್ಲವೇ ನನ್ನ, ನಿಮ್ಮ ಪಿತ ಬ್ರಹ್ಮ
ಸರಸತಿಯ ಬೇಡಿಕೊಳ್ಳಿ: ನೀವೇ ಆಗುವಿರಂತೆ ಇಂದಿನಿಂದ ಪದ ಬ್ರಹ್ಮ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ