ಚೆಂದೊಳ್ಳಿ ಚೆಲುವೆ ಬೆಕ್ಕಿನ ಮರಿ
ಕೆ. ಆರ್. ಎಸ್. ಮೂರ್ತಿ
ಎಲೆಲೆ ಎಲೆಲೇ! ಪಕ್ಕದ ಕೇರಿಯ ವೈಯಾರಿ ಹೆಣ್ಣೇ!
ಸುರ ಸುಂದರ ಚೆಲುವೆ ಬೆಕ್ಕಿನ ಮರಿ ನೀ ಕಣೇ!
ನಿನ್ನ ನೋಡಿದರೆ ಸಾಕು ನನ್ನ ಮೈಯ ಕೂದಲೆಲ್ಲಾ
ಕೆದರಿ ನೆಟ್ಟಗೆ ಸೆಟೆದು ನಿಂತು ನಡಗಿ ಹೋಗುವುದಲ್ಲ
ನೀ ಪರ್ರ್ ಎಂದರೆ, ನನ್ನ ಎದೆಯೇ ಹಾಡ್ತದ ಡವ ಡವ
ನನ್ನ ಸಿಂಹದ ಬಾಲ ಬರ್ರ್ ಭರ್ರೆಂದು ನಡುಗಿ ಹೋಗ್ತಾವ
ನಿನ್ನ ಸುಗಂಧದ ಕಂಪು ನನ್ನ ಮನವನ್ನೇ ಮರಳು ಮಾಡೈತೆ
ನೋಡೆಲೆ ಈ ಮೀಸೆ ಕೆಳಗಿರೊ ಮೂಗಿನ ಹೊಳ್ಳೆ ದೊಡ್ದದಾಗೈತೆ
ನಿಮ್ಮೂರ ಕುನ್ನಿಗಳು ಕೊಂಯ್, ಕೊಂಯ್ ಅಂತ ವದಲ್ತಾರೆ ನಾರಿ
ನಾ ಒಮ್ಮೆ ಗರ್ಜಿಸಿದರೆ ಸಾಕು ಕುನ್ನಿಗಳೆಲ್ಲ ಕೇರಿ ಬಿಟ್ಟು ಪರಾರಿ
ಬಂದು ಬಿಡೆ ನಮ್ಮ ಅಟ್ಟೀಗೆ, ಇದ್ದು ಆಟ ನೋಡೆ ನನ್ನ ಜತ್ಯಾಗೆ
ದಿನಕ್ಕೆ ಏಟೊ ಸಲ ಏರಿ ಸವಾರಿ ಮಾಡುವಂತೆ ಸಿಂಹಾಸನದ ಗದ್ದುಗೆ
ಕುನ್ನಿಗಳ್ ಬಿಟ್ಟು ಬಂದು ಬಿಡೆ ಆಗುವೆ ನನ್ನ ಪಟ್ಟದ ರಾಣಿ ಇಂದೇ
ದಿನವೆಲ್ಲ ಚೆಲ್ಲಾಟ ಮುಗಿಯದು ಹೆಣ್ಣೇ ಹಿಂಬಾಲಿಸ್ತೀನಿ ನಿನ್ನ ಹಿಂದೆ
ರುಚಿ ನೋಡ್ತಾ ಇದ್ರೆ ದಿನ ರಾತ್ರಿ ನಿನ್ನ ಮೈಮೇಲಿನ ಘಮ ಘಮಾ
ನಿನ್ನ ಮೈಯಲ್ಲೆಲ್ಲಾ ರಕ್ತ ಹರೀತೈತೆ ಮಿಂಚಂತೆ ಝುಮ ಝುಮಾ
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ