ನೆನಪಿನಂಗಳದ ಸುಂದರಿ
ಕೆ. ಆರ್. ಎಸ್. ಮೂರ್ತಿ
ನೆನಪಿನಂಗಳದಲ್ಲಿ ವೈಯಾರದಲಿ ಕುಣಿದು ತಣಿಸುವ ಸುಂದರಿ
ಬೆಳಕಿನ ಕಿರಣ ಮನೆಯ ಅಂಗಳದಲ್ಲಿ ಚೆಲ್ಲಿದರೆ ನೀನು ಪರಾರಿ
ಕನಸಿನಲಿ ಗೋಚರಿಸಿ ಚರಿಸುವ ಗೌರವರ್ಣದ ಚಿತ್ರದ ಸುಂದರರೂಪಿ
ನನಸಿನಲಿ ಗೋಚರಿಸದೆ, ಕೈಚಾಚಿ ಕೂಗಿದರೂ ಓಗೊಡದೆ ಹೋಪೆ
ಮನಕೆ ಎಟುಕುವ, ನಿದ್ರಾ ದೇವತೆ, ರೂಪಸಿಯೆ ಕಲ್ಪನಾ ಶರೀರೆ
ದಿನದಿ ಎಟುಕದ, ಕಟುಕ ಮನಸಿನ, ನಾಟಕವ ಆಡುವೆ ಬಿಕನಾರಿ
ಕನಸೊಳು ಕಾಣಿಸುವ ವ್ರತವ ಹಿಡಿದವಳ ಒಲಿಸಲಿದು ಉಪಾಯವು
ಹಗಲುಗನಸು ನನ್ನ ಆವರಿಸಿದೆ, ದಿನ ಪೂರ್ತಿ ಪ್ರತಿಯೊಂದು ಗಳಿಗೆಯು
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ