ಭಾನುವಾರ, ಏಪ್ರಿಲ್ 25, 2010

ಅನ್ಯತೆಗೆ ಅಂತರ?

ಅನ್ಯತೆಗೆ ಅಂತರ?
ಕೆ. ಅರ್. ಎಸ್. ಮೂರ್ತಿ

ಅನ್ಯ ಲೋಕಗಳ ಇರುಹು ಅರಿವಾಗಿದೆ
ಅನ್ಯ ಲೋಕದ ಅನ್ಯ ಜೀವದ ಇರುಹು?

ಅದೇಕೆ ಕಾಣದೆ, ಈ ಹುಲು ಮಾನವಗೆ
ಅರಿಯದೆ ಕಣ್ಣು ಮುಚ್ಚಾಲೆ ಆಟವನಾಡುತಿದೆ?

ಇದ್ದರೆ ಇರಬಹುದು, ಇಲ್ಲದೆಯೂ ಬಹುದು
ನನ್ನಿರುವಿನ ಅರಿವು ಅನ್ಯ ಜೀವಕ್ಕೆ ಅರಿವುಂಟೇ?

ಕೋಟಿ, ಕೋಟಿ ಕಿರಣ ಜವ ವರುಷ ದೂರದ
ತಾರೆಯನು ಸುತ್ತುವ ಗ್ರಹದಲ್ಲಿ ಗೃಹ ಮಾಡಿದ್ದರೆ?

ಅನ್ಯ ಜೀವ ಅನನ್ಯ ಆಗುವುದೇ?
ನಾನು ಅನ್ಯ ಜೀವಕ್ಕೆ ಅನ್ಯ!

ಜೀವ-ಜೀವಕ್ಕೆ ಅನ್ಯತೆಯ ನ್ಯೂನತೆ
ಹೊಸದೇನಲ್ಲ ನಮ್ಮ ಗ್ರಹದ ಗೃಹದೊಳಗೆ!

ಅನ್ಯತೆಗೆ ದೂರ ಹತ್ತಿರಗಳಿಲ್ಲ!
ಅವಳಿ-ಜವಳಿಗೇ ಜಗಳ ಅಂತರ ಆದರೂ
ಕಿಂಚಿತ್ತೂ ಅಚ್ಚರಿಯಿಲ್ಲ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ