ಬುಧವಾರ, ಏಪ್ರಿಲ್ 14, 2010

ಕೆಟ್ಟವನಲ್ಲಪ್ಪ ನಾನು!

ಕೆಟ್ಟವನಲ್ಲಪ್ಪ ನಾನು!
ಕೆ. ಆರ್. ಎಸ್. ಮೂರ್ತಿ

ಸ್ವಾಮಿ! ಅಮ್ಮಾವ್ರೇ! ಸರಿಯಾಗಿ ಕಿವಿ ಕೊಟ್ಟು ಕೇಳಿ ನನ್ಮಾತು.
ಕೆಟ್ಟವನಲ್ಲರೀ ನಾನು, ಬರೀ ಸುಳ್ಳುಗಳು ಅವರಿವರ ಮಾತು

ಸೊಟ್ಟ, ಸೊಟ್ಟ ಮಾತಲ್ಲದೆ, ನಾಟಕ ಆಡುವವನು ಆ ಕೆಟ್ಟ ಕವಿ
ನೆಟ್ಟದಾಗಿ ಒಂದು ಮಾತಿಲ್ಲ, ಗುಂಡುಗೋವಿ; ಹುಡ್ಗೀರ್ಗೆ ಅವನೇ ಸವಿ

ಯಾವಾಗ್ಲೂ ಹುಡುಗೀರ ಮೈಮೇಲೇಯೇ, ಮೇಲೇ, ಕೆಳಗೇ ಅವನ ಕಣ್ಣು
ಕಂಡ ಹುಡುಗೀರ್ಗೆಲ್ಲಾ ಮಾಯ ಮಾಡಿ ಬಿಡ್ತಾನೆ, ಇವನಾಸೆ ಪರಹೆಣ್ಣು

ಅವ್ರು ಇವ್ನ ಹಿಂದೇನೇ ಯಾವಾಗಲೂ ಹಿಂಬಾಲಿಸಿ ಕೊಂಡಿರೋಹಾಗೆ ಹಾಗೆ ಮಾಟ
ಉಪವಾಸದಿಂದ ಹಸಿದ ಹುಡುಗೀರ್ಗೂ ಬೇಕುರೀ ಇವನ ಪರಿ ಪರಿ ಚೆಲ್ಲಾಟ

ಅವ್ನು ಕೆಟ್ಟೋನು ಅಂತ ನಾನೂ ಅವನ ಹಾಗೆ ಹೆಣ್ಣಿನ ಹುಚ್ಚು ಕೇಡಿಗ ಅನ್ನಕೋ ಬೇಡಿ
ಗಟ್ಟಿ ಮೊಸರು ಗಡಿಗೆ ಪೂರ್ತಿ ಕದ್ದು ತಿಂದು ತಿಂದು, ನನ್ನ ಬಾಯಿಗೆ ಕೆಸರು ನೋಡಿ

ನಾನೇನಾದರೂ ನಿಮ್ಮ ಹೆಂಡತಿ ಎಲ್ಲಾ ಕಡೆನೂ ಉಬ್ಬಿ ಬಹಳ ಚೆನ್ನಾಗಿದಾಳೆ ಅಂತ
ಸ್ವಲ್ಪ ಜಾಸ್ತಿ ಅವ್ಳ ಬಗ್ಗೇನೇ ವಿವರಿಸಿ ಮಾತಾಡಿದ್ರೆ, ಹೇಳಿ ನಿಮಗೆ ತೊಂದರೆ ಇಲ್ಲಾಂತ

ಸ್ವಲ್ಪ, ಸ್ವಲ್ಪ ಕೀಟಲೆ ಮಾಡ್ತೀನಿ ನಿಮ್ಮ ಹೆಂಡ್ತೀನ, ಒಂದೊಂದು ಸಾರಿ ಕೈಯೂ ಹಿಡ್ಕೊಂಡು
ಅವ್ಳೇನಾದ್ರು ನನ್ನ ಕಡೆ ನೋಡಿ ನಕ್ಕಾಗ, ಅವ್ಳ ಕೆನ್ನೆ ಕೆಂಪಾಗಿದ್ಯಾಂತ ಹತ್ತಿರದಿಂದ ಕಂಡು

ನನಗೂ ಒಂದು ತರಹ ಒಳಗೇ ಏನೋ ಆನಂದ; ಉಪ್ಪು, ಹುಳಿ, ಖಾರ ತಿನ್ನೋವ್ಳಿಗೂ ಹಾಗೇ ತಾನೆ
ಅಕಸ್ಮಾತ್ ಅವ್ಳನ್ನ ಇನ್ನೂ ಹತ್ತಿರ ಎಳ್ಕೊಂಡ್ರೆ, ಸೀರೆ ಸೆರಗು ಎಳೆದರೆ ಪರವಾಗಿಲ್ಲ ತಾನೆ?

ನಿಮ್ಗೂ ಆಫ಼ೀಸಿನಲ್ಲಿ ಕೆಲಸ ಜಾಸ್ತಿ ಅಂತ ಹೇಳಿದ್ದೀರಿ, ಇಬ್ರಿಗೂ ಮನೇಲಿ ಬಹಳ ಟೆನ್ಷನ್ ಇದ್ದಾಗ
ಆಗಾಗ ಊರಾಚೆ ಟೂರ್ ಹೊಗೋದಿರತ್ತೆ ಪಾಪ ನಿಮಗೆ, ಆಗ ಅವ್ಳು ಆಸೆಯಿಂದ ಮನೆಗೆ ಕರೆದಾಗ

ಒಂಬಂಟಿತನದಿಂದ ಬೇಸರ ಮಾಡಿಕೊಂಡಿದಾಳೆ ಅಂತ, ಚೂರು ಚೂರು ಆಟ ಆಡೋಣಾಂತ ಅಷ್ಟೆ
ರಾತ್ರಿಯೆಲ್ಲಾ ಆಡಲ್ಲಪ್ಪ ನಾವು, ಒಂದು ಐದು ನಿಮಿಷ ನಿದ್ದೆ ಇಬ್ಬರಿಗೂ ಗ್ಯಾರಂಟಿ ಆಗತ್ತೆ

ಬೆಳಗ್ಗೆ ಬ್ರೇಕ್ ಫ಼ಾಸ್ಟ್ ಮುಗಿದ ಮೇಲೆ ಒಂದೆರಡು ಸಾರಿ, ಲಂಚಿಗೆ ಮುಂಚೆ ಒಂದಿಷ್ಟು ಚೆಲ್ಲಾಟ
ಊಟ ಆದ ಮೇಲೆ, ಸ್ವಲ್ಪ ಸಿಹಿ ಬೇಕಲ್ವೇ! ತಂಗಾಳಿಯಲ್ಲಿ ಕೈಹಿಡಿದು ವಾಕಿಂಗು ಮಾಡ್ತಾ ಸಂಜೆ

ಡಿನ್ನರ್ರಿಗೆ ಸಿಹಿ ತಿಂಡಿ ಬೇರೆ, ಬೇರೆ ತರಹ, ಆಟ, ಊಟ ಅಡಿಗೆ ಮನೇಲಿ ಎಲ್ಲೆಲ್ಲಾ ಕಡೆಯಲ್ಲಿ
ನಿಮ್ಮವ್ಳಿಗೆ ಸಿಹಿ ತಿಂಡಿಗಳು ಅಂದ್ರೆ, ಒಂದಲ್ಲ, ಎರಡಲ್ಲ ಬಹಳ ಇಷ್ಟಾಂತ ನಿಮಗೆ ಗೊತ್ತಿರಲಿ

ಏನಂದ್ರೀ? ಎನೇನೋ ಮಾತಾಡ್ತಿದೀನೇ ನಾನು? ನಿಮ್ಮ ಹೆಂಡ್ತಿ ಬಗ್ಗೇನಾ? ಏನೇನೋ ಕೆಟ್ಟದಾಗಿ ಅಂದಿರಾ?
ಓ! ಅದು ನಾನಂತೂ ಅಲ್ಲ. ಆ ಕವಿ, ಸಂಗೀತಗಾರ, ನಾಟಕಕಾರ ಇರಲೇ ಬೇಕು! ಇದೆಲ್ಲ ಮಾತು ಅಂದರೆ

ನಾನು ಒಳ್ಳೆಯವನಪ್ಪ. ನಾನು ಆವಾಗಲೇ ಹೇಳಿದನಲ್ಲ ನಾನ್ಯಾವಾಗ್ಲೂ ಚಿನ್ನದಂಥ ಮಾತಾಡೋನೇ
ಒಂದೊಂದು ಸಾರಿ, ನನಗೇ ಮರೆಮಾಸಿ, ಮಾಯ ಮಾಡಿ ನನ್ನ ಮೈಮೇಲೆ ಬಂದ್ಬಿಡ್ತಾನೆ! ಆಟ ಆಡ್ತಾನೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ