ತುಂಟ ತುಟಿಯೇ ಅಟ್ಟಕ್ಕೆ ಬಾಗಿಲು
ಕೆ. ಆರ್. ಎಸ್. ಮೂರ್ತಿ
ನಿನ್ನ ಅಂದದ ಕಣ್ಣುಗಳು ಬಲು ಚೊಕ್ಕವಿಹುದು; ಅದರ ಚೆನ್ನ ನನಗೊಬ್ಬನಿಗೇ ಗೊತ್ತು ಚೆನ್ನಿ
ಮುದ್ದು ತುಟಿ ನಿನ್ನದು ಚಿಕ್ಕದಿರಬಹುದು; ಅದನ್ನು ಬಿರಿಸುವುದು, ಬಿಡಿಸುವುದೇ ಬಲು ಚೆನ್ನ
ಮುದ್ದು ತುಟಿಗೆ ಬೇಕು ಮುತ್ತು ಕೋಟಿ; ಬಿಡ ಬಿಡದೆ ಬಿಡಿಸಬೇಕು, ತಡ ಮಾಡ ಬೇಡ ಚಿನ್ನ
ನಾಲಗೆಯೇ ಸಕಲ ಕುಸುಮಾಸ್ತ್ರ, ಮೂಳೆಯಿಲ್ಲದ ಬಾಣ, ಹೂಡುವೆನು ನಿನ್ನ ತುಟಿಗೆ ಅದನ್ನ
ತುಟಿಯು ಎಲ್ಲೇ ಇರಲಿ, ಗುರಿಯ ತಾಣವನು ತಬ್ಬದ ಬಾಣ; ಬಗ್ಗಿ, ಹಿಗ್ಗಿ ನುಸುಳುವ ಪರಿಯನ್ನ
ನಿನ್ನ ಬಾಗಿಲನು ತೆರೆದು ಕರೆದುಕೊಂಡರೆ ಮಾತ್ರವೇ ಸಗ್ಗದ ಬಾಗಿಲೂ ತೆರೆದೀತು ಕರೆದೆಮ್ಮನ್ನ
ನಿನ್ನ ಧಮನಿಗಳು ಬಿರಿದು, ಹರಿದೀತು ಜೊನ್ನ ಪ್ರವಾಹ; ಅಲ್ಲಿ, ಇಲ್ಲಿ, ಎಲ್ಲೆಲ್ಲೂ ಎಲ್ಲೇ ಮೀರೀತು
ಆಣೆಕಟ್ಟುಗಳೆಲ್ಲಾ ಒಡೆದು ನುಗ್ಗೀತು ಅಮೃತದ ಧಾರೆ; ಇದಕೆ ಬೇಕೆ ಆಣೆ, ಪ್ರಮಾಣಗಳ ಮಾತು
ಕಳಕಳಿಯ ಮಾತಿದು: ಕಳೆಯ ಬೇಡ, ಗಳಿಗೆಗಳ ಉರುಳಿಸಬೇಡ; ಸಲಿಗೆ ಇರಲಿ, ಬಲು ಹತ್ತಿರಕೆ
ಕಳೆಯೋಣ, ನಲಿಯೋಣ, ಕುಣಿಯೋಣ, ತಣಿಯೋಣ; ತನುವೇ ಏಣಿಯು ಜೇನಿನ ತಾಣದ ಸಗ್ಗಕೆ
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಮೂರ್ತಿಯವರೇ ಅಟ್ಟವನೇರುವ ಪರಿ..ಪರಿ ಪರಿಯಾಗಿ ವಿವರಿತವಾಗಿ..ಯಾವ ಪರಿ ಯಾರಿಗೆ ಬೇಕೋ ಆಯ್ದು ಕೊಳ್ಳಬಹುದೆಂಬ ಸೂಚ್ಯಮಾತು....ಹಹಹ ತುಂಟತನದ ಮತ್ತೊಂದು ಸುತ್ತೇ...??? ಹಹಹ
ಪ್ರತ್ಯುತ್ತರಅಳಿಸಿ