ಶುಕ್ರವಾರ, ಫೆಬ್ರವರಿ 4, 2011

ತುಂಟ ವ್ಯಾಲಂಟನ ದಿನ
ಕೆ. ಆರ್. ಎಸ. ಮೂರ್ತಿ

ಲಂಪಟ ತುಂಟ ವ್ಯಾಲಂಟ ಅಂತೂ ಮತ್ತೊಮ್ಮೆ ಬರಲಿರುವ
ಅಂಟಿಸಿ, ಜಂಟಿ ಕಟ್ಟಿ ಅವನ - ಅವಳ ಆಟವಾಡಿಸುವಲಿರುವ

ಹದಿನಾಕರಂದು ಚಂದಿರನ ಹಾಲು ಬೆಳದಿಂಗಳಿನ ಅಂಗಳದಲ್ಲಿ
ಜೇನಿನ ಹನಿಗಳು ತುಂತುರು ತುಂತುರಾಗಿ, ಮೂಡಿ ಆಗಸದಲ್ಲಿ

ಧರೆಗೆ ಧಾರೆ ಧಾರೆಯಾಗಿ ಇಳೆಯೆ, ನಾನೂ ನೀನೂ ನೆನೆಯುವ
ಬರಿ ಬೆತ್ತಲಲಿ ಮಿಲನದಲಿ ಮೀಯುವ ಮದನ ರತಿಯರಾಗುವ

ಬಾರಾ! ಮನದಣಿಯುವ ಮೈಮನಗಳ ಮರೆತು ಬೆರೆವ ಬಾರಾ!
ಒಬ್ಬರನ್ನೊಬ್ಬರ ಏರಿ ತಾರಾ ಮಂಡಲಗಳ ಅಲೆಯುವ ಬಾರಾ!

ತನುಗಳ ಸವಿಯುತ ಇಬ್ಬರೂ ಒಬ್ಬರನ್ನೊಬ್ಬರ ರುಚಿಸುವ ಬಾರಾ!
ಒಬ್ಬರ ಮನದಲಿ ಇನ್ನೊಬ್ಬರು ಹೊಕ್ಕು ಲೋಕಗಳ ರಚಿಸುವ ಬಾರಾ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ