ಶನಿವಾರ, ಅಕ್ಟೋಬರ್ 23, 2010

ನಿನ್ನದೇ ನೆನಪು

ನಿನ್ನದೇ ನೆನಪು
ಕೆ. ಆರ್. ಎಸ್. ಮೂರ್ತಿ

ತುಂಬು ಬೆಳದಿಂಗಳು ಅಂಗಳದ ಮೇಲೆಲ್ಲಾ ಹದನಾಗಿ ಹಾಸಿತ್ತು
ಹಿತ್ತಲ ತೋಟದಲ್ಲಿಯೇ ಚಿಗುರು ಬಳ್ಳಿಯಾಗಿ ಬೆಳೆದು ದೊಡ್ಡದಾಗಿತ್ತು

ಕಂಪು ಹರಡಿತ್ತು ಬೆಳೆದು ಅರಳಿ ನಿಂತಿದ್ದ ಗೊಂಚು ಕೆಂಪು ಗುಲಾಬಿ
ಎತ್ತಿಂದಲೋ ಬಂದು, ಅತ್ತಿತ್ತಲೂ ತಿರುಗದೆ ಮೇಲೆ ಕುಳಿತಾಗ ದುಂಬಿ

ನಿನ್ನ ಮೊಗದ ಬಣ್ಣದ ಬೊಂಬೆಯು ಮನದ ಪರದೆಯ ಮೇಲೆ ಕುಣಿದು
ಅರಳಿತು ಹೃದಯದ ಹೂವು; ಗುಲಾಬಿಗೆರಗಿದೆ ಆ ಬೆರಗಿಗೆ ಮಣಿದು

3 ಕಾಮೆಂಟ್‌ಗಳು:

  1. ಮೂರ್ತಿಯವರೇ, ಪ್ರವೀಣ ತಂದುಬಿಟ್ಟ ನಿಮ್ಮ ಬ್ಲಾಗಿಗೆ...ವಾವ್..ಕ್ಯಾಲಿಫೋರ್ನಿಯಾದಲ್ಲಿದ್ದುಕೊಂಡೇ ದ್ವಶತಕದಂಚಿಗೆ ಬಂದಿದ್ದೀರಿ...ಅಭಿನಂದನೆಗಳು....ಹೂವು-ದುಂಬಿಗಳ ಬಂಧಾನುಬಂಧಗಳ ಸೊಗಸು ಚನಾಗಿದೆ...

    ಪ್ರತ್ಯುತ್ತರಅಳಿಸಿ
  2. ಮೂರ್ತಿಯವರೆ...

    ತುಂಬಾ ಚೆನ್ನಾಗಿ ಬರಿತಿರಿ...

    ಇಷ್ಟವಾಯಿತು...

    ಇಷ್ಟು ದಿನ ನೋಡಲೇ ಇಲ್ಲವಲ್ಲ ನಿಮ್ಮ ಬ್ಲಾಗನ್ನು...

    ಚಂದದ ಬ್ಲಾಗಿಗಾಗಿ ನಿಮ್ಮನ್ನೂ...
    ನಿಮ್ಮನ್ನು ಪರಿಚಯಿಸಿದ "ಪ್ರವೀಣನಿಗೂ" .. ಅಭಿನಂದಿಸುವೆ...

    ಪ್ರತ್ಯುತ್ತರಅಳಿಸಿ
  3. ಮೂರ್ತಿಯವರೇ;ಚಂದದ ಬರಹ.ನ್ನಿಮ್ಮ ಫಾಲೋಯರ್ ಆಗುವುದು ಹೇಗೆ?ಸೈನ್ ಇನ್ ಕಾಲಂ ಓಪನ್ ಮಾಡಿ .ನನ್ನ ಬ್ಲಾಗಿಗೂ ಭೇಟಿಕೊಡಿ.ನಮಸ್ಕಾರ.

    ಪ್ರತ್ಯುತ್ತರಅಳಿಸಿ