ಅನ್ವರ್ಥ ನಾಮಾವಳಿ
ಕೆ. ಆರ್. ಎಸ್. ಮೂರ್ತಿ
ಸಣ್ಣ ಕಣ್ಣಯ್ಯ
ಇವನಿಗೆ ಚೀನಯ್ಯ, ನಿಪ್ಪಾನಯ್ಯ, ಕೊರಿಯಯ್ಯ, ವಿಯೇಟ್ಟನಾಮಯ್ಯ ಇತ್ಯಾದಿ ಹೆಸರುಗಳುಂಟು.
"ಯ್ಯ" ಇರುವ ಕಡೆ "ಮ್ಮ: ಅಥವಾ "ಕ್ಕ" ಹಾಕಿಕೊಳ್ಳಿ.
ಅರ್ಧ ಕಾಲೇಶ್ವರ
ಒಬಾಮ ಒಬ್ಬ ಅರ್ಧ ಕಾಲೇಶ್ವರ.
ಕೆಂಪು ಕಂಠಯ್ಯ
ಟೆಕ್ಸಾಸಿನ ಗೌರವರ್ಣೀಯ ಒರಟನಿಗೆ ಕೊಟ್ಟ ಬಿರುದು
ಬಚ್ಚಲು ಬಾಯಿ
ಯಾವಾಗಲೂ ಇಂಗ್ಲೀಷಿನ ನಾಲ್ಕು ಅಕ್ಷರದ ಪದಗಳ ಅಷ್ಟೋತ್ತರ ಮಂತ್ರ ಬೊಗಳುವ ಕೊರಚನಿಗೆ ಈ ಹೆಸರನ್ನು ಕೊಡಬಹುದು
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಶುಕ್ರವಾರ, ಫೆಬ್ರವರಿ 4, 2011
ತುಂಟ ವ್ಯಾಲಂಟನ ದಿನ
ಕೆ. ಆರ್. ಎಸ. ಮೂರ್ತಿ
ಲಂಪಟ ತುಂಟ ವ್ಯಾಲಂಟ ಅಂತೂ ಮತ್ತೊಮ್ಮೆ ಬರಲಿರುವ
ಅಂಟಿಸಿ, ಜಂಟಿ ಕಟ್ಟಿ ಅವನ - ಅವಳ ಆಟವಾಡಿಸುವಲಿರುವ
ಹದಿನಾಕರಂದು ಚಂದಿರನ ಹಾಲು ಬೆಳದಿಂಗಳಿನ ಅಂಗಳದಲ್ಲಿ
ಜೇನಿನ ಹನಿಗಳು ತುಂತುರು ತುಂತುರಾಗಿ, ಮೂಡಿ ಆಗಸದಲ್ಲಿ
ಧರೆಗೆ ಧಾರೆ ಧಾರೆಯಾಗಿ ಇಳೆಯೆ, ನಾನೂ ನೀನೂ ನೆನೆಯುವ
ಬರಿ ಬೆತ್ತಲಲಿ ಮಿಲನದಲಿ ಮೀಯುವ ಮದನ ರತಿಯರಾಗುವ
ಬಾರಾ! ಮನದಣಿಯುವ ಮೈಮನಗಳ ಮರೆತು ಬೆರೆವ ಬಾರಾ!
ಒಬ್ಬರನ್ನೊಬ್ಬರ ಏರಿ ತಾರಾ ಮಂಡಲಗಳ ಅಲೆಯುವ ಬಾರಾ!
ತನುಗಳ ಸವಿಯುತ ಇಬ್ಬರೂ ಒಬ್ಬರನ್ನೊಬ್ಬರ ರುಚಿಸುವ ಬಾರಾ!
ಒಬ್ಬರ ಮನದಲಿ ಇನ್ನೊಬ್ಬರು ಹೊಕ್ಕು ಲೋಕಗಳ ರಚಿಸುವ ಬಾರಾ!

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)